ದಾವಣಗೆರೆಯಿಂದ ಬಂದ ಮನೆ ಮುಂದೆ ಬೈಕ್​ ನಿಲ್ಲಿಸಿ ಮಲಗಿದ್ದವನಿಗೆ ಕಾದಿತ್ತು ಶಾಕ್! ಮದ್ಯರಾತ್ರಿ ನಡೀತು ಘಟನೆ!

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA |  ಮನುಷ್ಯನೊಬ್ಬ ಯಾವ ಪ್ರಾಣಿಯ ಕಾಟವನ್ನಾದರು ಸಹಿಸಿಕೊಳ್ಳುತ್ತಾನೆ. ಅದರಿಂದ ಪಾರಾಗಿ ಹೊರಕ್ಕೆ ಬರುತ್ತಾನೆ. ಆದರೆ ಮನುಷ್ಯರಿಂದಲೇ ಆಗುವ ತೊಂದರೆಯಿಂದ ಹೊರಕ್ಕೆ ಬರಲಾರ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. 

READ : ಶಿವಮೊಗ್ಗ ಲೋಕಸಭಾ ಚುನಾವಣೆ | ಬೇಳೂರು ಗೋಪಾಲಕೃಷ್ಣ ಬಳಿಕ ನಾನು ಸಹ ಆಕಾಂಕ್ಷಿ ಎಂದ ಮತ್ತೊಬ್ಬ ಮುಖಂಡ

ದೂರುದಾರರು, ದಾವಣಗೆರೆಯಿಂದ ತಮ್ಮ ಕೆಲಸ ಮುಗಿಸಿಕೊಂಡು ಬಂದು, ಮನೆ ಹತ್ತಿರ ತಮ್ಮ ಬೈಕ್ ನಿಲ್ಲಿಸಿದ್ದರು. ಮಧ್ಯರಾತ್ರಿಯವರೆಗೂ ಬೈಕ್​ ಇದ್ದಲ್ಲಿಯೇ ಇರುವುದನ್ನ ಗಮನಿಸಿದ್ದಾರೆ. ಆದರೆ ಆನಂತರ ಬೈಕ್​ಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಬಿದ್ದಿದೆ. ಈ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಹೋಗಿ ನೋಡಿದರೆ ಬೈಕ್ ಸುಟ್ಟು ಕರಲಾಗಿತ್ತು. 

ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಬೈಕ್​ಗೆ ಬೆಂಕಿ ಬೀಳಲು ಸಾಧ್ಯವಿಲ್ಲ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯವೆಸಗಿದ್ದಾರೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬೈಕ್​ಗೆ ಬೆಂಕಿ ಇಟ್ಟ ಹಿಂದಿನ ದ್ವೇಷಕಾರರನ್ನು ಹುಡುಕಾಡುತ್ತಿದ್ದಾರೆ. 


Leave a Comment