ರವೀಂದ್ರ ನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಬ್ರ. ಅ.ಪ. ರಾಮಭಟ್ಟರವರು ಇನ್ನಿಲ್ಲ!

ಹಂಚಿಕೊಳ್ಳಿ
WhatsApp Facebook X Telegram

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ನಗರದ ಪ್ರತಿಷ್ಟಿತ ರವೀಂದ್ರ ನಗರದ ಗಣಪತಿ ದೇವಸ್ಥಾನದ ಅರ್ಚಕರು  ಅ.ಪ.ರಾಮಭಟ್ಟರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರನ್ನ ಇತ್ತೀಚೆಗೆ ಮಣಿಪಾಲ್​ನಲ್ಲಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲದಿನಗಳ ಹಿಂದೆ ಶಿವಮೊಗ್ಗದಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. 

ವಿವಿಧ ಸಾಮಾಜಿಕ ಚಟುವಟಿಕೆಗಳ ಜೊತೆ ಭಕ್ತವೃಂದದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಮಭಟ್ಟರು, ನಗರದ ಗಣ್ಯರ ಜೊತೆಗೂ ಉತ್ತಮ ಸಂಪರ್ಕ ಹೊಂದಿದ್ದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ದೇವಾಲಯವನ್ನು ಮುಖ್ಯ ಧಾರ್ಮಿಕ ಚಟುವಟಿಕೆಯ ಕೇಂದ್ರವಾಗಿಸುವುದರಲ್ಲಿ ಶ್ರಮಿಸಿದ್ದರು,  ಭಜನಾ ಪರಿಷತ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರ ಅಂತಿಮ ದರ್ಶನಕ್ಕೆ ಬಸವನಗುಡಿಯಲ್ಲಿರುವ ಅವರ  ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.  ವೇ.ಬ್ರ. ಅ.ಪ. ರಾಮಭಟ್ಟರಿಗೆ ಈ ಹಿಂಧೆ  ಶ್ರೀವೇದ ನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನಮಾಡಲಾಗಿತ್ತು.  

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor