ಶಿವಮೊಗ್ಗದಲ್ಲಿ ಸಿಲಿಂಡರ್​ ಸಿಗ್ತಿದ್ಯಾ? ಡಿಸಿ ಏನಂದ್ರು!? ಹೋಟೆಲ್​ನವರ ಕಥೆ ಏನು? ಇಲ್ಲಿದೆ ಮಾಹಿತಿ

LPG cylinders in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೋಟ್​ ಬ್ಯಾನ್​ ಲೈನ್​, ಕೊರೊನಾ ಲೈನ್​ ಬಳಿಕ ಇದೀ ಸಿಲಿಂಡರ್ ಲೈನ್​ ಶುರುವಾಗಿದೆ. ದೇಶದೆಲ್ಲೆಡೆ ಕಾಣುವಂತೆ ಶಿವಮೊಗ್ಗದಲ್ಲಿಯು ಗ್ಯಾಸ್ ಟ್ರಬಲ್ ಶುರುವಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಕೇವಲ ತುರ್ತು ಸೇವೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ನಿನ್ನೆಯಿಂದಲೇ ಕಮರ್ಶಿಯಲ್ ಸಿಲಿಂಡರ್ ಪೂರೈಕೆ ನಿಂತಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಹೋಟೆಲ್, ಬೇಕರಿ, ಕೆಟರಿಂಗ್ ಮತ್ತು ಪೇಯಿಂಗ್ ಗೆಸ್ಟ್ (ಪಿ.ಜಿ) ಸೇರಿದಂತೆ ಆಹಾರ ಉದ್ಯಮಕ್ಕೆ ಶಿವಮೊಗ್ಗದಲ್ಲಿಯ ತಲೆಬಿಸಿ ಶುರುವಾಗಿದೆ.

 supply of commercial LPG cylinders in Shivamogga has been restricted only to emergency services, causing severe distress to over 600 hotels, bakeries, and catering businesses in the district.
supply of commercial LPG cylinders in Shivamogga has been restricted only to emergency services, causing severe distress to over 600 hotels, bakeries, and catering businesses in the district.

ಶಿವಮೊಗ್ಗ: ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ; ಮೋದಿ-ಟ್ರಂಪ್ ಅಣಕು ಪ್ರದರ್ಶನ!

ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು, ರೈಲ್ವೆ ಮತ್ತು ರಕ್ಷಣಾ ಪಡೆಯಂತಹ ಅತ್ಯಗತ್ಯ ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಸಿಲಿಂಡರ್ ವಿತರಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಜ್ವಲಾ ಯೋಜನೆಯ ನೋಡಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ನೀಡಲಾದ 21229 ಸಂಪರ್ಕಗಳು ಸೇರಿದಂತೆ ಒಟ್ಟಾರೆ 205411 ಗೃಹ ಬಳಕೆಯ ಸಿಲಿಂಡರ್ ಸಂಪರ್ಕಗಳಿವೆ ಈ ಸಿಲಿಂಡರ್​ಗಳ ಪೂರೈಕೆಯಲ್ಲಿ ಇದುವರೆಗೂ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ಆದರೆ ವಾಣಿಜ್ಯ ಸಿಲಿಂಡರ್ ಇಲ್ಲದಿದ್ದರೇ ನಗರದಲ್ಲಿಯೇ 500 ಕ್ಕೂ ಹೆಚ್ಚು ಆಹಾರ ಉದ್ಯಮಗಳಿಗೆ ಸಮಸ್ಯೆಯಾಗಲಿದೆ..

ಗೃಹ ಬಳಕೆಗೆ ಯಾವುದೇ ಸಮಸ್ಯೆಯಿಲ್ಲ, ಆದರೆ ವಾಣಿಜ್ಯ ಬಳಕೆಯಲ್ಲಿ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳ ಬೇಡಿಕೆಯನ್ನು ಹೊರತುಪಡಿಸಿ ಉಳಿದೆಡೆ ಪೂರೈಕೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು

ಡಿಸಿ ಪ್ರಭುಲಿಂಗ ಕವಳಿಕಟ್ಟಿ

 supply of commercial LPG cylinders in Shivamogga has been restricted only to emergency services, causing severe distress to over 600 hotels, bakeries, and catering businesses in the district.
supply of commercial LPG cylinders in Shivamogga has been restricted only to emergency services, causing severe distress to over 600 hotels, bakeries, and catering businesses in the district.

ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎಂ. ಗೋಪಿನಾಥ್, ಪ್ರಸ್ತುತ ಡೀಲರ್‌ಗಳು ತಮ್ಮ ಬಳಿ ಉಳಿದಿರುವ ಸ್ಟಾಕ್ ಅನ್ನು ಮಾತ್ರ ನೀಡುತ್ತಿದ್ದಾರೆ. ಈ ಪೂರೈಕೆಯೂ ಯಾವಾಗ ನಿಲ್ಲುತ್ತದೆಯೋ ತಿಳಿದಿಲ್ಲ. ಈ ವಿಚಾರವಾಗಿ ಚರ್ಚಿಸಲು ಬುಧವಾರ ಸಂಘದ ತುರ್ತು ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

supply of commercial LPG cylinders in Shivamogga has been restricted only to emergency services, causing severe distress to over 600 hotels, bakeries, and catering businesses in the district.