ಶಿವಮೊಗ್ಗ sSlC ವಿದ್ಯಾರ್ಥಿ ಹ#ತ್ಯೆ! ನಡೆದಿದ್ದೇನು? ಎಸ್​ಪಿ ಹೇಳಿದ್ದೇನು? MLA ಆಕ್ರೋಶ ಏಕೆ? ಪೂರ್ತಿ ಮಾಹಿತಿ

ಶಿವಮೊಗ್ಗ ನಗರದ ಹೊರವಲಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬನನ್ನು ಅಪ್ರಾಪ್ತ ಬಾಲಕರ ಗುಂಪೊಂದು ಹತ್ಯೆ ಮಾಡಿದೆ.ಈ ಘಟನೆ ಬೆನ್ನಲ್ಲೆ ನಿನ್ನೆ ರಾತ್ರಿಯೇ ಸಾಕಷ್ಟು ಬೆಳವಣಿಗೆ ನಡೆದಿದ್ದು, ಸ್ಥಳಕ್ಕೆ ಹಾಗೂ ಶವಾಗಾರಕ್ಕೆ ಎಸ್​ಪಿ ನಿಖಿಲ್ ಬಿ ಹಾಗೂ ಶಾಸಕ ಎಸ್​ಎನ್​ ಚನ್ನಬಸಪ್ಪರವರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

SSLC Student Murder in ShivamoggPolice Detain
SSLC Student Murder in ShivamoggPolice Detain

ಇಲ್ಲಿನ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯು, ತನ್ನ ಶಾಲೆಯಲ್ಲಿನ ಸ್ಪೆಷಲ್​ ಕ್ಲಾಸ್ ಮುಗಿಸಿ ಮನೆಗೆ ಹೋಗುತ್ತಿದ್ದ. ಈ ವೇಳೇ ದಾರಿಯಲ್ಲಿ ಐದಾರು ಬಾಲಕರ ಗುಂಪು ಈತನ ಮೇಲೆ ಹಲ್ಲೆ ನಡೆಸಿದೆ. ಮೂಲಗಳ ಪ್ರಕಾರ, ಅಲ್ಲಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಬಾಲಕನ ಮೇಲೆ ಹಲ್ಲೆಯಾಗಿದೆ. ಈ ವೇಳೆ ಗಂಭೀರವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಾಲಕ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ.  ಕೃತ್ಯ ಎಸಗಿದವರು ಸಹ ಬಾಲಕ ಓದುತ್ತಿರುವ ಶಾಲೆಯ ಡ್ರಾಪ್ ಔಟ್ ವಿದ್ಯಾರ್ಥಿಗಳು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಪಿ ನಿಖಿಲ್ ಬಿ ಸ್ಪೆಷಲ್​ ಕ್ಲಾಸ್ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಯಾಗಿದೆ. ಹಲ್ಲೆಯಿಂದ ಅಸ್ವಸ್ಥಗೊಂಡ ಬಾಲಕ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ, ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿಯಿಂದ ಪೊಲೀಸರು ಈಗಾಗಲೇ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಸ್ತುತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಭರವಸೆ ನೀಡಿದ್ದಾರೆ.

SSLC Student Murder in ShivamoggPolice Detain
SSLC Student Murder in ShivamoggPolice Detain

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ

ವಿದ್ಯಾರ್ಥಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೆಗ್ಗಾನ್ ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು ಬಾಲಕನ ಹತ್ಯೆ ಅತ್ಯಂತ ನೋವಿನ ಸಂಗತಿ. ಹಿಂದೂಗಳ ಹತ್ಯೆ ನಡೆದಾಗ ಅವರ ಹೆಣ ಹೊರಲು ಪೊಲೀಸರು ಬರುತ್ತಾರೆ. ಹಬ್ಬಗಳ ಸಮಯದಲ್ಲಿ ಕಿಡಿಗೇಡಿಗಳು ಬೈಕ್‌ನಲ್ಲಿ ಗುಂಪು ಗುಂಪಾಗಿ ಬಂದು ದಾಂಧಲೆ ಮಾಡುತ್ತಿದ್ದರೂ ಪೊಲೀಸರು ಲಘುವಾಗಿ ಪರಿಗಣಿಸುತ್ತಿದ್ದಾರೆ. ಕೇವಲ ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ಸಿದ್ಧ ಉತ್ತರ ನೀಡಿದರೆ ಹೋದ ಜೀವ ಮರಳಿ ಬರುತ್ತದೆಯೇ?” ಎಂದು ಅವರು ಪ್ರಶ್ನಿಸಿದರು

ವಿಶೇಷ ಸೂಚನೆ: ಇಲ್ಲಿರುವ ಮಾಹಿತಿ ಕೇವಲ ವಿಷಯ ತಿಳಿಸುವ ಉದ್ದೇಶದಡಿ ಹಾಗೂ ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ನೀಡಿರುವ ವಿವರದ ಆಧಾರದ ಅಡಿಯಲ್ಲಿ ನೀಡಲಾಗಿದೆ. ಅಪ್ರಾಪ್ತರ ಪ್ರಕರಣದಲ್ಲಿ ಯಾವುದೇ ವೈಯಕ್ತಿಕ ವಿವರ ಹಾಗೂ ಹಾಗೂ ಹೆಸರುಗಳನ್ನು ಇಲ್ಲಿ ಬಳಸಲಾಗಿಲ್ಲ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

SSLC Student Murder in ShivamoggPolice Detain ವಿಶೇಷ ತರಗತಿ ಮುಗಿಸಿ ಮರಳುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಪ್ರಕರಣದ ಕುರಿತು ಎಸ್ಪಿ ನಿಖಿಲ್ ಮತ್ತು ಶಾಸಕ ಚನ್ನಬಸಪ್ಪ ಅವರ ಪ್ರತಿಕ್ರಿಯೆ ಹಾಗೂ ಇತ್ತೀಚಿನ ಅಪ್‌ಡೇಟ್‌ಗಳು ಇಲ್ಲಿವೆ.