SHIVAMOGGA NEWS TODAY

ಸೊರಬ: ಚಾಲಕನನ್ನ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ; ಐವರ ವಿರುದ್ಧ ಎಫ್‌ಐಆರ್ ದಾಖಲು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಸೊರಬ: ಕೆಲಸದ ವಿಚಾರವಾಗಿ ಉಂಟಾದ ಹಳೆಯ ಕಿರಿಕಿರಿ ಹಿನ್ನೆಲೆಯಲ್ಲಿ ಚಾಲಕನೋರ್ವನನ್ನು ಕಂಬಕ್ಕೆ ಕಟ್ಟಿ ಹಾಕಿ ರಾಡ್ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ ಘಟನೆ ಸೊರಬ ಪಟ್ಟಣದ ಮೀನು ಮಾರುಕಟ್ಟೆ ಬಳಿ ನಡೆದಿದೆ. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆಗೆ ಭರ್ಜರಿ ಸಿದ್ಧತೆ; ಮಾರಿಗದ್ದುಗೆಗೆ ಎಸ್‌.ಪಿ ನಿಖಿಲ್ ಬಿ ಭೇಟಿ.

ಘಟನೆಯ ವಿವರ

ಫೆ 16 ರಂದು ರಾತ್ರಿ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಚಾಲಕ ರಾಣೇಬೆನ್ನೂರಿಗೆ ತೆರಳಿ ಕೋಳಿಗಳನ್ನು ತುಂಬಿಕೊಂಡು ವಾಪಾಸ್ ಬಂದಿದ್ದರು. ಫೆಬ್ರವರಿ 17ರ ಮುಂಜಾನೆ 4:30ರ ಸುಮಾರಿಗೆ ಸೊರಬದ ಮೀನು ಮಾರುಕಟ್ಟೆ ಬಳಿ ವಾಹನ ನಿಲ್ಲಿಸಿ ಕೋಳಿ ಟ್ರೇಗಳ ಹಗ್ಗ ಬಿಚ್ಚುತ್ತಿದ್ದಾಗ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. 

ನಾನು ಹೋಗುತ್ತಿದ್ದ ಕೆಲಸಕ್ಕೆ ನೀನು ಏಕೆ ಹೋದೆ  ಎಂದು ಆರೋಪಿಯೊಬ್ಬ ಗಲಾಟೆ ಆರಂಭಿಸಿದ್ದಾನೆ. ನಂತರ ಇನ್ನಿತರೇ 5 ಜನ ಆರೋಪಿಗಳು ಸೇರಿ ಚಾಲಕನನ್ನು ಮಾರುಕಟ್ಟೆಯ ಕಾಂಪೌಂಡ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಡ್, ಕೋಲಿನಿಂದ ಹಲ್ಲೆ; ಜೀವ ಬೆದರಿಕೆ

ಆರೋಪಿಗಳು ಚಾಲಕನಿಗೆ  ಕೋಲಿನಿಂದ ಹಾಗೂ ರಾಡ್​ನಿಂದ  ತಲೆ ಹಾಗೂ ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದಾರೆ. ಗಲಾಟೆ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳಿಯರು =ಜಗಳ ಬಿಡಿಸಿ, ಚಾಲಕನನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೋಗುವ ಮುನ್ನ ಆರೋಪಿಗಳು ಇನ್ನೊಮ್ಮೆ ಡ್ರೈವಿಂಗ್ ಕೆಲಸಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಗಾಯಾಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಸೊರಬ ಪೊಲೀಸರು ಐವರು ಆರೋಪಿಗಳ ಮೇಲೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Soraba Driver Tied to Pole and Brutally Attacked

Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Soraba
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.