sigandur accident : ಜುಲೈ 04,  ಮರಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ : ವಾಹನದ ಮುಂಬಾಗ ಸಂಪೂರ್ಣ ಜಖಂ

sigandur accident :  ಮರಕ್ಕೆ ಡಿಕ್ಕಿ ಹೊಡೆದ ಟಿಟಿ ವಾಹನ : ವಾಹನದ ಮುಂಬಾಗ ಸಂಪೂರ್ಣ ಜಖಂ

ಶಿವಮೊಗ್ಗ: ಇಂದು ಮುಂಜಾನೆ ಕುಂಸಿ ಮತ್ತು ಚಿಕ್ಕದಾನವಂದಿ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. 

ಬೆಂಗಳೂರಿನ ದೇವನಹಳ್ಳಿಯ ನಿವಾಸಿಗಳಾಗಿದ್ದ ಪ್ರಯಾಣಿಕರು ಸಿಗಂದೂರಿಗೆ ತೆರಳುತ್ತಿದ್ದರು. ಮುಂಜಾನೆ ಸುಮಾರು 5:30ರ ಸುಮಾರಿಗೆ ಕುಂಸಿ – ಚಿಕ್ಕದಾನವಂದಿ ಗ್ರಾಮದ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಯೊಂದು ಅಡ್ಡ ಬಂದಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ, ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ.

ಘಟನೆಯಿಂದ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಟಿಟಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನದ ಮುಂಬಾಗ ಸಂಪೂರ್ಣ ಜಖಂ
ವಾಹನದ ಮುಂಬಾಗ ಸಂಪೂರ್ಣ ಜಖಂ

 

Leave a Comment