ನಡೆದಾಡುವ ದೇವರು ಇನ್ನಿಲ್ಲ/ಸಿದ್ದೇಶ್ವರ ಶ್ರೀಗಳ ನೆನೆದು ಪ್ರಧಾನಿ ಸಂತಾಪ/ ವಿಜಯಪುರದಲ್ಲಿ ಭಕ್ತ ಸಾಗರ

ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಶ್ರೀಗಳು ಹಾಗೂ ನಡೆದಾಡುವ ದೇವರೆಂದೆ ಹೆಸರುವಾಸಿಯಾಗಿದ್ದ ಸಿದ್ದೇಶ್ವರ ಶ್ರೀಗಳು (82) ನಿನ್ನೆ  ಸೋಮವಾರ (ಜನವರಿ 02) ಇಹಲೋಕ ತ್ಯಜಿಸಿದ್ದಾರೆ.

ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಇವತ್ತು ವಿಜಯಪುರದತ್ತ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಪೆಟ್ರೋಲ್​​ ಬಂಕ್​ಗಳಲ್ಲಿ ಹಾಗು ಆಯಕಟ್ಟಿನ ಸ್ಥಳಗಳಲ್ಲಿ ಆಹಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು

ವಿಜಯಪುರಕ್ಕೆ ಸಿಎಂ ದೌಡು

ಮತ್ತೊಂದೆಡೆ ಶ್ರೀಗಳ ದರ್ಶನ ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ.  ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಜನವರಿ 03 ರಂದು ಮಂಗಳವಾರ ರಜೆಯನ್ನು ಘೋಷಿಸಲಾಗಿದೆ.ಸೈನಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದ್ದು,  ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಅಂತ್ಯಕ್ರಿಯೆ ಜರುಗಲಿದೆ

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ಪೂರ್ವಾಶ್ರಮ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ 1941ರ ಅಕ್ಟೋಬರ್ 24 ರಂದು ಸಿದ್ದೇಶ್ವರ ಶ್ರೀಗಳು ಜನಿಸಿದ್ದರು.  ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ 4 ನೇ ತರಗತಿವರೆಗೆ ಓದಿದ ನಂತರ ಅವರು ವೇದಾಂತ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳ ಅವರನ್ನು ಆಶ್ರಯಿಸಿದರು.

ಇವರ ಚುರುಕುತನವನ್ನು ಗುರುತಿಸಿದ ಹಿರಿಯ ಶ್ರೀಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು.ಹೀಗೇ ಆದ್ಯಾತ್ಮದ ಒಡೆನಾಟದಲ್ಲಿ ಸಾಗಿ ಬಂದ ಸಿದ್ದೇಶ್ವರ ಶ್ರೀಗಳು ಭಕ್ತರ ಬಾಯಲ್ಲಿ ನಡೆದಾಡುವ ದೇವೆರೆಂದೇ ಪ್ರಖ್ಯಾತರಾಗಿದ್ದರು, ಸರಳ ವ್ಯಕ್ತಿತ್ವದ ಬದುಕಿನ ಪಾಠವನ್ನು ಅವರ ಬೋದಿಸುತ್ತಿದ್ದರು.

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಪ್ರಧಾನಿ ನರೇಂದ್ರ ಮೋದಿ ಸಂತಾಪ

ಇನ್ನೂ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿದ್ದೇಶ್ವರ ಶ್ರೀಗಳ ಜೊತೆಗೆ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ,  ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಕಳೆದ ವರ್ಷ ಕಾರ್ಯಕ್ರಮದಲ್ಲಿ

ಈ ಹಿಂದಿನ ವರ್ಷ ಜೂನ್​ನಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳೊಂದಿಗೆ ಪಾಲ್ಗೊಂಡಿದ್ದರು. ಈ ವೇಳೇ ಸಿದ್ದೇಶ್ವರ ಶ್ರೀಗಳನ್ನು ಕಂಡು ನಮಿಸಿ ಅವರ ಆಶೀರ್ವಾದ ಪಡೆದಿದ್ದರು ಮೋದಿ, ಇನ್ನೂ ಸಿದ್ದೇಶ್ವರ ಶ್ರೀಗಳು  ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. 

ಇದನ್ನು ಓದಿ : Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಏನಾಗಿತ್ತು ಶ್ರೀಗಳಿಗೆ

ಕಳೆದೊಂದು ವಾರದಿಂದ ಅನಾರೋಗ್ಯಕ್ಕಿಡಾಗಿದ್ದ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು. ಅನಾರೋಗ್ಯಕ್ಕೆ ತುತ್ತಾದ ಬೆನ್ನಲ್ಲೆ ಒಮ್ಮೆ ಅವರ ಆರೋಗ್ಯ ಚೇತರಿಕೆ ಕಂಡುಬಂದಿತ್ತು. ಇನ್ನೂ ಅವರು ಕ್ಷೇಮವಾಗಿ ಹೊರಬರಲಿ ಎಂದು ಭಕ್ತಗಣ ಪ್ರಾರ್ಥನೆ ಸಲ್ಲಿಸಿತ್ತು. ಆದರೆ ವೈಕುಂಠ ಏಕಾದಶಿಯ ದಿನ ಅವರು ಇಹಲೋಕ ತ್ಯಜಿಸಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Leave a Comment