Siddapura Murder Case update ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿದ್ದು, ಚಾಕು ಇರಿತದಿಂದ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ತಮ್ಮ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಡೆದ ಘಟನೆ ಬಗ್ಗೆ ಮಾತನಾಡಿರುವ ಸಂತ್ರಸ್ತ ಮಹೇಶ್ ತನ್ನ ಪತ್ನಿ ಕರೆತಂದಿದ್ದ ಹುಡುಗರು ಕಾರಿನಿಂದ ಚಾಕು ತಂದು ಏಕಾಏಕಿ ದಾಳಿ ನಡೆಸಿದ್ದಾರೆ. ಮಗಳನ್ನು ತನಗೆ ಕೊಡು ಎಂದು ಹೇಳಿ ಪತ್ನಿಯೇ ಚಾಕು ಹಾಕಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
ಮೆಗ್ಗಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಾತನಾಡುತ್ತಾ, ತಮಗೆ ಮದುವೆಯಾಗಿ ಕಳೆದ 15 ವರ್ಷಗಳಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆರಂಭದಲ್ಲಿ ಸಂಸಾರ ಸುಗಮವಾಗಿಯೇ ಸಾಗಿತ್ತು. ತಾನು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದು, 2 ಅಥವಾ 3 ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದೆ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ತಾನು ಊರಿನಲ್ಲಿ ಇಲ್ಲದ ಸಮಯದಲ್ಲಿ ಪತ್ನಿ ದಾರಿ ತಪ್ಪಿ ನಡೆದಿದ್ದಾಳೆ ಎಂದು ಮಹೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮಕ್ಕಳು ಶಾಲೆಗೆ ಹೋದ ಸಮಯದಲ್ಲಿ ಪತ್ನಿಯು ಯಾರ್ಯಾರನ್ನೋ ಮನೆಗೆ ಕರೆಸಿಕೊಳ್ಳುತ್ತಿದ್ದಳು ಮತ್ತು ಫೇಸ್‌ಬುಕ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಈ ವಿಷಯ ತಮಗೆ ತಿಳಿದಾಗ ಗಲಾಟೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಕಳೆದ 5 ತಿಂಗಳಿಂದ ತಮ್ಮ ಪತ್ನಿ ತನ್ನನ್ನು ಬಿಟ್ಟು ಓರ್ವ ಸ್ವಾಮೀಜಿಯ ಜೊತೆ ಸಂಸಾರ ನಡೆಸುತ್ತಿದ್ದಾಳೆ ಎಂದು ಮಹೇಶ್ ಆರೋಪಿಸಿದ್ದು, ಆ ಸ್ವಾಮೀಜಿ ಯಾರೆಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅವಳ ಸಹವಾಸವೇ ಬೇಡವೆಂದು ತಾನು ಸುಮ್ಮನಿದ್ದೆ. ಆದರೆ ತನ್ನ ಹಿರಿಯ ಮಗಳು ಕರೆ ಮಾಡಿ, ತಾಯಿ ತನಗೆ ವಿಪರೀತ ಹಿಂಸೆ ನೀಡುತ್ತಿದ್ದಾಳೆ, ಬಂದು ಕರೆದುಕೊಂಡು ಹೋಗದಿದ್ದರೆ ಪ್ರಾಣ ಕಳೆದುಕೊಳ್ಳುವುದಾಗಿ ಅಳಲು ತೋಡಿಕೊಂಡಳು. ಇದೆ ಕಾರಣಕ್ಕಾಗಿ ಮಗಳ ರಕ್ಷಣೆಗೆ ತಾನು ಮುಂದಾಗಿದ್ದೆ. ಈ ಕಾರಣಕ್ಕೆ ಗಲಾಟೆ ನಡೆದಿದೆ ಎಂದ ಅವರು. ನಿನ್ನೆ ರಾತ್ರಿ ತಮ್ಮ ಪತ್ನಿ ಶಿವಮೊಗ್ಗದಿಂದ ಆಕೆಯ ತಂದೆ ಹಾಗೂ ಇತರೆ 4 ಜನರೊಂದಿಗೆ ಕಾರಿನಲ್ಲಿ ಬಂದು ಗಲಾಟೆ ತೆಗೆದಿದ್ದಾರೆ. ಮಗಳನ್ನು ತಮಗೆ ಒಪ್ಪಿಸುವಂತೆ ಕೇಳಿದರು. ಇದಕ್ಕೆ ಒಪ್ಪದಿದ್ದಾಗ, ರೌಡಿಗಳ ರೀತಿಯಲ್ಲಿ ವರ್ತಿಸಿ ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿವರಿಸಿದ್ದಾರೆ.

ತನ್ನ ಪತ್ನಿ ಕರೆತಂದಿದ್ದ ವ್ಯಕ್ತಿಗಳು ಕಾರಿನಿಂದ ಚಾಕು ತಂದು ಏಕಾಏಕಿ ದಾಳಿ ನಡೆಸಿದ್ದಾರೆ. ಮಗಳನ್ನು ತನಗೆ ಕೊಡು ಎಂದು ಹೇಳಿ ಪತ್ನಿಯೇ ಚಾಕು ಹಾಕಿಸಿದ್ದಾಳೆ ಎಂದು ಮಹೇಶ್ ಗಂಭೀರವಾಗಿ ಆರೋಪಿಸಿದ್ದಾರೆ. ಈ ಹಲ್ಲೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ತಮ್ಮ ಅಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಹೇಶ್ ಕಣ್ಣೀರು ಹಾಕಿದ್ದಾರೆ. ಹಲ್ಲೆಕೋರರು ತನ್ನನ್ನೂ ಕೊಲೆ ಮಾಡಲು ಮುಂದಾಗಿದ್ದರು, ಆದರೆ ತಾನು ಅವರೇಟಿನಿಂದ ತಪ್ಪಿಸಿಕೊಂಡು ಜಾಡಿಸಿ ಒದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಈ ಘಟನೆಯಲ್ಲಿ ಕುಮಾರ್ ಎಂಬುವವರಿಗೂ ಸಹ ಗಾಯಗಳಾಗಿವೆ. ತನ್ನಿಂದಾಗಿ ತನ್ನ ಸಹೋದರನ ಕೊಲೆಯಾಗಿದ್ದು, ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಹೇಶ್ ಮನವಿ ಮಾಡಿದ್ದಾರೆ
ಏನಿದು ಘಟನೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಿನ್ನೆ ದಿನ ಅಂದರೆ, ಫೆಬ್ರವರಿ 2 ನೇ ತಾರೀಖು ಜ್ಯೋತಿಷಿ ಕಮಲಾಕರ್ ಭ….!, ಸುಚಿತ್ರಾ ಮತ್ತು ಆಕೆಯ ತಂದೆ ಲೋಕನಾಥ್ ಚೌಳಪ್ಪ ಸೇರಿದಂತೆ ಏಳು ಮಂದಿ ಆರೋಪಿಗಳು ವಸಂತ್ ನಾಯ್ಕ್ (43) ಮೃತಪಟ್ಟಿದ್ದು, ಮಹೇಶ್ ನಾಯ್ಕ್ (37) ಮತ್ತು ಕುಮಾರ್ (35) ಎಂಬವರ ಮೇಲೆ ಚಾಕುವಿನಿಂದ ಇರಿದಿದ್ಧಾರೆ. ಈ ಪೈಕಿ ವಸಂತ್ ನಾಯ್ಕ್ ಸಾವನ್ನಪ್ಪಿದ್ದಾರೆ.ಈ ವಿಚಾರವಾಗಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಮಹೇಶ್ ನಾಯ್ಕ್ ಹಾಗೂ ಸುಚಿತ್ರಾ ದಂಪತಿಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಸುಚಿತ್ರಾ ಜೊತೆ ಜ್ಯೋತಿಷಿಯ ಮನೆಯಲ್ಲಿದ್ದರು ಎನ್ನಲಾಗಿದೆ. ಇನ್ನೂ ಮಕ್ಕಳಿಗೆ ತಮ್ಮ ತಂದೆ ಬಳಿ ಹೋಗುವಂತೆ ಸುಚಿತ್ರಾ ಹಾಗೂ ಜ್ಯೋತಿಷ ಬೆದರಿಕೆ ಹಾಕಿದ್ದರಂತೆ. ಈ ಕಾರಣಕ್ಕೆ ಇಬ್ಬರ ಪೈಕಿ ಓರ್ವ ಮಗಳು, ತಂದೆಗೆ ಮೆಸೇಜ್ ಹಾಕಿ ರಕ್ಷಿಸುವಂತೆ ಕೇಳಿದ್ದಾಳೆ. ಈ ಕಾರಣಕ್ಕೆ ಮಹೇಶ್ ನಾಯ್ಕ್ ತಮ್ಮ ಅಣ್ಣ ಹಾಗೂ ತಮ್ಮ ನೆರೆಮನೆಯವರ ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆನಂತರ ಪೊಲೀಸರು ಮಕ್ಕಳನ್ನ ಕೌನ್ಸಿಲಿಂಗ್ ಮಾಡಿ, ಅವರ ತಂದೆಯ ಅಣ್ಣನ ಸುಪದ್ರಿಗೆ ನೀಡಿದ್ದರು. ಈ ಮಧ್ಯೆ ನಿನ್ನೆ ಮನೆಯ ಬಳಿ ಗಲಾಟೆ ಮಾಡಿದ ಆರೋಪಿಗಳು ಚಾಕುವಿನಿಂದ ಚುಚ್ಚಿದ್ದಾರೆ. ಈ ಘಟನೆಯಲ್ಲಿ ಮಹೇಶ್ ಪಾರಾಗಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? ಪಟ್ಟಿ ಇಲ್ಲಿದೆ
ಸಿದ್ದಾಪುರ ಕೊಲೆ ಕೇಸ್: ಪತ್ನಿಯೇ ಗಂಡನಿಗೆ ಚಾಕು ಹಾಕಿಸಿದ್ಲು? ಮೆಗ್ಗಾನ್ ಆಸ್ಪತ್ರೆಯಿಂದ ಪತಿ ಹೇಳಿಕೆ Siddapura Murder Case Husband Mahesh Blames Wife’s Illicit Affair for Brothers Death

