ಮಕ್ಕಳಿಗೆ ಯಕ್ಷಗಾನ, ಸಂಗೀತ, ಕರಾಟೆ , ಡ್ಯಾನ್ಸ್ ಕಲಿಸಬೇಕೆ? ಇಲ್ಲಿದೆ ನೋಡಿ ಅದ್ಭುತ ಅವಕಾಶ!!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ  ಶಿವಮೊಗ್ಗ  ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  2023-24ನೇ ಸಾಲಿನಲ್ಲಿ ಜಿಲ್ಲಾ ಬಾಲ ಭವನ ಸಮಿತಿ ಸಹಯೋಗದೊಂದಿಗೆ ಬೇಸಿಗೆ ಶಿಬಿರ  ವನ್ನು ಆಯೋಜಿಸಲಾಗುತ್ತಿದೆ. 

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಯಾವಾಗ ಇರೋದು?

5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ನಗರದ ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮೇ 02 ರಿಂದ 18 ರವರೆಗೆ  15 ದಿನಗಳ ಬೇಸಿಗೆ ಶಿಬಿರ ಆಯೋಜಿಸಿದೆ.

ಏನೇನು ಕಲಿಸುತ್ತಾರೆ? 

ಶಿಬಿರದಲ್ಲಿ ಚಿತ್ರಕಲೆ, ಕರಕುಶಲತೆ, ಸಮೂಹ ಸಂಗೀತ, ಸಮೂಹ ನೃತ್ಯ, ಯಕ್ಷಗಾನ ಹಾಗೂ ಕರಾಟೆಯನ್ನು ಕಲಿಸಿಕೊಡಲಾಗುವುದು.

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 

ಸರ್ಕಾರಿ ಶಾಲಾ ಮಕ್ಕಳು/ ಶಾಲಾ ಮಕ್ಕಳು/ ಆರ್ಥಿಕವಾಗಿ ಹಿಂದುಳಿದ ಮಕ್ಕಳು/ ವಿಶೇಷ ಆದ್ಯತೆಯುಳ್ಳ ಬಾಲ ಮಂದಿರದ ಮಕ್ಕಳು/ ವಿಕಲಚೇತನ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗಿde

ಮಕ್ಕಳು ಈ ಶಿಬಿರದ ಸದುಪಯೋಗ ಪಡೆಯುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಯಾರನ್ನ ಸಂಪರ್ಕಿಸಬೇಕು

ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ, ಆಲ್ಕೊಳ ಶಿವಮೊಗ್ಗ  ದೂ.ಸಂ.: 08182-295514 ಇಲ್ಲಿ ಸಂಪರ್ಕಿಸುವುದು.

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor