shivamogga news 02-06-2025 : ಮದುವೆಗೆ ತೆರಳಿ ವಾಪಸ್​ ಬಂದವರಿಗೆ ಕಾದಿತ್ತು ಶಾಕ್ | ನಡೆದಿದ್ದೇನು​

ಕೊನೆಯ ನವೀಕರಣ: 02 ಜೂನ್ 2025, 5:09 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Shivamogga finance harassment Road accident
Shivamogga finance harassment Road accident

shivamogga news ಕಳ್ಳರು ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಬಂಗಾರವನ್ನು ದೋಚಿರುವ ಘಟನೆ  ಅಣ್ಣಾನಗರದ ನಿವಾಸಿ ನಝೀಮಾ ಬಾನು ಎಂಬುವವರ ಮನೆಯಲ್ಲಿ ನಡೆದಿದೆ.

shivamogga news ಹೇಗಾಯ್ತು ಘಟನೆ

ಮೇ 25 ರಂದು ಅಣ್ಣಾನಗರದ ನಿವಾಸಿ ನಝೀಮ ಬಾನು ಕುಟುಂಬ ಸಮೇತರಾಗಿ ಅಕ್ಕನ ಮನೆಗೆ ಮದುವೆಗೆಂದು ತೆರಳಿದ್ದರು. ಆದಿನ ಯಾರೋ ಕಳ್ಳರು ನಝೀಮ  ಬಾನು ಮನೆಗೆ ನುಗ್ಗಿ ಬಾಗಿಲಿನ ಬೀಗವನ್ನು ಒಡೆದಿದ್ದಾರೆ. ಹಾಗೆಯೇ ಬೀರುವಿನಲ್ಲಿದ್ದ ಮಾಂಗಲ್ಯ ಸರ, ಕಿವಿ ಒಲೆ, ಉಂಗುರ ಸೇರಿದಂತೆ  ಒಟ್ಟು 60 ಗ್ರಾಂ ತೂಕದ 1ಲಕ್ಷ 20 ಸಾವಿರ ಮೌಲ್ಯದ ಬಂಗಾರವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರನೇ ದಿನ ಮನೆಗೆ ಬಂದು ನೋಡಿದಾಗ ನಝೀಮಾಗೆ ಕಳ್ಳತನವಾಗಿರುವುದು ತಿಳಿದಿದ್ದು, ತಕ್ಷಣ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor