Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
Shivamogga news june 25
Shivamogga news june 25

ಸಾಗರ ಗ್ರಾಮಾಂತರ ಭಾಗದಲ್ಲಿ ಭೀಕರ ಅಪಘಾತ: ಓಮಿನಿ ಕಾರಿನಲ್ಲಿದ್ದವರಿಗೆ ಗಾಯ,  

Shivamogga news sagara / ಜೂನ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಓಮಿನಿ ವಾಹನದ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ 112 ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಘಟನೆಯಲ್ಲಿ ERV (Emergency Response Vehicle) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಓಮಿನಿ ಕಾರಿನಲ್ಲಿದ್ದವರನ್ನು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ, ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.  ಘಟನೆಯ ಸಂಬಂಧ  ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ಪಡೆದು ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರಗಳು ತನಿಖೆಯ ನಂತರ ಹೊರಬೀಳುವ ಸಾಧ್ಯತೆಯಿದೆ.

Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

Car Accident in Sagar Rural: Omni Passengers Injured, 112 Call Made

ತುಂಗಾನಗರದಲ್ಲಿ ಬೀಗ ಹಾಕಿದ ಮನೆಗೆ ಕನ್ನ: ಊರಿಗೆ ಹೋಗಿದ್ದಾಗ ಕಳ್ಳರ ಕೈಚಳಕ Shivamogga news june 25 

Shivamogga news tunga nagara : ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. 2025ರ ಜೂನ್ 23ರಂದು, ಮನೆಯ ಮಾಲೀಕರು ಊರಿಗೆ ತೆರಳಿದ್ದಾಗ ಅವರ ಮನೆಯಲ್ಲಿ ಕಳ್ಳತನವಾಗಿದೆ. ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸರು ದೂರುದಾರರಿಂದ ಕಳುವಾದ ವಸ್ತುಗಳು ಮತ್ತು ಘಟನೆಗೆ ಸಂಬಂಧಿಸಿದ ಇತರ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ತುಂಗಾನಗರ ಪೊಲೀಸ್​ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Shivamogga: House Theft Reported in Tunganagar Police Station Limits, ERV Responds

Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

ಪೇಪರ್ ಟೌನ್ ಬೈಪಾಸ್ ಬಳಿ ಹಿಟ್ ಅಂಡ್ ರನ್: ಕಾರ್ ಡಿಕ್ಕಿ, ಬೈಕ್ ಸವಾರರಿಗೆ ಗಾಯ, ತನಿಖೆ ಶುರು Shivamogga news june 25 

Shivamogga news paper town bhadravati : ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ಬಳಿ 2025ರ ಜೂನ್ 23ರಂದು  ಹಿಟ್ ಅಂಡ್ ರನ್ ಅಪಘಾತ ಪ್ರಕರಣ ಬೆಳಕಿಗೆ ಬಂದಿದೆ. ಕಾರೊಂದನ್ನು ಬೈಕ್‌ಗೆ ಡಿಕ್ಕಿ ಹೊಡೆಸಿ, ವಾಹನ ನಿಲ್ಲಿಸದೇ  ಚಾಲಕ ಕಾರಿನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ  ಸಾರ್ವಜನಿಕರೊಬ್ಬರು ತಕ್ಷಣವೇ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು  ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಒದಿಗಸಿದ್ದು, ಪ್ರಕರಣ ಠಾಣೆಗೆ ವರ್ಗಾಯಿಸಿದ್ದಾರೆ. 

Shivamogga: Hit and Run Case Reported in Paper Town, Bike Riders Injured

Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

ಮಾಳೂರಿನ ಹೋಟೆಲ್‌ನಲ್ಲಿ ಊಟದ ವಿಚಾರಕ್ಕೆ ಜಗಳ: ಪೊಲೀಸರು ಬರುವಷ್ಟರಲ್ಲೇ ಗ್ರಾಹಕರು ಎಸ್ಕೇಪ್! Shivamogga news june 25 

Shivamogga news mandagadde :  ಶಿವಮೊಗ್ಗದ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್‌ವೊಂದರಲ್ಲಿ ಗ್ರಾಹಕರ ನಡುವೆ ಊಟದ ವಿಚಾರವಾಗಿ ಮಾತಿನ ಚಕಮಕಿ ನಡೆದು ಅದು ಗಲಾಟೆಗೆ ತಿರುಗಿದೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅಷ್ಟರಲ್ಲಿ ಜಗಳ ತೆಗೆದಿದ್ದ ಗ್ರಾಹಕರು ಅಲ್ಲಿಂದ ತೆರಳಿದ್ದರು. ಈ ಸಂಬಂಧ ದೂರು ನೀಡುವಂತೆ ಹೋಟೆಲ್ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ. 

Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

Fight Over Meal: Incident Reported at Malur Police Station Limits Hotel

ಇನ್ನಷ್ಟು ಸುದ್ದಿಗಳಿಗಾಗಿ : malendutoday.com / shivamoggalive.com

Shivamogga news june 25

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor