ಲೋನ್ ಕೊಡಿಸ್ತೀವಿ ಅಂದವರನ್ನ ನಂಬಿ ಅಕೌಂಟ್ ಕೊಟ್ಟ ಶಿವಮೊಗ್ಗ ಮಹಿಳೆಗೆ ಕಾದಿತ್ತು ಬಿಗ್ ಶಾಕ್! ಬೆಂಗಳೂರಿನ ಅಂಕಿತ್​ ಬಂಧನ

ಹಂಚಿಕೊಳ್ಳಿ
WhatsApp Facebook X Telegram
Shivamogga Cyber ScamThirthahalli Shivamogga Cyber Crime
Shivamogga Cyber ScamThirthahalli Shivamogga Cyber Crime

ಶಿವಮೊಗ್ಗ: ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಯೊಬ್ಬರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆಯನ್ನೇ ಮ್ಯೂಲ್ ಅಕೌಂಟ್​​ಗೆ ಬಳಸಿಕೊಂಡಿದ್ದ ಬೆಂಗಳೂರು ಮೂಲದ ಆರೋಪಿಯೊಬ್ಬನನ್ನು ಶಿವಮೊಗ್ಗದ ಸೈಬರ್ ಕ್ರೈಮ್  ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರು ಮೂಲದ ಅಂಕಿತ್ (34) ಎಂದು ಗುರುತಿಸಲಾಗಿದೆ.

ಶಿವಮೊಗ್ಗದ ವ್ಯಕ್ತಿಗೆ ಶಾದಿ ಡಾಟ್​​​ ಕಾಂ ನಲ್ಲಿ ಪರಿಚಯವಾದಳು ಲಂಡನ್​​​ನ ವಿಮರ್ಷಾ, ಆಮೇಲೆ ಏನಾಯ್ತು ಗೊತ್ತಾ, 

Shivamogga Cyber Crime ಘಟನೆಯ ವಿವರ

ಶಿವಮೊಗ್ಗದ ಷಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ದೂರದಾರ ಮಹಿಳೆಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಪರಿಚಯವಾಗಿದ್ದರು. ಮಹಿಳಾ ಸಂಘ ಮಾಡಿಸಿ ಅದಕ್ಕೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ಮಹಿಳೆ , ಬೆಂಗಳೂರಿನ ಅಂಕಿತ್ ಎಂಬಾತನ ಮೂಲಕ ಕಳೆದ 2025 ರ ಜುಲೈ 25 ರಂದು ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಸಿಟಿ ಯೂನಿಯನ್ ಬ್ಯಾಂಕ್‌ನಲ್ಲಿ ಮಹಿಳೆಯ ಹೆಸರಲ್ಲಿ ಉಳಿತಾಯ ಖಾತೆಯನ್ನು ತೆರೆಸಿದ್ದರು.

ಖಾತೆ ತೆರೆದ ಬಳಿಕ ಲೋನ್ ಪ್ರಕ್ರಿಯೆಗೆ ಬೇಕಾಗುತ್ತದೆ ಎಂದು ನಂಬಿಸಿ, ಬ್ಯಾಂಕ್ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಿಮ್ ಕಾರ್ಡ್‌ ಅನ್ನು ಅಂಕಿತ್ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಆದರೆ ದಿನಗಳು ಕಳೆದರೂ ಮಹಿಳೆಗೆ ಯಾವುದೇ ಲೋನ್ ಕೊಡಿಸಿರಲಿಲ್ಲ. ಅನುಮಾನಗೊಂಡು ಮಹಿಳೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಯಾವುದೇ ಸಂಪರ್ಕ ಸಿಕ್ಕಿರಲಿಲ್ಲ.

ಲೋನ್ ಆಸೆ ತೋರಿಸಿ ಮಹಿಳೆಯ ಬ್ಯಾಂಕ್ ವಿವರ ಹಾಗೂ ಸಿಮ್ ಕಾರ್ಡ್ ಪಡೆದುಕೊಂಡಿದ್ದ ಆರೋಪಿಗಳು, ಪಿರ್ಯಾದಿ ಮಹಿಳೆಯಂತೆ ನಟಿಸಿ ಆಕೆಯ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಗಳ ವಂಚನೆಯ ಹಣವನ್ನು ವರ್ಗಾಯಿಸಲು ಬಳಸಿಕೊಂಡಿದ್ದಾರೆ. ಪೊಲೀಸರ ತನಿಖೆಯ ವೇಳೆ ಆರೋಪಿಗಳು ವಂಚನೆಗೆ ಬಳಸಿದ ಇಂತಹ ಒಟ್ಟು 4 ಮ್ಯೂಲ್ ಖಾತೆಗಳಲ್ಲಿ ಭಾರಿ ಪ್ರಮಾಣದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಬರೋಬ್ಬರಿ 32,43,000 ಕ್ಕೂ ಹೆಚ್ಚು ರೂಪಾಯಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಶಿವಮೊಗ್ಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿವಮೊಗ್ಗ ಸೈಬರ್ ಕ್ರೈಮ್ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಅವರ ನೇತೃತ್ವದ ಸೈಬರ್ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಆರೋಪಿ ಅಂಕಿತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ವಂಚನೆಗೆ ಬಳಸುತ್ತಿದ್ದ 3 ಮೊಬೈಲ್ ಫೋನ್‌ಗಳು, 4 ಎಟಿಎಂ ಕಾರ್ಡ್‌ಗಳು ಹಾಗೂ 4 ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಮತ್ತೊಬ್ಬ ಮಹಿಳಾ ಆರೋಪಿ ಪತ್ತೆಗಾಗಿ ತನಿಖೆ ಮುಂದುವರಿದಿದೆ.

Shivamogga Cyber CrimeBangalore Man Arrested

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor