ಶಿವಮೊಗ್ಗದಲ್ಲಿ ನೂರಾಹತ್ತು ದಾಟ್ತು ಪೆಟ್ರೋಲ್ ರೇಟ್​ ​​,ಇವತ್ತು ಡೀಸೆಲ್​ ರೇಟ್​​ ಎಷ್ಟಿದೆ ಗೊತ್ತಾ 

ಹಂಚಿಕೊಳ್ಳಿ
WhatsApp Facebook X Telegram
Petrol price today in Shivamogga
Petrol price today in Shivamogga

Petrol price today ಶಿವಮೊಗ್ಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಇದರ ಬಿಸಿ ಕರ್ನಾಟಕಕ್ಕೂ ತಟ್ಟಿದ್ದು, ರಾಜ್ಯದಲ್ಲಿ ಇದೀಗ ಬರೋಬ್ಬರಿ 4ನೇ ಬಾರಿಗೆ ಇಂಧನ ದರವನ್ನು ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿಯೂ ಸಹ ಇಂದು ಮುಂಜಾನೆಯಿಂದಲೇ ಈ ನೂತನ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಶಿವಮೊಗ್ಗ: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ; ಇನ್ಮುಂದೆ ಈ ಹೊಸ ನಿಯಮ ಕಡ್ಡಾಯ 

ಜಿಲ್ಲೆಯಲ್ಲಿ ತೈಲ ದರಗಳು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನಿನ್ನೆ ಲೀಟರ್‌ಗೆ ₹108.99 ಇದ್ದ ಸಾಮಾನ್ಯ ಪೆಟ್ರೋಲ್ ದರವು ಇಂದು ಬರೋಬ್ಬರಿ 2.84 ರಷ್ಟು ದುಬಾರಿಯಾಗಿ 111.83ಕ್ಕೆ ತಲುಪಿದೆ. ಇನ್ನು ಡೀಸೆಲ್ ದರದಲ್ಲೂ ಕೂಡ ಭಾರಿ ಏರಿಕೆ ಕಂಡುಬಂದಿದ್ದು, ನಿನ್ನೆ ಲೀಟರ್‌ಗೆ 97.07 ಇದ್ದ ಬೆಲೆಯು ಇಂದು ₹2.81 ರಷ್ಟು ಹೆಚ್ಚಳವಾಗುವ ಮೂಲಕ ₹99.88ಗೆ ಬಂದು ನಿಂತಿದೆ.

ಸಾಮಾನ್ಯ ಇಂಧನ ಮಾತ್ರವಲ್ಲದೆ ಪ್ರೀಮಿಯಂ ತೈಲಗಳ ಬೆಲೆಯೂ ಸಹ ಗಗನಕ್ಕೇರಿದೆ. ನಿನ್ನೆ ಲೀಟರ್‌ಗೆ 118.93 ಇದ್ದ ಪವರ್ ಪೆಟ್ರೋಲ್ ದರವು ಇಂದು 121.76ಗೆ ಏರಿಕೆಯಾಗಿದೆ. ಅದೇ ರೀತಿ ನಿನ್ನೆ ಲೀಟರ್‌ಗೆ ₹100.64 ರಷ್ಟಿದ್ದ ಟರ್ಬೋಜೆಟ್ ಪ್ರೀಮಿಯಂ ಡೀಸೆಲ್ ದರವು ಇಂದು 103.45 ಕ್ಕೆ ತಲುಪಿದೆ. ಸತತವಾಗಿ ಏರಿಕೆಯಾಗುತ್ತಿರುವ ಈ ಇಂಧನ ದರಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

Petrol price today in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor