ಮಗುವಿಗೆ ಹುಷಾರಿಲ್ಲದ ಕಾರಣ ಊರಿಗೆ ಹೋದ ವ್ಯಕ್ತಿ : ಮನೆ ಮಾಲೀಕನಿಂದ ಬಂದ ಫೊನ್​ ಎತ್ತಿದಾಗ ಕಾದಿತ್ತು ಶಾಕ್​

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಕಾರಣಕ್ಕಾಗಿ ಊರಿಗೆ ತೆರಳಿದ್ದ ಶಿವಮೊಗ್ಗ ನಗರದ ನಿವಾಸಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ನಗರದ ಬೊಮ್ಮನ ಕಟ್ಟೆಯಲ್ಲಿ ನಡೆದಿದೆ.

ಎಲ್‌ಎಲ್‌ಆರ್‌ ಹೊಸ ನಿಯಮ:‌  ಅರ್ಜಿ ಸಲ್ಲಿಸಿದ ಬಳಿಕ ಈ ನಿಯಮ ಪಾಲಿಸದಿದ್ರೆ ನಿಮ್ಮ ಅರ್ಜಿ ಆಟೋಮ್ಯಾಟಿಕ್ ರದ್ದು!

ಘಟನೆ ವಿವರ

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮತ್ತು ಬೊಮ್ಮನ ಕಟ್ಟೆ ನಿವಾಸಿಯಾದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪತ್ನಿಯ ತವರು ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ, ಮನೆ ಖಾಲಿಯಿದ್ದದ್ದನ್ನು ನೋಡಿ  ಮನೆ ಹೊಕ್ಕು ಕಳ್ಳತನ ಮಾಡಿದ್ದಾರೆ.

ಈ ವೇಳೆ ದೂರದಾರರಿಗೆ ಮನೆ ಮಾಲೀಕರಿಂದ ಕರೆ ಬಂದಿದೆ. ಮನೆಯ ಮಾಲೀಕರು ಫೋನ್ ಮಾಡಿ, ನಿಮ್ಮ ಮನೆಯ ಬಾಗಿಲು ತೆರೆದಿದೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣವೇ ಶಿವಮೊಗ್ಗಕ್ಕೆ ವಾಪಸಾದ ದೂರುದಾರರಿಗೆ ಶಾಕ್​ ಎದುರಾಗಿದೆ ಮನೆಗೆ ಬಂದು ನೋಡಿದಾಗ, ಕಳ್ಳರು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದ್ದು. ಅಲ್ಲದೆ, ಬೀರುವಿನ ಬಾಗಿಲನ್ನು ತೆರೆದು, ಅದರ ಮಧ್ಯದ ಲಾಕರ್ ಅನ್ನು ಯಾವುದೋ ಆಯುಧದಿಂದ ಜಖಂಗೊಳಿಸಿ ಒಡೆದಿರುವುದು ಕಂಡುಬಂದಿದೆ. ಬೀರುವಿನಿಂದ ಸುಮಾರು 30 ಗ್ರಾಂ ತೂಕದ ಚಿನ್ನದ ಸರ (ಅಂದಾಜು ಮೌಲ್ಯ ₹ 2 ಲಕ್ಷ) ಮತ್ತು ₹ 80,000/- ನಗದು ಹಣ ಕಳುವಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Shivamogga Burglary 2.8 Lakh Gold, Cash Stolen

Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor