ಶಿವಮೊಗ್ಗ: ಪಕ್ಕದ ಮನೆಯ ಶಿಕ್ಷಕಿಯೊಬ್ಬರು ಟ್ಯೂಷನ್ ಮಾಡುತ್ತಿದ್ದು, ಇದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು 112 ಪೊಲೀಸ್ ಗೆ ದೂರು ನೀಡಿರುವ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ
ವ್ಯಕ್ತಿಯೊಬ್ಬರು 112 ಸಂಖ್ಯೆಗೆ ಕರೆ ಮಾಡಿ, ನಮ್ಮ ಪಕ್ಕದ ಮನೆಯ ಶಿಕ್ಷಕಿ ಟ್ಯೂಷನ್ ನಡೆಸುತ್ತಿದ್ದಾರೆ, ಆ ಸಂದರ್ಭದಲ್ಲಿ ಮಕ್ಕಳು ಗಲಾಟೆ ಮಾಡುವುದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ತರಗತಿಗಳನ್ನು ನಡೆಸಿಕೊಂಡು ಹೋಗುವಂತೆ ಶಿಕ್ಷಕಿಗೆ ತಿಳುವಳಿಕೆ ನೀಡಿದ್ದಾರೆ.
