ಹುಲಿಗಣತಿ, ಮೊದಲು ಸಕ್ರೆಬೈಲ್​ ನಂತರ ಪುರದಾಳು, ಪ್ರತ್ಯೇಕ ಪ್ರಕರಣಗಳಲ್ಲಿ ಕಳುವಾದ ಕ್ಯಾಮರಾಗಳೆಷ್ಟು ಗೊತ್ತಾ..?

ಶಿವಮೊಗ್ಗ : ಜಿಲ್ಲೆಯ ವಿವಿಧ ವನ್ಯಜೀವಿ ವಿಭಾಗಗಳಲ್ಲಿ 2026ರ ಅಖಿಲ ಭಾರತ ರಾಷ್ಟ್ರೀಯ ಹುಲಿಗಣತಿ ಕಾರ್ಯಾಚರಣೆ ಇದೀಗ ಮುಕ್ತಾಯಗೊಂಡಿದೆ .ಆದರೆ ಕಿಡಿಗೇಡಿಗಳು, ಅರಣ್ಯ ಇಲಾಖೆ ವನ್ಯಜೀವಿಗಳ ಚಲನವಲನ ದಾಖಲಿಸಲು ಅಳವಡಿಸಿದ್ದ ಸುಮಾರು 75 ಸಾವಿರ ರೂಪಾಯಿ ಮೌಲ್ಯದ ಮೂರು ಸೆನ್ಸರ್ ಕ್ಯಾಮರಾಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇವತ್ತಿನ ಅಡಿಕೆ ದರ : ಶಿವಮೊಗ್ಗ, ದಾವಣಗೆರೆ, ಚೆನ್ನಗರಿ, ಮಂಗಳೂರು, ತುಮಕೂರು ಅಡಿಕೆ ರೇಟು

ಘಟನೆ 01: ಸಕ್ರೆಬೈಲ್ ವನ್ಯಜೀವಿ ವಲಯದಲ್ಲಿ ಎರಡು ಕ್ಯಾಮರಾ ಮಾಯ

ಸಕ್ರೆಬೈಲ್ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಮಾರ್ಚ್ 01 ರಿಂದ ಹುಲಿಗಣತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯದ ವಿವಿಧ ಆಯಕಟ್ಟಿನ ಜಾಗಗಳಲ್ಲಿ ಅತ್ಯಾಧುನಿಕ ಸೆನ್ಸರ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ರಾಜ್ಯ ಅರಣ್ಯ ಸರ್ವೆ ನಂ. 02ರಲ್ಲಿ ಅಳವಡಿಸಲಾಗಿದ್ದ ಎರಡು ಕ್ಯಾಮರಾಗಳು ಕಳುವಾಗಿವೆ. 

ಮಾರ್ಚ್ 21ರಂದು ಮಧ್ಯಾಹ್ನ ಡಿ.ಆರ್.ಎಫ್.ಓ  ಸ್ಥಳಕ್ಕೆ ಭೇಟಿ ನೀಡಿದಾಗ ಕ್ಯಾಮರಾಗಳು ಅಲ್ಲಿಯೇ ಇದ್ದವು. ಆದರೆ ಮಾರ್ಚ್ 22ರಂದು ಬೆಳಗ್ಗೆ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕ್ಯಾಮರಾಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 50,000 ರೂ. ಮೌಲ್ಯದ ಈ ಉಪಕರಣಗಳಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ತಡವಾಗಿ ದೂರು ನೀಡಿದ್ದಾರೆ. 

Shimoga Tiger Census ಘಟನೆ 02: ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಪುರದಾಳು ಬ್ಯಾಕ್ ವಾಟರ್ ಬಳಿ ಕಳವು

ಇನ್ನೊಂದು ಪ್ರಕರಣದಲ್ಲಿ ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಶಿವಮೊಗ್ಗ ವಲಯದಲ್ಲಿ ಗಣತಿಗಾಗಿ ಅಳವಡಿಸಿದ್ದ ಮೆಮೊರಿ ಕಾರ್ಡ್ ಸಹಿತ ಸೆನ್ಸರ್ ಕ್ಯಾಮರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಪುರದಾಳ್ ಡ್ಯಾಂ ಬ್ಯಾಕ್ ವಾಟರ್ ಹತ್ತಿರದ ಸರ್ವೆ ನಂ. 32ರಲ್ಲಿ ಅಳವಡಿಸಲಾಗಿದ್ದ 25,000 ರೂ. ಮೌಲ್ಯದ ಕ್ಯಾಮರಾಕಳುವಾಗಿದೆ. 

ಮಾರ್ಚ್ 25ರ ಸಂಜೆ ಗಸ್ತುವನಪಾಲಕ ಭೇಟಿ ನೀಡಿದಾಗ ಕ್ಯಾಮರಾ ಸ್ಥಳದಲ್ಲಿಯೇ ಇತ್ತು. ಆದರೆ ಮಾರ್ಚ್ 26ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕರ್ತವ್ಯದ ಮೇಲೆ ಹೋದಾಗ ಕಳ್ಳತನವಾಗಿರುವುದು ದೃಢಪಟ್ಟಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Shimoga Tiger Census Sensor Cameras Stolen

Shimoga Tiger Census Sensor Cameras Stolen
Shimoga Tiger Census Sensor Cameras Stolen
shivamogga car decor sun control house
shivamogga car decor sun control house