ಶಿವಮೊಗ್ಗ / ಜಿಲ್ಲೆಯ ಕೆಲವು ಭಾಗಗಳಲ್ಲಿ ನಿನ್ನೆ ದಿನ ಉತ್ತಮ ಮಳೆಯಾಗಿದೆ. ಜಿಲ್ಲೆಯ ತ್ಯಾಗರ್ತಿಯಲ್ಲಿ ಗರಿಷ್ಠ 48 ಮಿಲಿಮೀಟರ್ ಮಳೆಯಾಗಿದೆ. ಆಗುಂಬೆ ಎಡಬ್ಲ್ಯೂಎಸ್ ಕೇಂದ್ರದಲ್ಲಿ 17.5 ಮಿಲಿಮೀಟರ್ ಮಳೆ ದಾಖಲಾಗಿದೆ.

ಮಳೆ ಸುದ್ದಿಗಳನ್ನು ಇಲ್ಲಿ ಕೂಡ ನೋಡಬಹುದು : RAIN NEWS LIVE
ಶಿವಮೊಗ್ಗ ಹವಾಮಾನ ವರದಿ
ಇನ್ನೂ ಮುಂದಿನ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದಾದರೆ, ಏಪ್ರಿಲ್ 8 ಹಾಗೂ ಏಪ್ರಿಲ್ 9 ರಂದು ಜಿಲ್ಲೆಯ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಳೇ ಹಲೆವೆಡೆ ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮತ್ತು ನಾಳೆ ಮಳೆಯಾಗುವ ಬಗ್ಗೆ ಯಾವುದೆ ಮುನ್ಸೂಚನೆ ಇಲ್ಲ. ಆದಾಗ್ಯು ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಆಯ್ದ ಪ್ರದೇಶಗಳಲ್ಲಿ ಸಣ್ಣಮಟ್ಟಿಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.