ಅಮೆರಿಕಾದಲ್ಲಿ ಫೆಲೋಶಿಪ್ ಪಡೆದ ಶಿವಮೊಗ್ಗ ಯುವತಿ! ಮನಶಾಸ್ತ್ರದಲ್ಲಿ ಮೊದಲ ಎರಡು RANK ಪಡೆದು ಸಾಧನೆ ಮೆರೆದ ವಿದ್ಯಾರ್ಥಿನಿಯರು!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 21, 2023 SHIVAMOGGA NEWS

ಅಶೋಕ್ ಪೈ ಸ್ಮಾರಕ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕುವೆಂಪು ವಿವಿಯ ರ‍್ಯಾಂಕ್ 

ಕುವೆಂಪು ವಿಶ್ವವಿದ್ಯಾಲಯದ 2021-22 ನೇ ಸಾಲಿನ ಎಂ ಎಸ್ಸಿ ಸ್ನಾತಕೋತ್ತರ ಮನಃಶಾಸ್ತ್ರ ಪರೀಕ್ಷೆಯಲ್ಲಿ ನಗರದ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಗಾಯಿತ್ರಿ ವಿ ಪ್ರಥಮ ರ‍್ಯಾಂಕ್  ಗಳಿಸಿದ್ದಾರೆ ಹಾಗೂ ದೇವಿಕಾ ಎಂ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ, ಜುಲೈ 22 ರಂದು ನಡೆಯಲಿರುವ ಕುವೆಂಪು ವಿವಿಯ 33ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ,

ಕನ್ನಡತಿಗೆ ಅಮೆರಿಕದ ಪ್ರತಿಷ್ಠಿತ ಫೆಲೋಶಿಪ್

ಅಮೆರಿಕದ ಹಂಟ್ಸ್‌ವಿಲ್ಲೆಯ ಅಲಬಾಮ ವಿವಿಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನಾ ನಿರತರಾಗಿರುವ ಶಿವಮೊಗ್ಗದ ಸ್ವರ್ಣಲತಾ ಶ್ರೀಹರ್ಷ ಅವರಿಗೆ ಜೋಂಟಾ ಇಂಟರ್‌ನ್ಯಾಷನಲ್‌ನಿಂದ ನೀಡಲಾಗುವ ಅಮೆಲಿಯಾ ಇಯರ್‌ಹಾರ್ಟ್ ಫೆಲೋಶಿಪ್ ಲಭಿಸಿದೆ.

ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿರುವ ವಿಶ್ವದ 30 ಮಹಿಳೆಯರನ್ನು ಜೋಂಟಾ ಇಂಟರ್‌ನ್ಯಾಷನಲ್ ಪ್ರತಿವರ್ಷ ಗುರುತಿಸಿ ವಾರ್ಷಿಕ 10 ಸಾವಿರ ಡಾಲರ್ ಫೆಲೋಶಿಪ್ ನೀಡುತ್ತಿದೆ. ವಿಶ್ವದ 30 ಮಹಿಳೆಯರಲ್ಲಿ ಶಿವಮೊಗ್ಗದ  ಸ್ವರ್ಣಲತಾ ಶ್ರೀಹರ್ಷ ಅವರು ಶಿವಮೊಗ್ಗದ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ, ಲೆಕ್ಕಪರಿಶೋಧಕ ಕೆ.ವಿ.ವಸಂತಕುಮಾರ್ ಮತ್ತು ಉಷಾ ದಂಪತಿ ಪುತ್ರಿ.


ಹೆಂಡತಿಯನ್ನೆ ಕೊಂದ ಗಂಡನಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಕಠಿಣ ಶಿಕ್ಷೆ! ಡಿಶ್​ ಕೇಬಲ್​ ವಯರ್​ ಮರ್ಡರ್​ ಕಥೆಗೆ ತಾರ್ಕಿಕ ಅಂತ್ಯ!

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೇಸ್! ಚರ್ಚ್​ ಫಾದರ್​ಗೆ 14 ದಿನ ನ್ಯಾಯಾಂಗ ಬಂಧನ! ತೀವ್ರಗೊಂಡ ಸಂಘಟನೆ , ಸಮುದಾಯದ ಪ್ರತಿಭಟನೆ!

ಶಿವಮೊಗ್ಗ ಜಿಲ್ಲೆ ಚರ್ಚ್​ ಫಾದರ್​ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!

ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor