ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ ಶಿವಮೊಗ್ಗ 112 ! ದಿಕ್ಕು ಕಾಣದ ವೃದ್ಧೆಗೆ ಆಸರೆಯಾದ ಪೊಲೀಸ್!

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 4, 2024 |  ಶಿವಮೊಗ್ಗ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಕಳೆದೊಂದು ತಿಂಗಳಿನಲ್ಲಿ ಎರಡನೇ ಸಲ ನಡೆಯುತ್ತಿದ್ದ ಬಾಲ್ಯ ವಿವಾಹವನ್ನ ಪೊಲೀಸರು ಯಶಸ್ವಿಯಾಗಿ ತಡೆಗಟ್ಟಿದ್ದಾರೆ. ಇತ್ತೀಚೆಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ಸಿದ್ಧತೆಯನ್ನು ನಿಲ್ಲಿಸಿ ಬಾಲಕಿಯನ್ನ ರಕ್ಷಿಸಿದ್ದ ಪೊಲೀಸರು ಇದೀಗ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನ ನಿಲ್ಲಿಸಿದ್ದಾರೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಸಿಬ್ಬಂದಿ ಕಳೆದ :02.02. 2024ರಂದು ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹವನ್ನ ತಡೆದಿದ್ದಾರೆ. ಈ ಸಂಬಂಧ  112ಗೆ ಕರೆ ಮಾಡಿದ ಅಪರಿಚಿತರೊಬ್ಬರು ಅಪ್ರಾಪ್ತ ಬಾಲಕಿಗೆ ಮದುವೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

ತಕ್ಷಣವೇ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಹಾಗೂ CWC ಅಧಿಕಾರಿಗಳು ಬಾಲಕೀಯ ದಾಖಲೆಗಳ ಪರಿಶೀಲನೆ ನಡೆಸಿ CWC ಆಫೀಸಿಗೆ ಬೆಂಗಾವಲು ಮೂಲಕ ಬಾಲಚಿಯನ್ನು ಕರೆದುಕೊಂಡು ಹೋಗಿರುತ್ತಾರೆ. ಸದ್ಯ ಪ್ರಕರಣದ ವಿಚಾರಣೆ ಮುಂದುವರಿದಿದೆ. 

ಇನ್ನೊಂದೆಡೆ ದಿ:01.02.2024ರಂದು ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯೊಬ್ಬರು ಅನಾಥವಾಗಿ ಓಡಾಡುತ್ತಿರುವುದಾಗಿ  ದೂರುದಾರರು 112ಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ  ERV ಸಿಬ್ಬಂದಿಗಳು ವೃದ್ದೆಯನ್ನು ವಿಚಾರಿಸಿದ್ದಾರೆ. ಆ ಬಳಿಕ ಅವರ ಸಂಬಂಧಿಕರು ಸಿಗುವವರೆಗೂ ಆಕೆಯ ಸುರಕ್ಷತೆಗಾಗಿ ಆಕೆಯನ್ನ ಕರೆದುಕೊಂಡು ಹೋಗಿ ಹರಿಗೆಯ ವೃದ್ಧಾಶ್ರಮಕ್ಕೆ ಬಿಟ್ಟಿದ್ದಾರೆ. 

https://twitter.com/112shivamogga

ಶಿವಮೊಗ್ಗ 112 ಮನೆಯೊಳಗಿನ ಸಮಸ್ಯೆಗಳಿಂದ ಹಿಡಿದು ಇಂತಹ ಹಲವು ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ಶ್ರಮಿಸುತ್ತಿದೆ. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor