ಮಲೆನಾಡಿನ ಮೀನಿನ ರುಚಿ ಹಂಚಿದ್ದ ಸಕ್ರೆಬೈಲ್ ವಿಜಿ ಅಪಘಾತದಲ್ಲಿ ದುರ್ಮರಣ…

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡಿನ ಮೀನಿನ ರುಚಿ ಹಂಚಿದ್ದ ಸಕ್ರೆಬೈಲ್ ವಿಜಿ ಅಪಘಾತದಲ್ಲಿ ದುರ್ಮರಣ…

ಮಲೆನಾಡು ಟುಡೆ / ಶಿವಮೊಗ್ಗ / ಇಲ್ಲಿನ ಸಕ್ರೆಬೈಲ್​ನಲ್ಲಿರುವ ಫೇಮಸ್ ವಿಜಿ ಹೋಟೆಲ್​ ಮಾಲೀಕ ವಿಜಯ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ದಿನ ಈ ಘಟನೆ ಸಂಭವಿಸಿದ್ದು, ವಿಜಿಯ ಸಾವು ಆಘಾತ ಮೂಡಿಸಿದೆ.

ನಿನ್ನೆ ದಿನ ರಾತ್ರಿ 10 ಗಂಟೆ ಸುಮಾರಿಗೆ, ಅರಕೆರೆ ಬಳಿ ತೆರಳುತ್ತಿದ್ದ ವಿಜಯ್​ ಅವರ ಬುಲೆಟ್ ಗಾಡಿ ಅಪಘಾತಕ್ಕೀಡಾಗಿದೆ. ಶಿವಮೊಗ್ಗದಿಂದ ಸಕ್ರೆಬೈಲ್​ಗೆ ತೆರಳುತ್ತಿರುವ ಸಂದರ್ಭದಲ್ಲಿ ಘಟನೆ ನಡೆದಿದೆ. ಮೂಲಗಳ ಮಾಹಿತಿಯಂತೆ ಡಿವೈಡರ್​ಗೆ ಡಿಕ್ಕಿಯಾಗಿ ವಿಜಯ್​ ಕೆಳಕ್ಕೆ ಬಿದ್ದಿರುವ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ರಕ್ತಸ್ತ್ರಾವವಾಗಿದೆ.

ಇನ್ನೂ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ ಯಾರು ಇರದ ಕಾರಣ, ತಕ್ಷಣವೇ ವಿಜಯ್ಗೆ ಚಿಕಿತ್ಸೆ ಸಿಗಲಿಲ್ಲ. ಕೆಲವು ಹೊತ್ತಿನ ನಂತರ ವಿಜಯ್ ಬಿದ್ದಿರುವುದನ್ನ ಗಮನಿಸಿದ ಅಲ್ಲಿನವರು, ಅವರನ್ನ ಶಿವಮೊಗ್ಗ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಮಧ್ಯರಾತ್ರಿ ಕರೆದೊಯ್ಯಲಾಗಿದೆ. ಇವತ್ತು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಕ್ರೆಬೈಲ್ ವಿಜಿ ಎಂದೇ ಫೇಮಸ್ ಆಗಿದ್ದ ವಿಜಯ್​, ಫಿಶ್​ ಹೋಟೆಲ್​ ಉದ್ಯಮದಲ್ಲಿ ಎತ್ತಿದ ಕೈಹಾಗೂ ಈ ಭಾಗದಲ್ಲಿ ಮೀನು ಹೋಟೆಲ್​ನ್ನ ಫೇಮಸ್ ಮಾಡಿದ್ದರಲ್ಲಿ ವಿಜಿಯದ್ದೆ ಪ್ರಮುಖ ಪಾತ್ರವಿತ್ತು. ಫಿಶ್ ಹೋಟೆಲ್​ ಉದ್ಯಮದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದ ವಿಜಿ ಇಡೀ ಶಿವಮೊಗ್ಗವಷ್ಟೆ ಅಲ್ಲದೆ ಹೊರಜಿಲ್ಲೆಗಳಲ್ಲಿಯು ಸಕ್ರೆಬೈಲ್ ವಿಜಿ ಎಂದೇ ಫೇಮಸ್​ ಆಗಿದ್ದರು. ವೈಯಕ್ತಿಕವಾಗಿ ಗೆಳೆಯನು ಆಗಿದ್ದ ವಿಜಿ ಅವರ ನಿಧನ ಆಘಾತ ಮೂಡಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor