ಸಾಗರದಲ್ಲಿ: ಬೀಗ ಹಾಕಿದ್ದ ಮನೆಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಲೂಟಿ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಸಾಗರ | ಸಾಗರ ನಗರದ ಗಾಂಧಿನಗರ ಬಡಾವಣೆಯಲ್ಲಿ ಕಳ್ಳರು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯಗಳನ್ನು ದೋಚಿದ್ದಾರೆ. ಈ ಘಟನೆಯು ಗುರುವಾರ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗಾಂಧಿನಗರ ನಿವಾಸಿ ನಂದನ ಕುಮಾರ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ನಂದನ ಕುಮಾರ್ ಅವರ ಕುಟುಂಬವು ಏಪ್ರಿಲ್ 25ರಿಂದ ವೈಯಕ್ತಿಕ ಕೆಲಸದ ಮೇಲೆ ಊರಿನಲ್ಲಿ ಇರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು, ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಕಪಾಟುಗಳನ್ನು ಜಾಲಾಡಿ ಐದೂವರೆ ಕೆ.ಜಿ. ತೂಕದ ಬೆಳ್ಳಿಯ ವಸ್ತುಗಳು, 340 ಗ್ರಾಂ ಚಿನ್ನದ ಆಭರಣಗಳಾದ ನೆಕ್ಲೆಸ್, ಉಂಗುರ, ತಾಳಿ ಸರ, ಬಳೆ ಹಾಗೂ ಅಲ್ಮೇರಾದಲ್ಲಿದ್ದ 2 ಲಕ್ಷ ರೂಪಾಯಿ ನಗದನ್ನು ಅಪಹರಿಸಿದ್ದಾರೆ .

ಕಳುವಾದ ವಸ್ತುಗಳ ಮೌಲ್ಯ ಅಂದಾಜು 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಂದು ಮನೆಗೆ ಮರಳಿದ ಕುಟುಂಬಸ್ಥರಿಗೆ ಬಾಗಿಲು ಮುರಿದಿರುವುದು ಮತ್ತು ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಕೂಡಲೇ ನಂದನ ಕುಮಾರ್ ಅವರು ಸಾಗರ ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sagara Robbery News Gold and Silver Stolen

Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Sagara Robbery News
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor