TRAIN NEWS TODAY

ರೈಲಿಗೆ ನುಗ್ಗಿ ದರೋಡೆ! ವಿದ್ಯಾನಗರ ಸ್ಟೇಷನ್​​​ನಲ್ಲಿ ನಡೆದಿದ್ದ ಕೃತ್ಯ! ಇಬ್ಬರು ಅರೆಸ್ಟ್!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಮಹಾದೇವಿ ಟಾಕೀಸ್​ ರೈಲು ನಿಲ್ದಾಣ ಅಥವಾ ವಿದ್ಯಾನಗರ ರೈಲು ನಿಲ್ದಾಣ, ಶಿವಮೊಗ್ಗ ಹಳೆಯ ರೈಲ್ವೆ ಸ್ಟೆಷನ್​ ಎಂದೆಲ್ಲಾ ಕರೆಯಲ್ಪಡುವ ವಿದ್ಯಾನಗರದ ಬಳಿ ಇರುವ ಶಿವಮೊಗ್ಗ ಹಾಲ್ಟ್ ರೈಲ್ವೆ ಸ್ಟೇಷನ್​ನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ರೈಲ್ವೆ ಪೊಲೀಸರು ಬಹಳ ಬೇಗನೇ ಪತ್ತೆ ಮಾಡಿದ್ದಾರೆ.

​ ಫೆಬ್ರವರಿ 10.02.2026, ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ರೈಲ್ವೆ ಇಲಾಖೆಯ ನೆರವಿನ ಆಪ್​ನಲ್ಲಿ ಜನಸಾಮಾನ್ಯರು ತಮ್ಮ ಅನುಭವ ಹಂಚಿಕೊಂಡ ಬಳಿಕ ಮೀಡಿಯಾಕ್ಕೆ ಬಂದಿತ್ತು. ಆನಂತರ ರಾಷ್ಟ್ರೀಯ ಮಾಧ್ಯಮಗಳು ಸಹ ರೈಲ್ವೆ ನಿಲ್ದಾಣದಲ್ಲಿ ನಡೆದ ದರೋಡೆಯ ವಿಚಾರವನ್ನು ಸಮಗ್ರ ಮಾಹಿತಿಯೊಂದಿಗೆ ವಿವರಿಸಿದ್ದವು. 

RPF Arrests Two Accused for Stealing Mobile in Yeshvantpur Express
RPF Arrests Two Accused for Stealing Mobile in Yeshvantpur Express

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

ಇದೀಗ ಪ್​ರಕರಣ ಸಂಬಂಧ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದು  ಶಿವಮೊಗ್ಗ (SME) ಹಾಲ್ಟ್ ನಿಲ್ದಾಣದ 16582 ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ನಿಂತಿದ್ದಾಗ, ರೈಲಿನ ಬೋಗಿಯೊಳಕ್ಕೆ ನುಗ್ಗಿದ ಆಗಂತುಕ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದನಷ್ಟೆ ಅಲ್ಲದೆ, ಪ್ರಯಾಣಿಕರೊಬ್ಬರನ್ನ ದರೋಡೆ ಮಾಡಿ ಎಸ್ಕೆಪ್ ಆಗಿದ್ದ. ಈ ಪ್ರಕರಣ ಸಂಬಂಧ  ರೈಲ್ವೆ ರಕ್ಷಣಾ ಪಡೆಯ (RPF) ಕಮಾಂಡರ್ ಬಿ.ಕೆ ಪ್ರಕಾಶ ಹಾಗೂ ಜಿಆರ್‌ಪಿ ಸಬ್-ಇನ್ಸ್‌ಪೆಕ್ಟರ್ ಮಹೇಶ್ ನೇತೃತ್ವದ ತಂಡ ಒಟ್ಟು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದೆ. ಅಲ್ಲದೆ ತನಿಖೆಯನ್ನ ಮುಂದುವರಿಸಿದೆ.

RPF Arrests Two Accused for Stealing Mobile in Yeshvantpur Express
RPF Arrests Two Accused for Stealing Mobile in Yeshvantpur Express

ಶಿವಮೊಗ್ಗ-ಯಶವಂತಪುರ ರೈಲಿನ ಮಹಿಳಾ ಬೋಗಿಯಲ್ಲಿಯೇ ನಡೆಯಿತೆ ದರೋಡೆ& ಕೊ? ಅನ್ನಪೂರ್ಣ ಕೇಸ್​ಲ್ಲಿ ನಡೆದಿದ್ದೇನು?

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

 Shivamogga Train Robbery RPF Arrests Two Accused for Stealing Mobile in Yeshvantpur Express ಶಿವಮೊಗ್ಗದ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ಚಲಿಸುವ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು RPF ಹಾಗೂ GRP ಪೊಲೀಸರು ಬಂಧಿಸಿದ್ದಾರೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ