Panchanga Rasi Phala /ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು ಹಾಗೂ ಫಾಲ್ಗುಣ ಮಾಸ, ಶುಕ್ಲ ಪಕ್ಷದ ಏಕಾದಶಿ ರಾತ್ರಿ 10.31 ರವರೆಗೆ ಇರಲಿದೆ, ತದನಂತರ ದ್ವಾದಶಿ ಆರಂಭವಾಗುತ್ತದೆ. ಆರಿದ್ರಾ ನಕ್ಷತ್ರವು 11.06 ರವರೆಗೆ ಇರುತ್ತದೆ, ಆ ಬಳಿಕ ಪುನರ್ವಸು ನಕ್ಷತ್ರ ಪ್ರವೇಶವಾಗುತ್ತದೆ. ಸರ್ವ ಏಕಾದಶಿ ಆಚರಣೆಯ ಈ ದಿನ ರಾಹುಕಾಲ ಬೆಳಗ್ಗೆ 10.30 ರಿಂದ 12.00 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರುತ್ತದೆ.
ಇವತ್ತಿನ ರಾಶಿಫಲ
ಮೇಷ / ಹೊಸ ವಿಚಾರ ಕಲಿಯಲಿದ್ದಾರೆ. ಗಣ್ಯ ವ್ಯಕ್ತಿಗಳ ಪರಿಚ , ಬಾಲ್ಯದ ಸ್ನೇಹಿತರ ಭೇಟಿ. ಭೂಮಿ ಲಾಭ ಹಾಗೂ ವಿದ್ಯಾರ್ಥಿಗಳಿಗೆ ಹೊಸ ಅವಕಾಶ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ನಡೆಯಲಿವೆ.
ವೃಷಭ / ಕೆಲಸಗಳನ್ನು ಮುಂದೂಡುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ನಿರಂತರ ಗೊಂದಲ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ದೇವರ ದರ್ಶನ, ವ್ಯಾಪಾರ ಸಾಧಾರಣ, ಉದ್ಯೋಗಿಗಳಿಗೆ ಕೆಲಸದ ಒತ್ತಡ
ಮಿಥುನ / ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ಸುದ್ದಿ, ಆರ್ಥಿಕ ಪ್ರಗತಿ. ಹೊಸ ಕೆಲಸ ಕೈಗೆತ್ತಿಕೊಳ್ಳಲಿದ್ದು, ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ. ವ್ಯಾಪಾರದಲ್ಲಿ ಮುನ್ನಡೆಯಲಿದ್ದೀರಿ.
ಕರ್ಕಾಟಕ / ಕೈಹಾಕಿದ ಕೆಲಸ ಪೂರ್ಣಮಾಡಿ. ಸ್ನೇಹಿತರೊಂದಿಗೆ ಜಗಳ, ಸಾಲ ಪ್ರಯತ್ನ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿವೆ. ನಿರುದ್ಯೋಗಿಗಳಿಗೆ ನಿರಾಸೆ, ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ. ಉದ್ಯೋಗಿಗಳಿಗೆ ಮಾನಸಿಕ ಒತ್ತಡ.
ಸಿಂಹ / ಕೆಲಸಗಳಲ್ಲಿ ಅಡೆತಡೆ, ಹೊಸ ಪರಿಚಯ. ಆಸ್ತಿ ಲಾಭ, ಬಾಲ್ಯದ ಗೆಳೆಯರ ಭೇಟಿ. ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ.
ಕನ್ಯಾ / ಸಂದರ್ಶನಗಳಿಗೆ ಕರೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು, ಶುಭ ವಾರ್ತೆ, ಆಸ್ತಿ ವಿವಾದ. ವ್ಯಾಪಾರದಲ್ಲಿ ಹೊಸ ಹೂಡಿಕೆ, ಉದ್ಯೋಗಿಗಳಿಗೆ ಬಡ್ತಿ.
ತುಲಾ / ಆರ್ಥಿಕ ಮುಗ್ಗಟ್ಟು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಹಾಗೂ ಆರೋಗ್ಯ ಸಮಸ್ಯೆ ಕಾಡಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ.
ವೃಶ್ಚಿಕ / ಆಸ್ತಿ ವಿವಾದ, ಒಡಹುಟ್ಟಿದವರೊಂದಿಗೆ ಜಗಳ ಹಾಗೂ ಸಾಲದ ಬಾಧೆ. ದೇವಾಲಯಗಳಿಗೆ ಭೇಟಿ ನೀಡಲಿದ್ದೀರಿ. ಉದ್ಯೊಗ ಮತ್ತು ವ್ಯಾಪಾರದಲ್ಲಿ ಏರಿಳಿತ.

ಧನುಸ್ಸು / ಬಹುಕಾಲದ ಕನಸು ಇಂದು ನನಸಾಗಲಿದೆ.ಭೂಮಿ ಹಾಗೂ ವಾಹನ ಖರೀದಿ ಯೋಗವಿದೆ. ಮಾತುಕತೆಗಳು ಫಲಪ್ರದವಾಗಲಿದ್ದುನಿಗದಿತ ಸಮಯಕ್ಕೆ ಕೆಲಸ ಮುಗಿಯಲಿದೆ. ವ್ಯಾಪಾರದಲ್ಲಿ ಪ್ರಗತಿ ಹಾಗೂ ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ
ಮಕರ / ಹೊಸ ಪರಿಚಯ. ನೂತನ ಕೆಲಸ ಹಮ್ಮಿಕೊಳ್ಳಲಿದ್ದು, ಭೂಮಿ ಮತ್ತು ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ದಿನ.
ಕುಂಭ / ಸಾಲಗಾರರ ಒತ್ತಡ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳಲ್ಲಿ ವಿಳಂಬ, ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯದಿನ
ಮೀನ / ಕೆಲವು ಕೆಲಸ ಮುಂದೂಡಲಿದ್ದಾರೆ. ಅತಿಯಾದ ಶ್ರಮ, ಬಂಧುಗಳೊಂದಿಗೆ ಜಗಳ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

Today Horoscope in Kannada Daily Astrology Panchanga Rasi Phala Feb 27 2026Read today’s horoscope in Kannada for all zodiac signs. Know your Rasi Phala, Panchanga details,
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.