rippon pete : ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ಆರೋಪ | ದೂರು ದಾಖಲು

rippon pete : ರಿಪ್ಪನ್​ಪೇಟೆ : ಕಳ್ಳನೊಬ್ಬ ಮನೆಯೊಂದಕ್ಕೆ ನುಗ್ಗಿ ವೃದ್ದರೊಬ್ಬರ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ನಗದನ್ನು ಕಳ್ಳತನವೆಸಗಿದ ಘಟನೆ  ರಿಪ್ಪನ್​ ಪೇಟೆ ಪೊಲಿಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ರಿಪ್ಪನ್​ ಪೇಟೆ ಪೊಲೀಸರು ಬಂಧಿಸಿದ್ದಾರೆ. 

rippon pete : ಅರಸಾಳು ಗ್ರಾಪಂ ವ್ಯಾಪ್ತಿಯ ದೂನ ಗ್ರಾಮದ ನವೀನ ಬಂಧಿತ ಆರೋಪಿ. 

ದೂನ ಗ್ರಾಮದ ನಿವಾಸಿ ಚನ್ನವೀರಪ್ಪ ಗೌಡ ಎಂಬುವವರ ಮನೆಗೆ  ಕಳೆದ ಮೇ 04 2025 ರಂದು  ನವೀನ್​ ಸೇರಿದಂತೆ ಇನ್ನಿತರೆ 08 ಆರೋಪಿಗಳು ನುಗ್ಗಿದ್ದು, ಚಿನ್ನಾಭರಣದ ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ತಮ್ಮ ಕೃತ್ಯಕ್ಕೆ ಅಡ್ಡಬಂದ  ಚನ್ನವೀರಪ್ಪ ಗೌಡ , ಅವರ ಪತ್ನಿ ವಿಶಾಲಕ್ಷಿ ಹಾಗೂ ಅವರ ಸೊಸೆ ಭಾಗ್ಯ ಮತ್ತು ಉಮೇಶ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಮನೆಯೊಳಗಿದ್ದ ಬೀರುವಿನ ಬೀಗ ಒಡೆದು ಲಕ್ಷಾಂತರ ಮೌಲ್ಯದ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.  

ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವೀನ್​ ಎಂಬ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Leave a Comment