theft case : ಮದುವೆಗೆ ಹೊರಡಲು ಸಿದ್ಧವಾದ ಮಹಿಳೆಗೆ ಶಾಕ್​ | ಲಕ್ಷಾಂತರ ಮೌಲ್ಯದ ಬಂಗಾರ ಕಳ್ಳತನ

ಹಂಚಿಕೊಳ್ಳಿ
WhatsApp Facebook X Telegram
kumsi police station image malenadutoday
kumsi police station image malenadutoday

theft case : ಶಿವಮೊಗ್ಗ :  ಶಿವಮೊಗ್ಗ ತಾಲ್ಲೂಕಿನ ರೇಚಿಕೊಪ್ಪದ ಸುರೇಶ್‌ ಎಂಬುವವರ ಮನೆಯಲ್ಲಿ ಪೆಟ್ಟಿಗೆಯಲ್ಲಿ ಇಟ್ಟಿದ್ದ 2 ಬಂಗಾರದ ಸರಗಳು ಕಳ್ಳತನವಾಗಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್‌ ಮತ್ತು ಅವರ ಪತ್ನಿ  ಏಪ್ರಿಲ್ 17 ರಂದು ಮಗಳ ಮನೆಗೆ ಸಮಾರಂಭಕ್ಕೆಂದು ತೆರಳಿದ್ದರು. ಸಮಾರಂಭದಿಂದ ಬಂದು ಸರವನ್ನು ತೆಗೆದು ಪೆಟ್ಟಿಗೆಯಲ್ಲಿ ಇಟ್ಟಿದ್ದರು. ನಂತರ  ಏಪ್ರಿಲ್ 24 ರಂದು ಮದುವೆಗೆ ಹೋಗಬೇಕೆಂದು ಸರವನ್ನು ಹಾಕಲು ಪೆಟ್ಟಿಗೆ ತೆಗೆದಾಗ 5 ಲಕ್ಷ ಮೌಲ್ಯದ 2  ಚಿನ್ನದ ಸರಗಳು ನಾಪತ್ತೆಯಾಗಿದ್ದವು. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲಿಸರು ಬಲೆ ಬೀಸಿದ್ದಾರೆ.

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor