sharavathi valley : ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಹೈ ಅಲರ್ಟ್ | ​ ಕಾರಣವೇನು

ಹಂಚಿಕೊಳ್ಳಿ
WhatsApp Facebook X Telegram
sharavathi valley
sharavathi valley ಲಿಂಗನಮಕ್ಕಿ ಡ್ಯಾಂ

sharavathi valley : ಭಾರತ ಪಾಕಿಸ್ತಾನದ ವಿರುದ್ದ ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ದಾಳಿ ನಡೆಸುತ್ತಿದ್ದ್ದು, ಇದೀಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನಲೆ  ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಲಾಗಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೊ ತರಬೇತಿ ಪಡೆದ ಅನುಭವಿ ಸಿಬ್ಬಂದಿ ಭದ್ರತಾ ಕಾರ್ಯಪಡೆಯನ್ನು, ಲಿಂಗನಮಕ್ಕಿ ಅಣೆಕಟ್ಟು, ಲಿಂಗನಮಕ್ಕಿ ಜಲವಿದ್ಯುದಾಗಾರ, ಮಹಾತ್ಮ ಗಾಂಧಿ ಮತ್ತು ಶರಾವತಿ ಜಲವಿದ್ಯುತ್​ಗಾರಗಳಲ್ಲಿ ಕಾವಲಿಗಾಗಿ ನೇಮಿಸಲಾಗಿದೆ.

sharavathi valley : ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆಗೆ ಸಿದ್ದರಿರಿ, ಬಿ.ವಿ. ಕುಮಾರ್ 

ಈ ಹಿನ್ನಲೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಬಿ.ವಿ. ಕುಮಾರ್ ಎಲ್ಲ ಭದ್ರತಾ ಸಿಬ್ಬಂದಿಗಳು  ಶರಾವತಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಸದಾ ಸಿದ್ಧರಿರಬೇಕು ಎಂಬ ಸಂದೇಶವನ್ನು ಸಿಬ್ಬಂದಿಗಳಿಗೆ  ನೀಡಿದ್ದಾರೆ. 

ಈ ಕುರಿತು ಶರಾವತಿ ಕಣಿವೆಯ ಭದ್ರಾತಾ ವಿಭಾಗದ ಮುಖ್ಯ ಎಂಜಿನಿಯರ್​ ಆರ್​ ರಮೇಶ್ ಮಾತನಾಡಿ ನಮಗೆ ಮಾಕ್ ಡ್ರಿಲ್ ತಯಾರಿ ಬಗ್ಗೆ ಯಾವುದೇ ರೀತಿಯ ಆದೇಶಗಳು ಈವರೆಗೂ ದೊರೆತಿಲ್ಲ. ಮೇಲಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor