protest against donald trump 20-06-25 : ಡೊನಾಲ್ಡ್ ಟ್ರಂಪ್​ ವಿರುದ್ದ ಶಿವಮೊಗ್ಗದಲ್ಲಿ ಪ್ರತಿಭಟನೆ |  ಕಾರಣವೇನು

ಹಂಚಿಕೊಳ್ಳಿ
WhatsApp Facebook X Telegram
protest against donald trump

protest against donald trump:  ಶಿವಮೊಗ್ಗದ ಮಹವೀರ ವೃತ್ತದಲ್ಲಿ ಇಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಮುಖಂಡರು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಿರುದ್ದ​ ಪ್ರತಿಭಟನೆ ಮಾಡಿದರು. ಈ ವೇಳೆ  ಪ್ರತಿಭಟನಾ ಕಾರರು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಡೊನಾಲ್ಡ್ ಟ್ರಂಪ್‌ರವರ ಪ್ರತಿಕೃತಿಯನ್ನು  ಧಹಿಸಿದರು.

protest against donald trump:  ಪ್ರತಿಭಟನೆಗೆ ಕಾರಣವೇನು

ಅಮೇರಿಕಾ  ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರವರು ಭಾರತದ ಕಡು ವಿರೋಧಿ ಹಾಗೂ ಪಾಕಿಸ್ತಾನದ ರಕ್ಷಣಾ ಸಚಿವ  ಮುನೀರ್ ಅವರಿಗೆ ಅಮೆರಿಕಾದ ವೈಟ್ ಹೌಸ್‌ನಲ್ಲಿ ಔತಣಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿದ್ದಾರೆ. ಕಳೆದ ತಿಂಗಳು ನಮ್ಮ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಕಾಶ್ಮೀರದ ಪೆಹೆಲ್ಗಾಂನಲ್ಲಿ ಪಾಕಿಸ್ತಾನ ಪೋಷಿತ ಉಗ್ರರು ಧರ್ಮಾಧಾರಿತವಾಗಿ 26 ಪ್ರವಾಸಿಗರ ಮೇಲೆ ನರಮೇಧ ನಡೆಸಿ ಹತ್ಯೆಗೈದಿದ್ದರು. ಈ ಉಗ್ರಗಾಮಿಗಳಿಗೆ ಪಾಕಿಸ್ತಾನ ಸರ್ವ ರೀತಿಯಲ್ಲಿ ರಕ್ಷಣೆ ನಿಡುವುದಾಗಿ ಇದೇ ಪಾಕಿಸ್ತಾನದ ರಕ್ಷಣಾ ಸಚಿವರು ಬಹಿರಂಗವಾಗಿ ಘೋಷಣೆ ಮಾಡಿದ್ದರು. 

ಈ ಉಗ್ರರನ್ನು ಸದೆಬಡಿಯಲು ದೇಶದ ದಕ್ಷ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ವಿನೂತನವಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿ, ಪಾಕಿಸ್ತಾನದ ಗಡಿಯೊಳಗೂ ನುಗ್ಗಿ ಹುಡುಕಿ ಹುಡುಕಿ ಉಗ್ರರನ್ನು ಸದೆ ಬಡಿದಿರುತ್ತಾರೆ. ಈ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ದಿಗಿಲುಗೊಂಡ ಇದೇ ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಮುನೀರ್ ಅವರು ನಮ್ಮ ದೇಶದ ರಕ್ಷಣಾ ಸಚಿವ  ರಾಜನಾಥ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ, ಅಂಗಲಾಚಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲು ಗೋಗರೆದಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಇಂತಹ ಪಾಕಿಸ್ತಾನ ಹಾಗೂ ಪಾಪಿಸ್ತಾನದ ರಕ್ಷಣಾ ಸಚಿವ ಮುನೀರ್‌ರವರಿಗೆ ದೊಡ್ಡಣ್ಣನಾದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣ ಕೂಟವನ್ನು ಏರ್ಪಡಿಸಿ ರಾಜಾತಿಥ್ಯವನ್ನು ನೀಡಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸಿದೆ ಎಂದರು.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor