ಮಾರ್ಚ್ 24ರ ಜ್ಯೋತಿಷ್ಯ: ಒಲಿಯಲಿದೆ ಅನಿರೀಕ್ಷಿತ ಧನಲಾಭದ ಯೋಗ! ಇವತ್ತಿನ ಪಂಚಾಂಗ ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
What are the daily predictions for all 12 zodiac signs, who will experience financial gains, when are the auspicious and inauspicious timings today, details for Sri Parabhava Nama Samvatsara,
What are the daily predictions for all 12 zodiac signs, who will experience financial gains, when are the auspicious and inauspicious timings today, details for Sri Parabhava Nama Samvatsara,

ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ ಶುಕ್ಲ ಪಕ್ಷದ ಷಷ್ಠಿ ತಿಥಿಯು ರಾತ್ರಿ 7.23 ರವರೆಗೆ ಇದ್ದು, ತದನಂತರ ಸಪ್ತಮಿ ಆರಂಭವಾಗಲಿದೆ. ರೋಹಿಣಿ ನಕ್ಷತ್ರ ರಾತ್ರಿ 10.17 ರವರೆಗೆ ಇದ್ದು, ತದನಂತರ ಮೃಗಶಿರ ನಕ್ಷತ್ರ ಆರಂಭವಾಗಲಿದೆ. ಅಮೃತ ಘಳಿಗೆ ರಾತ್ರಿ 7.17 ರಿಂದ 8.46 ರವರೆಗೆ, ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

predict for all twelve zodiac signs
predict for all twelve zodiac signs

ರಾಶಿಭವಿಷ್ಯ

ಮೇಷ / ಆಪ್ತರೊಂದಿಗೆ ಅಥವಾ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಎದುರಿಸುವ ಸಾಧ್ಯತೆ. ಆಸ್ತಿಗೆ ಸಂಬಂಧಿಸಿದ ಒಪ್ಪಂದ ಮುಂದೂಡಲ್ಪಡಲಿದೆ. ದೂರದ ಊರುಗಳಿಗೆ ಪ್ರಯಾಣ. ವಾಣಿಜ್ಯ ವಹಿವಾಟು ಸಾಧಾರಣ ಗತಿಯಲ್ಲಿ ಸಾಗಲಿದ್ದು, ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿವೆ. 

ವೃಷಭ /  ಹೊಸ ಯೋಜನೆಗೆ ಚಾಲನೆ , ಬೆಲೆಬಾಳುವ ವಸ್ತುಗಳ ಖರೀದಿ. ವ್ಯಾಪಾರಸ್ಥರು ಅಂದುಕೊಂಡ ಗುರಿಯನ್ನು ತಲುಪಲಿದ್ದು, ನೌಕರರಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿ ಸಿಗಲಿದೆ.

ಮಿಥುನ /  ಕೌಟುಂಬಿಕ ವಾತಾವರಣದಲ್ಲಿ ಒತ್ತಡ, ಸಹೋದರರು ಹಾಗೂ ಸ್ನೇಹಿತರೊಂದಿಗೆ ವಾಗ್ವಾದ, ಕೈಗೆತ್ತಿಕೊಂಡ ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾಗಿದೆ. ಅನಿರೀಕ್ಷಿತ ಪ್ರಯಾಣ, ವ್ಯಾಪಾರ ವಹಿವಾಟುಗಳಲ್ಲಿ ಈದಿನ ಮಂದಗತಿ, ಉದ್ಯೋಗಿಗಳಿಗೆ ಕೆಲಸದ ಹೊರೆ. 

ಕರ್ಕಾಟಕ/  ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಪ್ರಗತಿ, ಮನೆಯಲ್ಲಿ ಶುಭ ಸಮಾರಂಭ. ಪುಣ್ಯಕ್ಷೇತ್ರಗಳ ದರ್ಶನ, ಔತಣಕೂಟ. ಕುತೂಹಲಕಾರಿ ಮಾಹಿತಿ ಲಭ್ಯವಾಗಲಿದ್ದು, ವ್ಯಾಪಾರಸ್ಥರಿಗೆ ಲಾಭದಾಯಕ ದಿನ ಹಾಗೂ ನೌಕರರಿಗೆ ಸಂತಸದ ಸುದ್ದಿ 

predict for all twelve zodiac signs
predict for all twelve zodiac signs

ಶಿವಮೊಗ್ಗ: ಕಾರು ತೊಳೆಯುವಾಗ ಪಕ್ಕದ ಮನೆಯ ಗೋಡೆಗೆ ಹಾರಿತು ನೀರು, ಆಮೇಲೆ ಆಗಿದ್ದೇ ಬೇರೆ

ಸಿಂಹ /  ಹೊಸ ಯೋಜನೆ ಆರಂಭ, ಮನಸ್ಸಿನಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಸಾದ್ಯತೆ. ನೂತನ ವಾಹನ ಖರೀದಿ, ವ್ಯಾಪಾರದಲ್ಲಿ ಉತ್ಸಾಹಭರಿತವಾಗಿ ದಿನ ಕಳೆಯಲಿದ್ದಾರೆ , ಉದ್ಯೋಗದಲ್ಲಿ ಎಲ್ಲರ ಸಹಕಾರ ಸಿಗಲಿದೆ. 

ಕನ್ಯಾ/ ಕುಟುಂಬದಲ್ಲಿ ಅಸಮಾಧಾನ, ಮಾನಸಿಕ ನೆಮ್ಮದಿಗೆ ಭಂಗ. ಅಮೂಲ್ಯವಾದ ವಸ್ತು ಜಾಗೃತೆ. ಹಠಾತ್ ಪ್ರಯಾಣ, ಆರೋಗ್ಯ ಸಮಸ್ಯೆ ಹಾಗೂ ಬಂಧುಗಳೊಂದಿಗೆ ವೈಮನಸ್ಸು. ವ್ಯವಹಾರದಲ್ಲಿ ತೀವ್ರ ಒತ್ತಡ, ಉದ್ಯೋಗಿಗಳಿಗೆ ಸಾಮಾನ್ಯದಿನ 

ತುಲಾ /  ದಿನನಿತ್ಯದ ಚಟುವಟಿಕೆಗಳು ಬಹಳ ನಿಧಾನಗತಿಯಲ್ಲಿ ಸಾಗಲಿದ್ದು, ಅನಗತ್ಯ ಖರ್ಚು ಹೆಚ್ಚಾಗಲಿವೆ. ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಿ ಬರಲಿದ್ದು, ವ್ಯಾಪಾರದಲ್ಲಿ ಏರಿಳಿತ. ನೌಕರ ವರ್ಗದವರಿಗೆ ಕಿರಿಕಿರಿ, ಅನಾರೋಗ್ಯ

ವೃಶ್ಚಿಕ /  ಕೈಗೊಂಡ ಕೆಲಸಗಳನ್ನು ಚುರುಕಾಗಿ ಹಾಗೂ ಉತ್ಸಾಹದಿಂದ ಪೂರ್ಣಗೊಳಿಸಲಿದ್ದು, ಸಮಾಜದಲ್ಲಿ ಅವರ ಗೌರವ ಮತ್ತು ಪ್ರತಿಷ್ಠೆ ವೃದ್ಧಿಯಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ, ದೂರದ ಸಂಬಂಧಿಗಳನ್ನು ಭೇಟಿಯಾಗುವ ಸುಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷ ಗೌರವ ಸಿಗಲಿದೆ.

predict for all twelve zodiac signs
predict for all twelve zodiac signs

ಧನುಸ್ಸು / ಉದ್ಯೋಗ ಹುಡುಕಾಟದ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದ್ದು, ಸ್ನೇಹಿತರೊಂದಿಗಿದ್ದ ಹಳೆಯ ಭಿನ್ನಾಭಿಪ್ರಾಯ ದೂರವಾಗಲಿವೆ. ಔತಣಕೂಟಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವ್ಯಾಪಾರಿಗಳಿಗೆ ಆರ್ಥಿಕ ಲಾಭ ಹಾಗೂ ನೌಕರರಿಗೆ ಉನ್ನತ ದಿನ

ಮಕರ / ಅಭಿಪ್ರಾಯ ಭೇದ ಹೊಂದುವ ಸಾಧ್ಯತೆಗಳಿದ್ದು, ನಿರೀಕ್ಷೆಗೂ ಮೀರಿದ ಆರ್ಥಿಕ ವೆಚ್ಚ ಎದುರಾಗಲಿವೆ. ಕೈಗೆತ್ತಿಕೊಂಡ ಯೋಜನೆಗಳಿಗೆ ಅಡೆತಡೆ, ಅನಾರೋಗ್ಯದ ಸಮಸ್ಯೆ. ವ್ಯಾಪಾರದಲ್ಲಿ ಈ ದಿನ ಸಾಧಾರಣವಾಗಿರಲಿದೆ ಹಾಗೂ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ.

ಕುಂಭ /  ಆರಂಭಿಸಿದ ಕೆಲಸ ಅರ್ಧಕ್ಕೇ ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಸಂಬಂಧಿಕರೊಂದಿಗೆ ಮನಸ್ತಾಪ  ವ್ಯಾಪಾರ ವಹಿವಾಟುಗಳಲ್ಲಿ ಏರುಪೇರು. ಸ್ಥಳ ಅಥವಾ ಹುದ್ದೆಯ ಬದಲಾವಣೆಯಾಗುವ ಲಕ್ಷಣಗಳಿದ್ದು,ದೇವರ ದ್ಯಾನದಿಂದ ಸಮಸ್ಯೆಗೆ ಉತ್ತರ ಸಿಗಲಿದೆ. 

ಮೀನ /  ಅನಿರೀಕ್ಷಿತವಾಗಿ ಹಣಕಾಸಿನ ಲಾಭ, ದೂರದಿಂದ ಶುಭ ಸಮಾಚಾರ. ವಿವಿಧ ಸಮಾರಂಭಗಳು ಹಾಗೂ ಸಭೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೇವಸ್ಥಾನಗಳಿಗೆ ಭೇಟಿ ವ್ಯಾಪಾರಸ್ಥರಲ್ಲಿ ಹೆಚ್ಚಿನ ಹುಮ್ಮಸ್ಸು ,ನೌಕರರಿಗೆ ನಿರೀಕ್ಷಿಸದ ಹೊಸ ಜವಾಬ್ದಾರಿ 

predict for all twelve zodiac signs
predict for all twelve zodiac signs

ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

what do the stars predict for all twelve zodiac signs on March 24 2026,why are certain signs seeing positive career shifts?

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor