ಶಿವಮೊಗ್ಗದ 50ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಎರಡು ದಿನ ವಿದ್ಯುತ್​ ವ್ಯತ್ಯಯ

ಶಿವಮೊಗ್ಗ: ನಗರದ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 01 ಮತ್ತು ಮೇ 02 ರಂದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಶಿವಮೊಗ್ಗ: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ ಅಪಘಾತ; ಇಬ್ಬರು ಸಾವು, ಹಲವರಿಗೆ ಗಾಯ

ತಾವರೆಚಟ್ನಹಳ್ಳಿ ವಿದ್ಯುತ್ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಮಹತ್ವದ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. 

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು

ಅಶ್ವತ್‌ನಗರ, ಕೀರ್ತಿನಗರ, ದೇವಂಗಿ ಹಂತಗಳು, ಬಸವೇಶ್ವರನಗರ, ಡಾಲರ್ಸ್‌ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಲೇಔಟ್, ಪೆಬಲ್ಸ್ ಅಪಾರ್ಟ್‌ಮೆಂಟ್, ಶಾಂತಿನಗರ ಹಾಗೂ ರಾಗಿಗುಡ್ಡ ಭಾಗಗಳಲ್ಲಿ ಪವರ್ ಕಟ್ ಇರಲಿದೆ.

ಇದಲ್ಲದೆ, ಜೆಎನ್‌ಸಿಸಿ ಇಂಜಿನಿಯರಿಂಗ್ ಕಾಲೇಜ್, ಕೃಷಿ ಕಾಲೇಜ್, ಬೊಮ್ಮನಕಟ್ಟೆ ಎ ಇಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಅಕ್ಷರನಗರ, ಪೆರ್ಫೆಕ್ಟ್ ಅಲಾಯ್ಸ್ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. 

ಗ್ರಾಮೀಣ ಭಾಗಗಳಾದ ಬಿಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ ಸೇರಿದಂತೆ ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಮತ್ತು ಪೆಟ್ರೋಲ್ ಬಂಕ್‌ಗಳಲ್ಲೂ ಎರಡು ದಿನಗಳ ಕಾಲ ವಿದ್ಯುತ್ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ.

Power Cut in Shivamogga Check Affected Areas

Power Cut in Shivamogga Check Affected Areas Power Cut Bhadravati Power Scheduled power cuts Power cut in Bhadravatipower Shikaripura  Power Outage july 27
Power Cut in Shivamogga