ಆಗಸ್ಟ್​ 14 ಕ್ಕೆ ವಿಲಕ್ಷ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ

ಶಿವಮೊಗ್ಗ: ತುಳುನಾಡಿನ ಐತಿಹಾಸಿಕ ಹಿನ್ನೆಲೆ ಹಾಗೂ ಮಂದಾರ್ತಿ ಪುಣ್ಯಕ್ಷೇತ್ರದ ಭಕ್ತನೊಬ್ಬನ ಜೀವನದ ದೈವೀ ಪವಾಡಗಳ ಕಥಾಹಂದರ ಹೊಂದಿರುವ ವಿಲಕ್ಷ ಪ್ರಿಕ್ವೆಲ್​ ಚಲನಚಿತ್ರ ಆಗಸ್ಟ್ 14 ರಂದು ವಿಶ್ವಾದ್ಯಂತ 8 ಭಾಷೆಗಳಲ್ಲಿ ತೆರೆಕಾಣಲಿದೆ. ನಿರ್ದೇಶಕ ಸಂಜಯ್ ಕಾಡೂರು ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಚಿತ್ರೀಕರಣ ಪೂರೈಸಿದ್ದು, ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. 

ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು

 ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ದಯಾನಂದ ಕಾಡೂರು, ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಷ್ಟಕರವಾದ ದೃಶ್ಯಗಳನ್ನು ವಿಲಕ್ಷ ಚಿತ್ರತಂಡವು ಅತ್ಯಂತ ನೈಜವಾಗಿ ಸೆರೆಹಿಡಿದಿದೆ. ತುಳುನಾಡಿನ ಸಂಸ್ಕೃತಿ ಮತ್ತು ಜಾನಪದ ಆಚರಣೆಗಳನ್ನು ಈ ಸಿನಿಮಾ ಪೂರ್ಣ ಪ್ರಮಾಣದಲ್ಲಿ ಒಳಗೊಂಡಿದೆ ಎಂದು ವಿವರಿಸಿದರು. 

ದೈವದ ಆಚರಣೆಗಳನ್ನು ಎಲ್ಲೂ ಅಪಹಾಸ್ಯ ಮಾಡದೆ ಅಥವಾ ಅನುಕರಣೆ ಮಾಡದೆ ವಾಸ್ತವ ಸಂಗತಿಗಳ ಮೂಲಕ ಮೂಲ ಸ್ವರೂಪದ ತುಳುನಾಡನ್ನು ತೋರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಕೃತಿಯು ವ್ಯಾಪಾರೀಕರಣವಾಗಿ ದಾರಿ ತಪ್ಪುತ್ತಿರುವ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಆಳುಪ ಅರಸರ ಕಾಲದಿಂದ ಇಂದಿನವರೆಗಿನ ತೌಳವ ಸಂಸ್ಕೃತಿಯ ಬದಲಾವಣೆಯನ್ನು ಚಾಪ್ಟರ್ 1 ನಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ನಾಯಕನಾಗಿ ನಿಖಿಲ್ ಒಕ್ಕಲಿಗ ನಟಿಸಿದ್ದು, ಚಂದು ವಿರಾಜ್, ಪ್ರತಾಪ್ ಶೆಟ್ಟಿ ಹಾಗೂ ಮಲಯಾಳಂ ನಟ ಆದರ್ಶ್ ಸುರೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಕುಸ್ ಮ್ಯಾಜಿಕ್ ಖ್ಯಾತಿಯ ಮುಕುಂದ್ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ನಿರ್ದೇಶಕ ಸಂಜಯ್ ಅವರೇ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ವಿಶೇಷ. ಶಬರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

vilaksha movie release on aug 14

vilaksha movie release on aug 14
vilaksha movie release on aug 14