Political Row Erupts Over siganduru Bridge 14 ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ: ಶಿಷ್ಟಾಚಾರ ಉಲ್ಲಂಘನೆ ಆರೋಪ, ರಾಜಕೀಯ ಜಟಾಪಟಿ!
Malnad news today / ಶಿವಮೊಗ್ಗ, ಜುಲೈ 14, 2025: ಸಾಗರದಲ್ಲಿ ಇವತ್ತು ಮಹತ್ವಾಕಾಂಕ್ಷೆಯ ಅಂಬಾರಗೋಡ್ಲು-ಕಳಸವಳ್ಳಿ ತೂಗುಸೇತುವೆಯು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಲೋಕಾರ್ಪಣೆಯಾಗಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗಪುರದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಾಗರ ಹೆಲಿಪ್ಯಾಡ್ ಮೂಲಕ ಸಿಗಂದೂರಿಗೆ ತೆರಳಿ ಸೇತುವೆ ಲೋಕಾರ್ಪಣೆಗೊಳಿಸಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 1ಕ್ಕೆ ಸಾಗರದಲ್ಲಿ ಸಭಾ ಕಾರ್ಯಕ್ರಮದಲ್ಲಿ ಸೇತುವೆಯ ಅಧಿಕೃತ ಉದ್ಘಾಟನೆ ನಡೆಯಲಿದೆ.
₹473 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಈ ಸೇತುವೆ, ಉದ್ಘಾಟನೆ ಸಮಾರಂಭದ ವಿಚಾರದಲ್ಲಿ ನಿನ್ನೆಯಿಂದ ದೊಡ್ಡ ಜಟಾಪಟಿ ನಡೆಯುತ್ತಿದೆಯಷ್ಟೆ ಅಲ್ಲದೆ, ವಿಷಯದವೂ ರಾಜಕಾರಣ ಕೆಸರಲ್ಲಿ ಮುಳುಗೇಳುತ್ತಿದೆ.

ದ್ವೀಪದ ಜನರ ಗೋಳಿನ ನಿವಾರಣೆಗಾಗಿ ನಿರ್ಮಿಸಲಾಗಿರುವ ಸೇತುವೆಯ ಲಾಭ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನಡೆಸ್ತಿವೆ. ಈ ಮೊದಲು ಸೇತುವೆಯ ಹೆಸರು ವಿಚಾರಕ್ಕೆ ಆರಂಭವಾದ ಚರ್ಚೆ, ಇದೀಗ ಸೇತುವೆಯ ಉದ್ಘಾಟನೆಯ ವಿಚಾರದಲ್ಲಿಯು ದೊಡ್ಡ ಗೊಂದಲ ಮೂಡಿಸಿದೆ. ಎಷ್ಟರಮಟ್ಟಿಗೆ ಎಂದರೆ, ಇವತ್ತಿನ ಉದ್ಘಾಟನೆ ಕಾರ್ಯಕ್ರಮವನ್ನೆ ಮುಂದೂಡಿ ಎಂದು ಸಿಎಂ ಸಿದ್ದರಾಮಯ್rವರು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆಯುವಷ್ಟರ ಮಟ್ಟಿಗೆ ಪಕ್ಷ ರಾಜಕಾರಣದ ವೈಯಕ್ತಿಕ ಹಿತಾಸಕ್ತಿಗಳು ಕೆಲಸ ಮಾಡಿವೆ.
ಸಿಎಂಗೆ ಅಗೌರವ ಆರೋಪ: ಜಟಾಪಟಿಗೆ ಕಾರಣವೇನು? Political Row Erupts Over siganduru Bridge 14
ಇವತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಮುಖಂಡರಿಗೆ ಆಹ್ವಾನ ನೀಡುವಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಇಷ್ಟೆ ಅಲ್ಲದೆ ಶಾಸಕನಾದ ತಮಗೂ ಹಾಗೂ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಎಸ್. ರಾಮಪ್ಪರಿಗೂ ಆಹ್ವಾನ ನೀಡಿಲ್ಲ ಎಂಬುದು ಬೇಳೂರು ಗೋಪಾಲಕೃಷ್ಣರ ವಾದ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರಡು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸಿದ್ದರೂ, ಸಚಿವಾಲಯದಿಂದ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಕಾರ್ಯಕ್ರಮವನ್ನು ಮುಂದೂಡುವಂತೆ ಹಾಗೂ ತಮ್ಮ ಅನುಕೂಲದ ದಿನಾಂಕಗಳನ್ನು ತಿಳಿಸಿದರೆ ಪಾಲ್ಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Political Row Erupts Over siganduru Bridge 14
ಅಲ್ಲದೆ, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವಂತೆ ತಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಪೂರ್ವ ನಿಗದಿತ ಕಾರ್ಯಕ್ರಮವಿರುವ ಕಾರಣ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿಯವರು ನಿತಿನ್ ಗಡ್ಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಇತ್ತ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿವೈ ರಾಘವೇಂದ್ರ ಸಿ.ಎಂರನ್ನ ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ. ಆಹ್ವಾನಪತ್ರದಲ್ಲಿ ಅವರ ಹೆಸರೇ ಮೊದಲಿದೆ ಎಂದಿದ್ದಾರೆ. ಕಳೆದ ಶುಕ್ರವಾರ ಆಹ್ವಾನಪತ್ರ ಅಂತಿಮಗೊಂಡಿದ್ದು, ತಮಗೂ ಹಾಗೂ ಯಡಿಯೂರಪ್ಪನವರಿಗೆ ಸಹ ಕಳೆದ ಶನಿವಾರವಷ್ಟೆ ಆಹ್ವಾನ ಪತ್ರಿಕೆ ಸಿಕ್ಕಿದೆ ಎಂದಿದ್ದಾರೆ. ಅಲ್ಲದೆ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ ಎಂದರು.
ಈ ಮಧ್ಯೆ ಸೇತುವೆ ಉದ್ಘಾಟನೆ ಮುಂದೂಡಲ್ಪಟ್ಟಿದೆ ಎಂಬ ವದಂತಿಗಳು ಸುಳ್ಳು ಎಂದಿರುವ ಶಿವಮೊಗ್ಗ ಬಿಜೆಪಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ. ಸಂಸದರು ಸಹ ಇದೇ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಮಳೆ ಬಂದರೂ ಕಾರ್ಯಕ್ರಮಕ್ಕೆ ಬರುವ ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ.
Political Row Erupts Over siganduru Bridge 14
ಇವೆಲ್ಲದರ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ತಮ್ಮ ನಡೆಯಿಂದ ಕುತೂಹಲ ಮೂಡಿಸಿದ್ದಾರೆ. ಸಿಎಂರವರಿಗೆ ಸಿಗಂದೂರು ಸೇತುವೆ ವಿಚಾರದಲ್ಲಿ ತಡವಾಗಿ ಆಹ್ವಾನ ನೀಡಲಾಗಿದೆ. ಅವರು ಬೇರೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಹೋಗುತ್ತಿಲ್ಲ, ಕಾರ್ಯಕ್ರಮಕ್ಕೆ ಕರೆದಿದ್ದಾರೋ ಬಿಟ್ಟಿದ್ಧಾರೋ ಅದು ಬೇರೆ ವಿಚಾರ, ಕೇಂದ್ರ ಸಚಿವರು ಬರುತ್ತಿರುವುದರಿಂದ ಅವರನ್ನು ಗೌರವಿಸಲು ತಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಥಳೀಯ ಜನಪ್ರತಿನಿಧಿಗಳು ಇರಲಿ, ಸಿಎಂ ಅವರನ್ನೇ ಕರೆಯದೆ ಅಗೌರವ ತೋರಿದ್ದಾರೆ. ವಿಷಯ ತಿಳಿದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಕರೆ ಮಾಡಿ ಆಹ್ವಾನಿಸಿದ್ದಾರೆ. ಜುಲೈ 14ರ ನಂತರ ಎಲ್ಲ ವಿಚಾರ ಮಾತನಾಡುತ್ತೇನೆ ಎಂದಿದ್ದಾರೆ.
ಒಟ್ಟಾರೆ ದೇಶದ 2ನೇ ಅತೀ ದೊಡ್ಡ ಕೇಬಲ್ ಸೇತುವೆಯ ಉದ್ಘಾಟನೆಯಲ್ಲಿ ಸಿಲ್ಲಿಲಲ್ಲಿ ರಾಜಕಾರಣ ಗೊಂದಲ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ. ಸೇತುವೆ ಯಾರಿಂದ ನಿರ್ಮಾಣವಾಯ್ತು ಎನ್ನುವುದಕ್ಕಿಂತ ಜನರಿಗಾಗಿಯೇ ನಿರ್ಮಾಣವಾಗಿದೆ ಎಂಬುದು ಮುಖ್ಯ, ಅದರ ಲಾಭ ಪಡೆಯುವ ಅವಸರದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ವೈಯಕ್ತಿಕ ಹಠಸಾಧನೆಗೆ ಮುಂದಾಗಿರುವುದು ಜಿಲ್ಲೆಯ ಗೌರವಕ್ಕೆ ತಕ್ಕುದಾದುದಲ್ಲ
Political Row Erupts Over siganduru Bridge 14 Political Row Erupts Over Ambaragodlu-Kalasavalli Bridge Inauguration in Shivamogga
