Panchanga and Daily Horoscope /ಮಲೆನಾಡು ಟುಡೆ ಸುದ್ದಿ /ವಿಶ್ವಾಸವು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ,ಶುಕ್ಲ ಪಕ್ಷದ ನವಮಿ ತಿಥಿಯು ರಾತ್ರಿ 3.00 ರವರೆಗೆ ಇರಲಿದೆ. ತದನಂತರ ದಶಮಿ ಆರಂಭವಾಗಲಿದೆ.
ರೋಹಿಣಿ ನಕ್ಷತ್ರ ಮಧ್ಯಾಹ್ನ 2.17 ರವರೆಗೆ ಇರಲಿದ್ದು, ಬಳಿಕ ಮೃಗಶಿರ ಪ್ರವೇಶವಾಗಲಿದೆ.ಅಮೃತ ಘಳಿಗೆ ಬೆಳಗ್ಗೆ 11.10 ರಿಂದ 12.41 ರವರೆಗೆ ಹಾಗೂ ಮುಂಜಾನೆ 4.22 ರಿಂದ 5.51 ರವರೆಗೆ ಇರುತ್ತದೆ.
ರಾಹುಕಾಲವು ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಇವತ್ತಿನ ದಿನಭವಿಷ್ಯ/Panchanga and Daily Horoscope
ಮೇಷ / ಕೈಗೊಂಡ ಕಾರ್ಯಗಳಲ್ಲಿ ವಿಳಂಬ. ಹಣಕಾಸಿನ ಮುಗ್ಗಟ್ಟು. ಅನಿರೀಕ್ಷಿತವಾಗಿ ಪ್ರಯಾಣ. ಸಂಬಂಧಿಕರೊಂದಿಗೆ ಮನಸ್ತಾಪ. ವಹಿವಾಟುಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದಿರಬಹುದು ಹಾಗೂ ಉದ್ಯೋಗಿಗಳಿಗೆ ಕೆಲಸದ ಒತ್ತಡ
ವೃಷಭ /ಮಂಗಳ ಕಾರ್ಯ. ಆರ್ಥಿಕ ಸ್ಥಿತಿ ಚೇತರಿಕೆ, ಆಪ್ತರಿಂದ ನೆರವು. ವ್ಯಾಪಾರಸ್ಥರಿಗೆ ಲಾಭದ ನಿರೀಕ್ಷೆ, ನೌಕರಿ ಮಾಡುವವರಿಗೆ ದಿನ ಸಂತಸದ ಸುದ್ದಿ ಸಿಗಲಿದೆ.
ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ ಕಾಳಗ: ಹೇಗಿತ್ತು ಗೊತ್ತಾ..?
ಮಿಥುನ / ಕೌಟುಂಬಿಕ ಹಾಗೂ ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಅಡೆತಡೆ. ಅಂದುಕೊಂಡ ಕೆಲಸ ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ. ಸ್ನೇಹಿತರೊಂದಿಗೆ ವಾಗ್ದಾದ. ವ್ಯಾಪಾರದಲ್ಲಿ ಮಂದಗತಿ, ಉದ್ಯೋಗದಲ್ಲಿ ಕೆಲಸ ಜಾಸ್ತಿ.
ಕರ್ಕಾಟಕ / ಶುಭ ಸಮಾರಂಭ. ಹೊಸ ಅವಕಾಶ, ಹೊಸ ಜನರ ಜೊತೆ ಒಡನಾಟ. ಆಸ್ತಿಪಾಸ್ತಿ ಸಂಬಂಧಿಸಿದ ವ್ಯಾಜ್ಯ ಬಗೆಹರಿಯಲಿವೆ. ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗಿಗಳಿಗೆ ಮುಂಬಡ್ತಿ.
ಸಿಂಹ / ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸ ಮುಗಿವುದು, ದಿನ ಯಶಸ್ವಿಯಾಗಿ ಮುಗಿಸುವಿರಿ. ಹಣಕಾಸಿನ ಹರಿವು ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಹೊಸ ಚೈತನ್ಯ.
ಕನ್ಯಾ / ಅನಿವಾರ್ಯ ಕಾರಣ ಕೆಲವು ಕೆಲಸಕ್ಕೆ ತಡೆ. ತೆಗೆದುಕೊಂಡ ನಿರ್ಧಾರಗಳಲ್ಲಿ ಬದಲಾವಣೆ. ಪುಣ್ಯಕ್ಷೇತ್ರಗಳ ದರ್ಶನ ಪಡೆಯುವಿರಿ. ವ್ಯಾಪಾರ ಮತ್ತು ವೃತ್ತಿರಂಗದಲ್ಲಿ ಬದಲಾವಣೆ

ತುಲಾ / ದುಡಿಮೆಗಿಂತ ಖರ್ಚಿನ ಪ್ರಮಾಣವೇ ಹೆಚ್ಚು. ಕೈಹಾಕುವ ಕೆಲಸಗಳಲ್ಲಿ ವಿಘ್ನ ಎದುರಾಗಬಹುದು. ದೂರದೂರಿಗೆ ಪ್ರಯಾಣ. ಮನೆ ಹಾಗೂ ಹೊರಗಡೆ ಮಾನಸಿಕ ಒತ್ತಡ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಿರಿಕಿರಿ
ವೃಶ್ಚಿಕ / ಸಾಲಬಾಧೆಗಳಿಂದ ಮುಕ್ತಿ. ಬಾಂಧವ್ಯ. ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಅಂದುಕೊಂಡ ಕೆಲಸ ಸುಗಮವಾಗಿ ನೆರವೇರಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ
ಧನುಸ್ಸು /ಸಂತಸದ ಸುದ್ದಿಯೊಂದು ಕಿವಿಗೆ ಬೀಳಲಿದೆ. ಕೈಗೊಂಡ ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಅಭಿವೃದ್ಧಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಹೊಸ ಪರಿಚಯ. ವಸ್ತುಲಾಭ ಹಾಗೂ ಉದ್ಯೋಗ-ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ

Panchanga and Daily Horoscope
ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ
ಮಕರ / ಹಣಕಾಸಿನ ವ್ಯವಹಾರಗಳಲ್ಲಿ ನಿರಾಸೆ. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ. ಕೆಲಸಗಳಲ್ಲಿ ಅಡೆತಡೆ ಎದುರಾಗಲಿವೆ. ನೆಂಟರಿಷ್ಟರೊಂದಿಗೆ ವಾಗ್ವಾದ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಈ ದಿನ ಸಾಧಾರಣವಾಗಿರಲಿದೆ.
ಕುಂಭ / ಕೌಟುಂಬಿಕ ವಲಯದಲ್ಲಿ ಸಮಸ್ಯೆ ತಲೆದೋರಬಹುದು. ಸಾಲಕ್ಕಾಗಿ ಪ್ರಯತ್ನಿಸುವ ಪರಿಸ್ಥಿತಿ ಬರಬಹುದು. ಮನಸ್ಸಿನ ಆಲೋಚನೆ ಚಂಚಲವಾಗಿರಲಿವೆ. ದೂರ ಪ್ರಯಾಣ. ವಾಣಿಜ್ಯ ವಹಿವಾಟಿನಲ್ಲಿ ಏರಿಳಿತ, ಉದ್ಯೋಗಿಗಳಿಗೆ ನೂತನ ಜವಾಬ್ದಾರಿ.
ಮೀನ /ಸಲಹೆ ಸೂಚನೆಗಳನ್ನು ಪಾಲಿಸುವಿರಿ. ಲಾಭ ಗಳಿಸುವಿರಿ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಉತ್ಸಾಹಭರಿತ ವಾತಾವರಣ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
