ನಂದಿನ ತುಪ್ಪ ಹಾಗೂ ಬೆಣ್ಣೆಗಳ ಬೆಲೆ ದಿಡೀರ್​ ಹೆಚ್ಚಳ, ಎಷ್ಟಿದೆ ನೂತನ ಬೆಲೆ

ಹಂಚಿಕೊಳ್ಳಿ
WhatsApp Facebook X Telegram
Nandini Ghee and Butter Price Hike
Nandini Ghee and Butter Price Hike

Nandini Ghee ಬೆಂಗಳೂರು : ರಾಜ್ಯದ ಹಾಲು ಉತ್ಪಾದಕರ ಮಹಾಮಂಡಳವಾದ ಕೆಎಂಎಫ್ (KMF), ತನ್ನ ಮನೆಮಾತಾಗಿರುವ ನಂದಿನಿ ಬ್ರ್ಯಾಂಡ್‌ನ ದಿನನಿತ್ಯದ ಪ್ರಮುಖ ಉತ್ಪನ್ನಗಳಾದ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ, ಪರಿಷ್ಕರಿಸಲಾದ ಹೊಸ ದರಪಟ್ಟಿಯು ಇಂದಿನಿಂದಲೇ  ರಾಜ್ಯಾದ್ಯಂತ ಇರುವ ಎಲ್ಲಾ ನಂದಿನಿ ಔಟ್‌ಲೆಟ್‌ಗಳಲ್ಲಿ ಜಾರಿಯಾಗಲಿದೆ.

ತುಪ್ಪ ಪ್ರತಿ ಕೆಜಿಗೆ  15 ಹಾಗೂ ಬೆಣ್ಣೆ ಪ್ರತಿ ಕೆಜಿಗೆ 50 ಹೆಚ್ಚಳವಾಗಿದ್ದು, ಕ್ರಮವಾಗಿ ದರಗಳು 715 ಮತ್ತು 660 ಆಗಿವೆ. ಇದಕ್ಕೂ ಮುಂಚೆ ದರ ಕ್ರಮವಾಗಿ 700 ಮತ್ತು 610 ರೂಪಾಯಿ ಇತ್ತು. ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ಕೈಗೊಂಡಿರುವ ಈ ನಿರ್ಧಾರವು ರಾಜ್ಯದ ಗ್ರಾಹಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

ದಿನನಿತ್ಯದ ಗೃಹ ಬಳಕೆಯನ್ನಷ್ಟೇ ಅಲ್ಲದೆ, ಈ ಬೆಲೆ ಏರಿಕೆಯು ಪ್ರಮುಖವಾಗಿ ಬೇಕರಿ ಉದ್ಯಮ ಹಾಗೂ ಹೋಟೆಲ್ ರಂಗದ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ. ಸಿಹಿತಿಂಡಿಗಳ ತಯಾರಿಕೆ ಮತ್ತು ತಿನಿಸುಗಳಿಗೆ ಬೆಣ್ಣೆ-ತುಪ್ಪವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರು, ಬಂಡವಾಳದ ವೆಚ್ಚ ದಿಢೀರ್ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಹಾಲು ಒಕ್ಕೂಟಗಳ ದೈನಂದಿನ ನಿರ್ವಹಣಾ ವೆಚ್ಚ, ಪ್ಯಾಕಿಂಗ್ ಸಾಮಗ್ರಿಗಳ ದರ ಹಾಗೂ ಸಾರಿಗೆ ವೆಚ್ಚಗಳು ಇತ್ತೀಚಿನ ದಿನಗಳಲ್ಲಿ ವಿಪರೀತ ಹೆಚ್ಚಾಗಿವೆ. ಹೀಗಾಗಿ ಸಂಸ್ಥೆಯ ಹಿತದೃಷ್ಟಿಯಿಂದ ಉತ್ಪನ್ನಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಯಿತು ಎಂದು ಕೆಎಂಎಫ್ ಸ್ಪಷ್ಟನೆ ನೀಡಿದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor