Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
FLASHBACK

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

13
Last updated: September 7, 2024 7:59 pm
13
Share
SHARE

SHIVAMOGGA | MALENADUTODAY NEWS 

- Advertisement -

Sep 7, 2024   naga yakshi mata  

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಓದುಗ ಬಳಗಕ್ಕೆ ಒಬ್ಬ ಪವಾಡ ಪುರುಷನ ಬಗ್ಗೆ ತಿಳಿಸಬೇಕು ಎಂಬ ತವಕ ಮಲೆನಾಡು ಟುಡೆಗೆ ಇತ್ತು. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಯೋಗೆಂದ್ರ ಗುರುಗಳನ್ನು ನೆನಪು ಮಾಡಿಕೊಳ್ಳುತ್ತಾ..ಅವರ ಬಗ್ಗೆ ಬರೆಯುತ್ತಿದ್ದೇವೆ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Pacche Linga History ಶಿವಲಿಂಗವನ್ನು ಬಿಡದ ಬ್ಯಾಂಕ್​ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! JP Flashback

  Naga yakshi mata ಹೊಸನಗರ ನಾಗ ಯಕ್ಷಿ ಮಠ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಿಂದ ಗುಳಿಗುಳಿ ಶಂಕರಕ್ಕೆ ಹೋಗುವ ಮಾರ್ಗದಲ್ಲಿ ಸಾರಗನ ಜಡ್ಡು ಎಂಬ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ ನಾಗಯಕ್ಷಿ ಮಠವಿದೆ. ಇದು ಪವಾಡದ ನೆಲವು ಹೌದು. ಈ ಕ್ಷೇತ್ರಕ್ಕೆ ಈಗ ಭಕ್ತ ಸಾಗರವೇ ಹರಿದು ಬರುತ್ತಿದೆ. ಗುರುಗಳಿಂದ ತಮ್ಮ ಇಷ್ಟಾರ್ಥಗಳು ನೆರವೇರಿದೆ. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ ಎಂದು ಹೇಳುವ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. 

ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗದ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಯೋಗೇಂದ್ರ ಗುರುಗಳು

ದಶಕದ ಹಿಂದೆ ಯೋಗೆಂದ್ರ ಗುರುಗಳ ಪರಿಚಯ ಕೆವಲರಿಗಷ್ಟೆ ಇತ್ತು. ಅದರಲ್ಲಿ ನಾನು ಕೂಡ ಒಬ್ಬ. ನಾನು ಹಾಗು ಗುರುಗಳು 14 ವರ್ಷಗಳಿಂದಲೂ ಚಿರಪರಿಚಿತರು. ಅವರ ಪವಾಡ ಶಕ್ತಿಯ ಮಹಿಮೆಯನ್ನು ಮಾಧ್ಯಮಗಳಿಗೆ ಪರಿಚಯಿಸಬೇಕೆಂದು ಎಷ್ಟೆ ದುಂಬಾಲು ಬಿದ್ದರೂ ಯೋಗೆಂದ್ರ ಗುರುಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಪ್ರಚಾರದಿಂದ ದೂರ ಉಳಿದು, ಸದಾ ಅನುಷ್ಠಾನದಲ್ಲಿಯೇ ಇರುವ ಮಹಾನ್ ಪುರುಷನ ಬಗ್ಗೆ ಹೇಳದೆ ಹೋದರೆ, ಅದು ಸಮಾಜಕ್ಕಾಗುವ ನಷ್ಟವಾಗುತ್ತದೆ. 

ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ!

ಮಲೆನಾಡಿನ ಮೂಲೆಯೊಳಗಿದ್ದ ಯುವಕನೊಬ್ಬ ಇದ್ದಕ್ಕಿದ್ದ ಹಾಗೆ ಗ್ರಾಮ ತೊರೆದು ಹಿಮಾಲಯದ ತಪ್ಪಲಿನ ನಾಗಸಾಧುಗಳ ಆಶ್ರಯ ಪಡೆದಾಗ ಮುಂದೆ ನಡೆದಿದ್ದೇಲ್ಲಾ ರೋಚಕ ಸಂಗತಿಯೇ ಆಗಿತ್ತು, ಸಾಮಾನ್ಯ ಯುವಕನೊಬ್ಬ ಇದ್ದಕ್ಕಿದ್ದ ಹಾಗೆ ಎದುರಿಗೆ ಬಂಧವರಿಗೆ ಭವಿಷ್ಯ ಹೇಳಲು ಅಣಿಯಾದ. ಅದು ನಿಜವಾಗುತ್ತಿತ್ತು. ಅದರಿಂದಲೇ ಭಕ್ತರು ಚಿಗುರೊಡೆಯಲು ಆರಂಭವಾದರು.

ಯೋಗೆಂದ್ರ ಗುರುಗಳನ್ನು ಪೂರ್ವಾಶ್ರಮ) ಹತ್ತಿರದಿಂದ ಬಲ್ಲವರು ಮೂಗು ಮುರಿದಿದ್ದು ಇದೆ. ಆದರೆ ಅವರ ಪವಾಡ ಮಹಿಮೆ ಗೊತ್ತಾದ ನಂತರ ಅವರನ್ನು ಆವರಿಸಿಕೊಂಡವರು ಇದ್ದಾರೆ.

Yogendra gurugalu nagayakshi mata

ಅದೇನೆ ಆಗಲಿ ಸಂಕಷ್ಟದಲ್ಲಿರುವ ಜನರು, ತಮ್ಮ  ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಜ್ಯೋತಿಷಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಯೋಗೆಂದ್ರ ಗುರುಗಳು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ. ಅವರಿಗೆ ಹಿಂದು ಮುಸ್ಲಿಂ ಕ್ರಿಶ್ಟಿಯನ್ ಧರ್ಮದ ಶಿಷ್ಯ ವೃಂದವಿದೆ. ಅವರು ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ಅವರ ಬಳಿಗೆ ಬಂದರೆ ಚರ್ಚ್ ಗೆ ಹೋಗಿ ಬೇಡಿಕೋ..ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಮುಸ್ಲಿಂ ವ್ಯಕ್ತಿ ಹೋದರೆ ಮಸಿದಿಗೆ ಹೋಗಿ ಬೇಡಿಕೋ ಅನ್ನುತ್ತಾರೆ. ಅಂತವರಿಗೆ ಇಂತಹ ದೇವಸ್ಥಾನಕ್ಕೆ ಹೋಗಿ ಕೈಮುಗಿ, ಹೋಮ ಹವನ ಮಾಡಿಸು ಎಂದು ಎಂದಿಗೂ ಹೇಳುವುದಿಲ್ಲ. ಧಾರ್ಮಿಕ ಭಾವನೆಗಳಿಗೆ ಬೆಲೆಕೊಡುವ ಮಹಾನ್ ವ್ಯಕ್ತಿ ಯೋಗೆಂದ್ರ ಗುರುಗಳು, ನೊಂದ  ವ್ಯಕ್ತಿಗಳ ಪರವಾಗಿ ಯೋಗೆಂದ್ರ ಗುರುಗಳು ಅನುಷ್ಠಾನ ಮಾಡಿ ಪ್ರಾರ್ಥನೆ ಮಾಡಿರುತ್ತಾರೆ. ಅದರ ಫಲಿತಾಂಶ ಸಂಕಟದಲ್ಲಿರುವ ವ್ಯಕ್ತಿಗೆ ಪರಿಹಾರನ್ನು ನೀಡಿರುತ್ತದೆ. ಸದಾ ಅನುಷ್ಠಾನದಲ್ಲಿರುವ ಗುರುಗಳು ಕೇವಲ ಪ್ರಾರ್ಥನೆಯಿಂದಲೇ ಶಕ್ತಿ ಹೊಂದಿದ್ದು, ಅನುಷ್ಠಾನ ನಂತರವಷ್ಟೆ ಭಕ್ತರಿಗೆ ಅವಕಾಶ ನೀಡುತ್ತಾರೆ.

Yogendra gurugalu nagayakshi mata

ಯೋಗೆಂದ್ರ ಗುರಗಳಿಗೆ ಆ ಮಹಾನ್ ಶಕ್ತಿ ಬಂದಿದ್ದಾದರೂ ಎಲ್ಲಿಂದ? 

ಎಲ್ಲರಂತೆ ಯೋಗೆಂದ್ರ ಗುರುಗಳು ನಾರ್ಮಲ್ ಆಗಿಯೇ ಇದ್ದವರು. ಇದ್ದಕ್ಕಿದ್ದ ಹಾಗೆ ಅವರು ನುಡಿ ಹೇಳಲು ಪ್ರಾರಂಭಿಸಿದರು. ಇದು ಯಾವ ಶಕ್ತಿ ಎಂಬುದನ್ನು ಮೊದಲಿಗೆ ಅವರಿಗೆ ಅರಿಯಲು ಸಾಧ್ಯವಾಗಲಿಲ್ಲ. ಅವರು ನುಡಿ ಹೇಳುತ್ತಾರೆಂದರೆ ಅರ್ಥ ಒಬ್ಬ ಮನುಷ್ಯ ಎದುರಿಗೆ ಬಂದರೆ ಅವರು ಹೀಗೆ..ಅಂತ ಅವರ ಬಗ್ಗೆ ಭೂತ ವರ್ತಮಾನ ಹಾಗು ಭವಿಷ್ಯ ಕಾಲದ ಬಗ್ಗೆ ನೇರವಾಗಿ ಹೇಳುತ್ತಿದ್ದರು. ಇದು ನಿಜ ಕೂಡ ಆಗುತ್ತಿತ್ತು. ಆಗ ಗುರುಗಳಿಗೆ ತಮ್ಮ ಬಗ್ಗೆಯೇ ಅನುಮಾನ ಪ್ರಾರಂಭವಾಯಿತು. ನಾನು ಏನು ಮಾಡುತ್ತಿದ್ದೇನೆ..ನನಗೇಕೆ ಹೀಗೆ ಆಗುತ್ತಿದೆ ಎಂಬ ತವಕದಲ್ಲಿಯೇ ಜನರ ಸಂಕಷ್ಟ ನಿವಾರಣೆ ಮಾಡಲು ಅಣಿಯಾದರು. ಈ ಸಂದರ್ಭದಲ್ಲಿ ಗುರುಗಳ ಪೋಷಕರು ಮದುವೆ ಮಾಡಿಸಲು ಜ್ಯೋತಿಷಿಗಳನ್ನು ಕೇಳಿದಾಗ, ಅವರು, ನೀವು ಮದುವೆ ಮಾಡಿದರೆ, ನಿಮ್ಮ ಕುಟುಂಬಕ್ಕೆ ಸಂಕಷ್ಟ ಎದುರಾಗುತ್ತದೆ. ನಿಮ್ಮ ಮಗ ನಿಮ್ಮ ಕೈಗೆ ಸಿಗುವುದಿಲ್ಲ ಎಂದು ಹೇಳಿದರಂತೆ.  ಗುರುಗಳಿಗೂ ಕೂಡ ಮದುವೆ ಬಗ್ಗೆ ಕೊಂಚವೂ ಆಸಕ್ತಿ ಇರಲಿಲ್ಲ. 

Yogendra gurugalu nagayakshi mata

ಈ ರೀತಿ ದೈವ ನುಡಿ ಹೇಳುವಾಗಲೇ ಈಗಿರುವ ಸಾಗರನಜಡ್ಡಿನಲ್ಲಿರುವ ಅಡುಗೆ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಹುತ್ತ ಬೆಳೆಯಲು ಆರಂಭವಾಯಿತು. ಸರ್ಪಗಳು ಕಾಣಿಸಿಕೊಳ್ಳತೊಡಗಿತು. ಕುಟುಂಬಸ್ಥರು ಹಾಗು ಸರ್ಪಗಳು ಒಟ್ಟಿಗೆ ಬಾಳುವಂತ ವಾತಾವರಣ ನಿರ್ಮಾಣವಾಯಿತು. ಗುರುಗಳು ಬೇರೆ ಉದ್ಯೋಗ ಮಾಡಿಕೊಂಡು ಸುತ್ತಾಡಿಕೊಂಡೇ ಜನರಿಗೆ ಪರಿಹಾರ ಹೇಳುತ್ತಿದ್ದರು. ಗುರುಗಳಿಗೆ ತಮ್ಮಲ್ಲಿರುವ ಶಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ನಾನು ಶಾಶ್ವತವಾಗಿ ಗದ್ದುಗೆಯಲ್ಲಿ ಕೂತು ಹೇಳಿಕೆ ನೀಡಬೇಕು ಎನ್ನುವಾಗಲೇ ಅವರ ಮೈಸೂರಿನ ಆತ್ಮಿಯರೊಬ್ಬರು ಸಂಕ್ರಾಂತಿ ಹಬ್ಬದಂದು ಗುರುಗಳಿಗೆ ಕುರ್ಚಿ ನೀಡಿ ಕೂರಿಸಿದರು. ಅಲ್ಲಿಂದ ಪ್ರಾರಂಭವಾದ ದೈವನುಡಿ ಶಖೆ ಇಂದಿನವರೆಗೂ ಮುಂದುವರೆದಿದೆ.  ಇಂದು ಲಕ್ಷಾಂತರ ಭಕ್ತರು ದೇಶ ವಿದೇಶಗಳಿಂದ ಬಂದು ಗುರುಗಳ ಆಶಿರ್ವಾದ ಪಡೆಯುತ್ತಿದ್ದಾರೆ. ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ. 

Yogendra gurugalu nagayakshi mata

ಕೇವಲ ನಾಗಯಕ್ಷಿಯಲ್ಲ ನಾಲ್ಕೈದು ದೇವಶಕ್ತಿಗಳು ಗುರುಗಳನ್ನು ಆಲಿಂಘಿಸಿವೆ

ಯೋಗೆಂದ್ರ ಗುರುಗಳಿಗೆ ಕೇವಲ ನಾಗಯಕ್ಷಿ ಮಾತ್ರ ಆಹ್ವಾಹನೆ ಆಗುತ್ತದೆ ಎಂದು ಭಕ್ತರು ಭಾವಿಸಿದ್ದರು. ಆದರೆ ಗುರಗಳಿಗೆ ನಾಲ್ಕೈದು ದೈವಶಕ್ತಿಗಳು ನುಡಿ ಹೇಳಿಸುತ್ತದೆ. ಈ ಶಕ್ತಿಯಿಂದಾಗಿಯೇ ಪ್ರಶ್ನಾವಳಿಗಳು ಬರಲು ಪ್ರಾರಂಭವಾಯಿತು. ಅಷ್ಟಮಂಗಳದಲ್ಲಿ ಹೇಳಿಕೆ ಬರಲು ಪ್ರಾರಂಭವಾಯಿತು. ಇಂದು ದೊಡ್ಡ ದೊಡ್ಡ ಕ್ಷೇತ್ರಗಳಿಗೂ ನಿಂತು ಹೇಳುವ ಶಕ್ತಿಯನ್ನು ಯೋಗೆಂದ್ರ ಗುರುಗಳು ಹೊಂದಿದ್ದಾರೆ. 

Yogendra gurugalu nagayakshi mata

ಮಾಟ ತಂತ್ರ ಬ್ಲಾಕ್ ಮ್ಯಾಜಿಕ್ ಗಳು ಗುರುಗಳ ಮುಂದೆ ನಡೆಯೋದಿಲ್ಲ

ಸಾಮಾನ್ಯವಾಗಿ ಯೋಗೆಂದ್ರ ಗುರುಗಳ ಬಳಿ ಬರುವ ಭಕ್ತರಲ್ಲಿ ಬಹುತೇಕರು, ನೆಗೆಟಿವಿ ವೈಬ್ ನಲ್ಲಿರುವ ವ್ಯಕ್ತಿಗಳೇ ಆಗಿದ್ದಾರೆ. ಮಾಟ ಮಂತ್ರ ತೆಗೆಸಲು ಬರುತ್ತಾರೆ. ಯೋಗೆಂದ್ರ ಗುರುಗಳು ಇಂತಹ ದುಷ್ಟಶಕ್ತಿಗಳನ್ನು ಕ್ಷಣಾರ್ದದಲ್ಲಿ ಹೊರಹಾಕುವ ಮಹಾನ್ ಶಕ್ತಿ ಅವರಲ್ಲಿದೆ. ಅಲ್ಲದೆ ಆಸ್ಪತ್ರೆಯಲ್ಲಿ ವಾಸಿಯಾಗದ ರೋಗಗಳನ್ನು ಯೋಗೆಂದ್ರ ಗುರುಗಳು ಗುಣಪಡಿಸಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಭಕ್ತ ಸಮೂಹದಲ್ಲಿದೆ. 

Yogendra gurugalu nagayakshi mata

ಅಘೋರಿಗಳಿಗೆ ನಾಗಸಾಧುಗಳು ಯೋಗೆಂದ್ರ ಗುರುಗಳಿಗೆ ಫಿದಾ

ಹೌದು ಈ ಮಾತು ಹೇಳಿದರೆ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ನಾಗಸಾಧುಗಳು ಅಘೋರಿಗಳು ಹಠಸಾಧುಗಳು ಹಾಗು ಮಹಿಮಾ ಪುರುಷರಾಗಿದ್ದಾರೆ. ಅಂತಹ ಮಹಿಮಾ ಪುರುಷರೇ ಯೋಗೆಂದ್ರ ಗುರುಗಳನ್ನು ಕಂಡೊಂಡನೆ ವಿಚಿತ್ರವಾಗಿ ವರ್ತಿಸುತ್ತಾರೆ. ಕಾಲಿಗೆ ನಮಸ್ಕರಿಸುತ್ತಾರೆ ವರ್ಷಕ್ಕೆ ನಾಲ್ಕೈದು ಬಾರಿ ಗುರುಗಳನ್ನು ಹುಡುಕಿಕೊಂಡು ಹಿಮಾಲಯದಿಂದ ಬರುತ್ತಾರೆ. ನಾಲ್ಕೈದು ದಿನ ಇದ್ದು ಗುರುಗಳ ಆಶಿರ್ವಾದ ಪಡೆದು ಹೋಗುತ್ತಾರೆ. ಗುರುಗಳಿಗೆ ಮೊದಲಿನಿಂದಲೂ ಹಿಮಾಲಯದ ಸಾಧುಗಳ ಜೊತೆಗೆ ನಿಕಟ ಸಂಪರ್ಕವಿದೆ.

Yogendra gurugalu nagayakshi mata

ಮಠದಿಂದ ಎಲ್ಲರಿಗೂ ಅನುಕೂಲವಾಗಬೇಕು

ಹೌದು ಯೋಗೆಂದ್ರ ಗುರುಗಳ ಶಕ್ತಿಯ ಮಹಿಮೆ ಸಂಕಟದಲ್ಲಿರುವ ಎಲ್ಲಾ ವ್ಯಕ್ತಿಗಳಿಗೂ ಸಿಗಬೇಕು ಮಠ ಕಟ್ಟಬೇಕು. ಅಲ್ಲಿಗೆ ಬರುವ ಭಕ್ತರಿಗೆ ಊಟ ಹಾಕಬೇಕು ಎಂಬ ಆಶಯ ಗುರುಗಳಿಗೂ ಕೂಡ ಇದೆ. ಆದರೆ ಗುರುಗಳು ಯಾರ ಬಳಿಯೂ ಈವರೆಗೆ ಕೈಚಾಚಿಲ್ಲ. ಭಕ್ತರು ನೀಡುವ ಕಾಣಿಕೆ ದೇಣಿಗೆಯಲ್ಲಿ ಮಠ ಬೆಳೆಯುತ್ತಿದೆ.

Yogendra gurugalu nagayakshi mata

ಪುನಿತ್ ರಾಜ್ ಕುಮಾರ್ ಸಾವಿನ ಬಗ್ಗೆ ಮುನ್ಸೂಚನೆ ನೀಡಿದ್ದ ಯೋಗೆಂದ್ರ ಗುರುಗಳು

ನಟ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ಯೋಗೆಂದ್ರ ಗುರುಗಳು ಮುಂಚೆಯೇ ಅವರ ಕುಟುಂಬದವರಿಗೆ ಮುನ್ಸೂಚನೆ ನೀಡಿದ್ದರು. ನಿಮ್ಮ ಕುಟುಂಬದಲ್ಲಿ ಸಾವಿನ ಮುನ್ಸೂಚನೆ ಇರುವುದು ಕಂಡು ಬರುತ್ತಿದೆ ಎಂದು ಫೋನ್ ನಲ್ಲಿ ತಿಳಿಸಿದ್ದರು.

Yogendra gurugalu nagayakshi mata

2016 ರಲ್ಲಿಯೇ ವಿಶ್ವ ಸ್ಥಬ್ಧವಾಗುತ್ತದೆ ಎಂದಿದ್ದ ಯೋಗೆಂದ್ರ ಗುರು

2016 ರಲ್ಲಿ ಇದೇ ಸಾಗರಗನ ಜಡ್ಡು ಮಠದಲ್ಲಿ ಗುರುಗಳು ಅನುಷ್ಠಾನದ ನಂತರ ಮಾತನಾಡುವಾಗ ವಿಶ್ವವೇ ಸ್ಥಬ್ಧವಾಗುವ ಕಾಲ ಸನ್ನಿಹಿತವಾಗಿದೆ. ರಸ್ತೆಗಳು ಖಾಲಿ ಖಾಲಿಯಾಗಿ ಕಾಣುತ್ತವೆ ಎಂದು ಹೇಳಿದ್ದರು. 2020ರಲ್ಲಿ  ಕೊರೊನಾ ದಿಂದ ಇಡೀ ವಿಶ್ವವೇ ಲಾಕ್ ಡೌನ್ ಆಗಿತ್ತು. ಕಾಲಜ್ಞಾನಿಯಂತೆ ಹೇಳಿಕೆ ನೀಡುವ ಯೋಗೆಂದ್ರ ಗುರುಗಳು ಜ್ಯೋತಿಷಿ ಅಲ್ಲ. ಅವರೊಬ್ಬ ಅವಧೂತರು. ದೈವಾಂಶ ಸಂಭೂತರು..

Yogendra gurugalu nagayakshi mata

Shimoga airport latest news | ಸೆಪ್ಟೆಂಬರ್‌ 10 ಕ್ಕೆ ಏರ್‌ಪೋರ್ಟ್‌ ಲೈಸೆನ್ಸ್‌ ನಿರ್ಧಾರ ? ಸಂಸದ ಬಿವೈಆರ್‌ ಹೇಳಿದ್ದೇನು?

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

m srikanth
Share This Article
Facebook Whatsapp Whatsapp Telegram Threads Copy Link
Previous Article Shimoga sp | ಶಿವಮೊಗ್ಗ ಗಣಪತಿ & ಎಸ್‌ಪಿ ಮಿಥುನ್‌ ಕುಮಾರ್‌ | ಈ ಸಲ ಬೇರೆಯದ್ದೇ ಆಟ | ಖಾಕಿ ಕಣ್ಣು!?
Next Article mescom news | ಸೆಪ್ಟೆಂಬರ್‌ ರಜೆಯ ಸಂಬಂಧ ಮೆಸ್ಕಾಂ ಮಹತ್ವದ ಪ್ರಕಟಣೆ | ನಾಲ್ಕು ಜಿಲ್ಲೆಯ ಜನರಿಗೆ ಅನುಕೂಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಜೈಲಲ್ಲಿ ನಡೆದಿತ್ತು ಸಿನಿಮಾ ಸ್ಟೈಲ್‌ ಎಸ್ಕೇಪ್‌ | 8 ಕೈದಿಗಳ ಮಿಂಚಿನ ಓಟಕ್ಕೆ 2 ಗಂಟೆಯಲ್ಲಿ ಬ್ರೇಕ್‌ ಹಾಕಿದ್ದ ಪೊಲೀಸ್JP Flash back

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up