ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ಮೈಸೂರು–ತಾಳಗುಪ್ಪ ರೈಲುಗಳ ನಿಲುಗಡೆ ಮುಂದುವರಿಕೆ

ಹಂಚಿಕೊಳ್ಳಿ
WhatsApp Facebook X Telegram
ರೈಲು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಸಂದರ್ಭದ ಸಾಂದರ್ಭಿಕ ಚಿತ್ರ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೈಸೂರು–ತಾಳಗುಪ್ಪ–ಮೈಸೂರು ನಡುವೆ ಸಂಚರಿಸುವ ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ (Mysuru Talaguppa Express) ಅರಸಾಳು ಮತ್ತು ಕುಂಸಿ ರೈಲು ನಿಲ್ದಾಣಗಳಲ್ಲಿ ನೀಡಲಾಗಿರುವ ನಿಲುಗಡೆಯನ್ನು ಮುಂದಿನ ಸೂಚನೆಯವರೆಗೆ ಮುಂದುವರಿಸಲಾಗಿದೆ.

ರೈಲು ಸಂಖ್ಯೆ 16227/16228 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆ ಅರಸಾಳು ರೈಲು ನಿಲ್ದಾಣದಲ್ಲಿ ಮುಂದುವರಿಯಲಿದೆ.ಇದೇ ರೀತಿ ರೈಲು ಸಂಖ್ಯೆ 16206/16205 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ಹಾಗೂ ಕುಂಸಿ ನಿಲ್ದಾಣಗಳಲ್ಲಿ ನೀಡಲಾಗಿರುವ ನಿಲುಗಡೆಯನ್ನೂ ಮುಂದುವರಿಸಲಾಗಿದೆ.ಈ ನಿಲುಗಡೆ ವ್ಯವಸ್ಥೆಯು ಆಗಸ್ಟ್ 24, 2026ರಿಂದ ಅನ್ವಯವಾಗಿದ್ದು, ಮುಂದಿನ ಸೂಚನೆ ಬರುವವರೆಗೆ ಜಾರಿಯಲ್ಲಿರಲಿದೆ.

ತಳಕು ನಿಲ್ದಾಣದಲ್ಲಿ ಗುಂತಕಲ್–ಚಿಕ್ಕಜಾಜೂರು ಪ್ಯಾಸೆಂಜರ್ ನಿಲುಗಡೆ ಮೇ 18, 2027ರವರೆಗೆ ವಿಸ್ತರಣೆ

ಮಲೆನಾಡು ಟುಡೆ ಸುದ್ದಿ / ತಳಕು / ರೈಲು ಸಂಖ್ಯೆ 57415/57416 ಗುಂತಕಲ್–ಚಿಕ್ಕಜಾಜೂರು–ಗುಂತಕಲ್ ಡೈಲಿ ಪ್ಯಾಸೆಂಜರ್ ರೈಲಿಗೆ ತಳಕು ರೈಲು ನಿಲ್ದಾಣದಲ್ಲಿ ನೀಡಲಾಗಿರುವ ತಾತ್ಕಾಲಿಕ ನಿಲುಗಡೆಯ ಅವಧಿಯನ್ನು ಮೇ 18, 2027ರವರೆಗೆ ವಿಸ್ತರಿಸಲಾಗಿದೆ.ಈ ರೈಲಿಗೆ ತಳಕು ನಿಲ್ದಾಣದಲ್ಲಿ ನೀಡಲಾಗಿರುವ ತಾತ್ಕಾಲಿಕ ನಿಲುಗಡೆಯು ಈ ಹಿಂದೆ ನವೆಂಬರ್ 17, 2026ರವರೆಗೆ ಮಾತ್ರ ಜಾರಿಯಲ್ಲಿರಲಿದೆ ಎಂದು ಸೂಚಿಸಲಾಗಿತ್ತು.ಇದೀಗ ಆ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಗುಂತಕಲ್–ಚಿಕ್ಕಜಾಜೂರು–ಗುಂತಕಲ್ ಡೈಲಿ ಪ್ಯಾಸೆಂಜರ್ ರೈಲಿನ ತಳಕು ನಿಲ್ದಾಣದ ತಾತ್ಕಾಲಿಕ ನಿಲುಗಡೆ ಮೇ 18, 2027ರವರೆಗೆ ಮುಂದುವರಿಯಲಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor