ಹೋರಿಹಬ್ಬ : ಮಾಜಿ ಶಾಸಕರ ಬೆನ್ನಿಗೆ ತಿವಿದು, ನೆಲಕ್ಕೆ ಕೆಡವಿದ ಹೋರಿ! ದೃಶ್ಯ ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
Ex-MLA Mahalingappa Gored by Bull at Horihabba in Shikaripura: Escapes Major Injury
Ex-MLA Mahalingappa Gored by Bull at Horihabba in Shikaripura: Escapes Major Injury

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಶಿಕಾರಿಪುರದಲ್ಲಿ ನಡೆದ  ಹೋರಿಹಬ್ಬದಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪರವರು ಗಾಯಗೊಂಡಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ.

ನಡೆದಿದ್ದೇನು?

ನಿನ್ನೆ ದಿನ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬ ನೋಡಲು ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಆಗಮಿಸಿದ್ದರು. 

ಸಾಗರ ಪೇಟೆಯಲ್ಲೊಂದು ಬಿದ್ದ ಹೋರಿಕರ ಮತ್ತು ಗೆದ್ದ ಮಾನವೀಯತೆಯ ಘಟನೆ

ಹೋರಿಯೊಂದು ಜನರ ನಡುವೆ ಓಡಿ ಬರುತ್ತಿದ್ದ ಸಂದರ್ಭ. ಭಯ ಬಿದ್ದ ಹೋರಿಯು ಅಲ್ಲಿದ್ದ ಜನರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ  ಮಾಜಿ ಶಾಸಕ ಮಹಾಲಿಂಗಪ್ಪ ಅವರು ಅಲ್ಲಿಯೇ ಇದ್ದ ಮನೆಯೊಂದರ ಬಾಗಿಲ ಬಳಿ ಬಂದು ಹೋರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟೊತ್ತಿಗೆ ಅವರ ಮೇಲೆ ದಾಳಿ ಮಾಡಿದ ಹೋರಿ ಕೊಂಬಿನಿಂದ ತಿವಿದು ಮೇಲಕ್ಕೆತ್ತಿ ನೆಲಕ್ಕೆ ಕೆಡವಿದೆ. 

Ex-MLA Mahalingappa Gored by Bull at Horihabba in Shikaripura: Escapes Major Injury
Ex-MLA Mahalingappa Gored by Bull at Horihabba in Shikaripura: Escapes Major Injury

ಹೋರಿಹಬ್ಬದ ನಾಯ್ಕರ ಗೂಳಿ 200 ರ ಹುಟ್ಟುಹಬ್ಬ | 20 KG ಕೇಕ್‌ ಕಟ್‌ ಮಾಡಿ ಹಬ್ಬ ಮಾಡಿದ ಅಭಿಮಾನಿಗಳು

ಅದೃಷ್ಟವಶಾತ್, ಘಟನೆಯಲ್ಲಿ  ಮಹಾಲಿಂಗಪ್ಪನವರಿಗೆ ಹೆಚ್ಚಿನ ಪೆಟ್ಟಾಗಿಲ್ಲ. ಹೋರಿ ದಾಳಿಯಿಂದ ಕುಸಿದುಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದು, ಸದ್ಯ ಮನೆಗೆ ವಾಪಸ್ ಆಗಿದ್ದಾರೆ.  ಇನ್ನೂ ಈ ಘಟನೆಯ ದೃಶ್ಯವು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. 

Ex-MLA Mahalingappa Gored by Bull at Horihabba in Shikaripura: Escapes Major Injury
Ex-MLA Mahalingappa Gored by Bull at Horihabba in Shikaripura: Escapes Major Injury

ರೈಲಿನಲ್ಲಿ ಪಟಾಕಿ ಸಾಗಣೆ : ಶಿವಮೊಗ್ಗದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು

Ex-MLA Mahalingappa Gored by Bull at Horihabba in Shikaripura: Escapes Major Injury

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor