ಗಂಟಲಲ್ಲಿ ಆಹಾರ ಸಿಲುಕಿ ಯುವಕ ಸಾವು, ಹುಟ್ಟುಹಬ್ಬದ ಔತಣಕೂಟದ ವೇಳೆ ದುರಂತ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಕುಂಸಿ : ಸಮೀಪದಲ್ಲಿರುವ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಔತಣ ಕೂಟವೊಂದರಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಆಹಾರ ಸಿಲುಕಿಕೊಂಡ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಜರುಗಿದೆ. ಮೃತ ಯುವಕನನ್ನು 21 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ.

ದಾವಣಗೆರೆ, ಶಿವಮೊಗ್ಗ, ಸಾಗರ, ಪುತ್ತೂರು ಮಾರುಕಟ್ಟೆಗಳಲ್ಲಿನ ಅಡಿಕೆ ದರದ ವಿವರ

ಗ್ರಾಮಸ್ಥರೊಬ್ಬರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಬಳಿ ನಾನ್​ ವೆಜ್​  ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ  ಊಟದಲಲ್ಲಿ ಪಾಲ್ಗೊಂಡಿದ್ದ ಸಚಿನ್, ಊಟ ಮುಗಿಸಿಕೊಂಡು ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದ್ದ ನಿರ್ಮಾಣ ಹಂತದ ಮನೆಯೊಳಗೆ ತೆರಳಿದ್ದನು. ಊಟದ ಬಳಿಕ ಉಳಿದವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದರು. ಶುಕ್ರವಾರ ಮುಂಜಾನೆ ಕಾಮಗಾರಿ ಮುಂದುವರಿಸಲು ಕೆಲಸಗಾರರು ಕಟ್ಟಡದ ಬಳಿ ಬಂದಾಗ, ಸಚಿನ್ ಅಲ್ಲಿ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಈ ವಿಚಾರ ತಿಳಿದ ತಕ್ಷಣ ಸಚಿನ್‌ನ ಕುಟುಂಬದವರು ಆತಂಕಗೊಂಡು ಶವವನ್ನು ಶಿವಮೊಗ್ಗ ನಗರಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಈ ಘಟನೆಯ ಕುರಿತು ಗ್ರಾಮಸ್ಥರು ಕುಂಸಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮೃತ ಸಚಿನ್ ಮದ್ಯಪಾನ ಮಾಡಿದ್ದನು, ಆತನ ಗಂಟಲಲ್ಲಿ ಆಹಾರ ಸಿಲುಕಿಕೊಂಡಿದ್ದೇ ಈ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Kumsi Youth Dies After Food Gets Stuck in Throat

Kumsi  ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Kumsi
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor