ಆಗಸ್ಟ್ 01 ವರೆಗೂ ಕುಂಸಿ-ಆನಂದಪುರ ರೈಲ್ವೆ ಗೇಟ್ ಬಂದ್​! ಪರ್ಯಾಯ ಮಾರ್ಗ ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Elephant Mahout Recruitment 2026

Kumsi Anandapura Railway Line / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಬರುವ ಕುಂಸಿ ಹಾಗೂ ಆನಂದಪುರ ರೈಲ್ವೆ ನಿಲ್ದಾಣಗಳ ಮಾರ್ಗದ ನಡುವಿನ ಡ್ರೈನೇಜ್ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕಾಗಿ ಕಲ್ಪಿಸಲಾಗಿದ್ದ ಬದಲಿ ಮಾರ್ಗದ ವ್ಯವಸ್ಥೆಯನ್ನು ಆಗಸ್ಟ್ 05ರವರೆಗೆ ವಿಸ್ತರಣೆ ಮಾಡಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕುಂಸಿ-ಆನಂದಪುರ ನಡುವಿನ ಎಲ್.ಹೆಚ್ ಹಾಗೂ ಎಲ್‌ಸಿ ಸಂಖ್ಯೆ 105ರಲ್ಲಿನ ಡ್ರೈನೇಜ್ ಸರಿಪಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿತ್ತು. ಹಾಗೂ ಎಲ್‌ಸಿ ಓಪನ್ನಿಂಗ್ ಮತ್ತು ಪರೀಕ್ಷಾ ಕಾರ್ಯ ಕೈಗೊಳ್ಳಲಾಗಿತ್ತು. ಈ ಕಾರಣಕ್ಕೆ ಜುಲೈ 20ರಿಂದ ಜುಲೈ 30ರವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಮೀಪದ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಈ ಆದೇಶದ ಅವಧಿಯನ್ನು ವಿಸ್ತರಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗಬಾರದು ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಂದು ವಾರ್ತಾ ಇಲಾಖೆಯ ಮೂಲಕ ನೀಡಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಲಂ 115ರ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿರುವ ಜಿಲ್ಲಾಧಿಕಾರಿಗಳು, ಈ ಪರಿಷ್ಕೃತ ಆದೇಶ ಜಾರಿಗೊಳಿಸಿದ್ದಾರೆ.

ಈ ಆದೇಶದ ಅನ್ವಯ, ಕುಂಸಿ-ಆನಂದಪುರ ರೈಲ್ವೆ ನಿಲ್ದಾಣಗಳ ನಡುವಿನ ಎಲ್‌ಸಿ 105- 117/000-100 ರಸ್ತೆ ಮಾರ್ಗದಲ್ಲಿ ಆಗಸ್ಟ್ 01ರ ಮಧ್ಯಾಹ್ನ 1 ಗಂಟೆಯಿಂದ ಆಗಸ್ಟ್ 05ರ ರಾತ್ರಿ 12.59ರವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ಸವಾರರು ಯಡೇಹಳ್ಳಿಯಿಂದ ರಿಪ್ಪನ್‌ಪೇಟೆ ರಸ್ತೆ ಮುಖಾಂತರ ಹಾಲಗದ್ದೆ, ಬಟ್ಟೆಮಲ್ಲಪ್ಪ ಮೂಲಕ ಹೊಸನಗರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಅಂತೆಯೇ, ಆನಂದಪುರದಿಂದ ಯಡೇಹಳ್ಳಿ, ಹೆಬೈಲ್ ರಸ್ತೆ ಮಾರ್ಗವಾಗಿ ಆಡೂರು, ಕೋಣನತಲೆ, ಹೊಸೂರು ಮುಖಾಂತರ ಸಾಗರಕ್ಕೆ ತೆರಳುವ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಜಿಲ್ಲಾಡಳಿತವು ಅವಕಾಶ ಕಲ್ಪಿಸಿದೆ.

ಸಾರ್ವಜನಿಕರು ಮತ್ತು ವಾಹನ ಸವಾರರು ಈ ಸೂಚಿತ ಬದಲಿ ಮಾರ್ಗಗಳಲ್ಲೇ ಸಂಚರಿಸುವ ಮೂಲಕ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor