ಸಿದ್ದರಾಮ.ಯ್ಯನವರನ್ನು ಸೋಲಿಸಿದೇ ಎಂಬ ಕೀರ್ತಿ ನನಗೆ ಬರಲಿ..ಬಬ್ರುವಾಹನ ಡೈಲಾಗ್ ನೆನಪಿಸಿದ ಕೆ.ಎಸ್.ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram

ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಸ್ಪರ್ಧಿಸಲಿ. ಅವರನ್ನು ಸೋಲಿಸಿದೆ ಎಂಬ ಕೀರ್ತಿ ನನಗೇ ಬರಲಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಇಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ಲಾಜಿಕ್ಕೂ ಇಲ್ಲ. ಪ್ರಧಾನಿಯಂತವರನ್ನು ಟೀಕಿಸುವುದು ಬಿಟ್ಟರೆ ಅವರಿಗೆ ಏನೂ ಕೆಲಸವಿಲ್ಲ. ಅವರಿಗೆ ರಾಜ್ಯದಲ್ಲಿ ಸ್ಪರ್ಧಿಸಲು ಎಲ್ಲೂ ಸ್ಥಳವೂ ಇಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲುವುದೂ ಇಲ್ಲ. ಅವರು ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲ್ಲುವುದೂ ಇಲ್ಲ. ಅಲೆಮಾರಿಯಂತೆ ಇರುವ ಸಿದ್ದರಾಮಯ್ಯ ಬೇಕಾದರೆ ಶಿವಮೊಗ್ಗ ಕ್ಷೇತ್ರಕ್ಕೆ ಬರಲಿ ಅವರನ್ನು ಸೋಲಿಸಿದೆ ಎಂಬ ಕೀರ್ತಿ ನನಗೂ ಮತ್ತು ಬಿಜೆಪಿ ಪಕ್ಷಕ್ಕಿರುತ್ತದೆ ಎಂದರು.

Malenadu Today Shivamogga

ರಾಜ್ಯ 224 ಕ್ಷೇತ್ರಗಳಲ್ಲಿ ಅವರು ಗೆಲ್ಲುವ ಕ್ಷೇತ್ರವೆಂದರ ಚಾಮರಾಜ ನಗರ. ಅಲ್ಲಿನ ಶಾಸಕ ಜಮೀರ್ ಅಹ್ಮದ್ ಅವಕಾಶ ನೀಡಿದರೆ ಒಂದಿಷ್ಟು ಮುಸ್ಲಿಂರ ಮತ ಪಡೆದು ಗೆಲ್ಲುವ ಸಾಧ್ಯತೆ ಇದೆ. ಹೇಳಿಕೇಳಿ ಸಿದ್ದರಾಮಯ್ಯ ಟಿಪ್ಪು ಭಕ್ತ ತಾನೇ.. ಗೆದ್ದರೂ ಗೆಲ್ಲಲಿ. ಸದನದಲ್ಲಿ ಒರಟೊರಟಾಗಿ ಮಾತನಾಡುವ ವ್ಯಕ್ತಿಯಿರಲಿ. ಬಿ.ಎಸ್. ಯಡಿಯೂರಪ್ಪನವರು ಕೂಡ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂಬ ಉದ್ದೇಶದಿಂದ ಹೇಳಿದ್ದಾರೆ.ಇಲ್ಲ ನಾನು ಅವರ ಮಾತು ಕೇಳಲ್ಲ ಎಂದರೆ ಸೋತು ಮನೆಗೆ ಹೋಗುತ್ತಾರಷ್ಟೆ ಎಂದರು.

ಇದೇ ಸಿದ್ದರಾಮಯ್ಯ ಮುನಿಯಪ್ಪನನ್ನು ಸೋಲಿಸಿದರು. ಖರ್ಗೆ ಸೋಲಿಗೂ ಕಾರಣರಾದರು, ಶ್ರೀನಿವಾಸ ಪ್ರಸಾದ್ ಅವರನ್ನು ಹೊರಗೆ ತಳ್ಳಿದರು. ಇವರಲ್ಲಿ ನಾಯಕರು ಯಾರೂ ಇಲ್ಲ ಮೋದಿ ಹೆಸರು ಹೇಳಿಕೊಂಡು ಬಿಜೆಪಿಯವರು ವೋಟು ಕೇಳುತ್ತಿದ್ದಾರೆ ಎಂದು ಇವರು ದೂರುತ್ತಾರೆ. ಆದರೆ ಇವರಿಗೆ ರಾಷ್ಟ್ರೀಯ ನಾಯಕರೂ ಇಲ್ಲ. ರಾಜ್ಯ ನಾಯಕರೂ ಇಲ್ಲ. ಬಿಜೆಪಿಯಲ್ಲಿ ಸುಮಾರು 50ಕ್ಕೂ ಹೆಚ್ಚು ನಾಯಕರು ಸಿಗುತ್ತಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಸಂಘಟನೆ, ಅಭಿವೃದ್ಧಿ, ನಾಯಕತ್ವ ಈ ಮೂರು ಅಂಶಗಳನ್ನು ಇಟ್ಟುಕೊಂಡು ಚುನಾಣೆಗೆ ಈಗಾಗಲೇ ಸಿದ್ಧತೆ ನಡೆಸಿದೆ. ವಿಜಯ ಸಂಕಲ್ಪ ಯಾತ್ರೆ ನಾಳೆಯಿಂದಲೇ ಆರಂಭವಾಗುತ್ತದೆ. ನಾಲ್ಕ ತಂಡಗಳಲ್ಲಿ ಈ ಯಾತ್ರೆ 224 ಕ್ಷೇತ್ರಗಳನ್ನೂ ತಲುಪುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರಿಗೆ ತಲುಪಿಸುತ್ತದೆ. ನಾಳೆ ಮಲೆಮಹಾದೇಶ್ವರ ಬೆಟ್ಟದಿಂದ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ತಂಡ, ಮಾ.2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಂಡ ನಂದಿಗುಡಿಯಿAದ ಮಾ.3ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿ ಬಸವ ಕಲ್ಯಾಣ ಹಾಗೂ ದೇವನಹಳ್ಳಿಯ ಅವತಿಯಿಂದ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ ಎಂದರು.

ರಾಜ್ಯ ನಾಯಕರುಗಳು, ಆಯಾ ಭಾಗದ ಸಂಸದರು, ರಾಜ್ಯ ಪದಾಧಿಕಾರಿಗಳು ಶಾಸಕರು, ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಮಾ.25ರಂದು ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಆಗಮಿಸುವರು ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor