ಕೋವಿಡ್​ನ ಭಯದ ನಡುವೆ ಕೆಎಫ್​ಡಿ ಆತಂಕ! 18 ರ ಯುವತಿಯನ್ನು ಬಾಧಿಸ್ತಿದೆ ಮಂಗನ ಕಾಯಿಲೆ

SHIVAMOGGA  |  Jan 7, 2024  | ಶಿವಮೊಗ್ಗ ಜಿಲ್ಲೆ  ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮವೊಂದರ 18 ವರ್ಷದ ಯುವತಿಯಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿದೆ.

KFD 

ಯುವತಿಗೆ ಕಳೆದ ಡಿ.29ರಂದು ಜ್ವರ ಕಾಣಿಸಿಕೊಂಡಿತ್ತು. ನಗರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ಜ.1ರಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಲಿಸಿದ್ದರು, ಅಲ್ಲಿ ಕೆಎಫ್‌ ಡಿ ಪರೀಕ್ಷೆ ನಡೆಸಲಾಗಿತ್ತು. 

ಆದರೆ, ಪಾಸಿಟಿವ್​  ಬಂದಿರಲಿಲ್ಲ. ಆದರೂ ಜ್ವರ ಕಡಿಮೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಆರ್ ಟಿಸಿಪಿಆ‌ರ್ ಪರೀಕ್ಷೆಗೆ ನಡೆಸಿದಾಗ ಕೆಎಫ್‌ಡಿ ಪಾಸಿಟಿವ್ ಬಂದಿದೆ

READ : ನಿನ್ನೆ ಎಷ್ಟಿತ್ತು ಅಡಿಕೆ ದರ? ಇವತ್ತು ಎಷ್ಟಿದೆ ಅಡಿಕೆ ದರ? ಮಾರುಕಟ್ಟೆಯಲ್ಲಿ  Arecanut Rate

ಇವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆಗೆ ನೀಡಿದ್ದಾರೆ. ಆದರೂ ಆರೋಗ್ಯ ಪರಿಸ್ಥಿತಿ ಸುಧಾರಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಸಂಜೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. 

ಜಿಲ್ಲೆಯಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಇದಾಗಿದ್ದು, ಕಳೆದ ಡಿ.13ರಂದು ತೀರ್ಥಹಳ್ಳಿ ತಾಲೂಕಿನ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಕೆಎಫ್‌ಡಿ ಪತ್ತೆಯಾಗಿತ್ತು.

Leave a Comment