ನಿನ್ನೆ ಒಂದೆ ದಿನ ಶಿವಮೊಗ್ಗದಲ್ಲಿ 81 mm ಮಳೆ! ಇವತ್ತು ಮಳೆ ಬರುತ್ತಾ ಅಂತಾ ಕೇಳುವ ಮೊದಲು ಈ ರಿಪೋರ್ಟ್​ ಓದಿ

ಹಂಚಿಕೊಳ್ಳಿ
WhatsApp Facebook X Telegram
Shivamogga Monsoon Report Karnataka Rain Report Shivamogga Records 81mm Rain,
Shivamogga Monsoon Report

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮುಂಗಾರು ಪೂರ್ವ ಹಾಗೂ ಆರಂಭಿಕ ಹಂತದ ಮಳೆಯು ಚುರುಕುಗೊಂಡಿದೆ, ಹವಾಮಾನ ತಜ್ಞರ ವಿಶ್ಲೇಷಣೆಯಂತೆ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕದಿಂದ ಬಿಡಿಬಿಡಿಯಾಗಿ ಉತ್ತಮ ಮಳೆಯಾಗುತ್ತಿದೆ. ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ವರುಣನ ಸಿಂಚನ ಶುಭಾರಂಭ ಮಾಡಿದೆ.

ಶಿವಮೊಗ್ಗದಲ್ಲಿ 81 mm ಮಳೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜೂನ್ 2ರ ಮುಂಜಾನೆಗೆ ಮುಕ್ತಾಯಗೊಂಡಂತೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಮಲೆನಾಡಿನ ಪ್ರಮುಖ ಜಿಲ್ಲೆಯಾದ ಶಿವಮೊಗ್ಗದಲ್ಲಿ ಬರೋಬ್ಬರಿ 81 mm ಭಾರಿ ಮಳೆ ದಾಖಲಾಗಿದೆ. ಪರಿಣಾಮವಾಗಿ ಜಿಲ್ಲೆಯಾದ್ಯಂತ ತಂಪಾದ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗ ಮಾತ್ರವಲ್ಲದೆ ಮಲೆನಾಡು ವ್ಯಾಪ್ತಿಯ ಇತರ ಜಿಲ್ಲೆಗಳಾದ ಚಿಕ್ಕಮಗಳೂರಿನಲ್ಲಿ 51.5 mm ಹಾಗೂ ಕೊಡಗು ಜಿಲ್ಲೆಯಲ್ಲಿ 48 mm ನಷ್ಟು ಉತ್ತಮ ಮಳೆಯಾಗಿದೆ.

ಮುಂಬರುವ ದಿನಗಳ ಹವಾಮಾನ ಮುನ್ಸೂಚನೆಯನ್ನು ಗಮನಿಸಿದರೆ, ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಹವಾಮಾನ ಇಲಾಖೆಯು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಇತ್ತೀಚಿನ ಸ್ಯಾಟಲೈಟ್ ಮಾದರಿಗಳ ಪ್ರಕಾರ, ಜೂನ್ 7 ರಿಂದ ಜೂನ್ 9 ರವರೆಗಿನ ಅವಧಿಯಲ್ಲಿ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯು ಮತ್ತಷ್ಟು ತೀವ್ರಗೊಳ್ಳಲಿದ್ದು, ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಇದೇ ಅವಧಿಯಲ್ಲಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲೂ ಜೂನ್ 3 ರಿಂದಲೇ ಮಳೆ ಆರಂಭಗೊಂಡು ಜೂನ್ 5 ರವರೆಗೆ ಮುಂದುವರಿಯಲಿದ್ದು, ತದನಂತರ ಜೂನ್ 6 ರಿಂದ ಜೂನ್ 9 ರ ಅವಧಿಯಲ್ಲಿ ಮಳೆಯ ತೀವ್ರತೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಲಿದೆ. ಈ ತೀವ್ರ ಮಳೆಯು ಕರಾವಳಿ ತೀರದ ಜಿಲ್ಲೆಗಳಿಗೆ ಭಾರಿ ಪ್ರಮಾಣದ ಮಳೆಯನ್ನು ಹೊತ್ತು ತರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನುಳಿದಂತೆ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 4 ರವರೆಗೆ ಸಾಧಾರಣ ಮತ್ತು ಹಗುರ ಮಳೆಯ ಮುನ್ಸೂಚನೆ ಇದೆಯಂತೆ. ಒಟ್ಟಾರೆಯಾಗಿ ಮುಂಗಾರಿನ ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಮಳೆಯು ರೈತಾಪಿ ವರ್ಗಕ್ಕೆ ಬಿತ್ತನೆ ಕಾರ್ಯಗಳನ್ನು ಚುರುಕುಗೊಳಿಸಲು ಅವಕಾಶ ನೀಡುತ್ತಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor