ನಿಮ್ಮ ಏರಿಯಾ, ನಿಮ್ಮ ಊರಲ್ಲಿ ಇನ್ಮೇಲೆ ನೀವೆ ಬಾಸ್​ ಪೊಲೀಸ್! WhatsApp ನಂಬರ್​ ತಗೊಳ್ಳಿ! ಭಾರೀ ಚೆನ್ನಾಗಿದೆ ಇದು!

ಹಂಚಿಕೊಳ್ಳಿ
WhatsApp Facebook X Telegram
Shivamogga Police Launch 'Public Eye WhatsApp' Helpline

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಲ್​ & ಒ ವಿಚಾರದಲ್ಲಿ ಶಿವಮೊಗ್ಗಕ್ಕೆ ಬಂದಿರುವ ನೂತನ ಎಸ್​ಪಿ ನಿಖಿಲ್ ಮುಲಾಜು ನೋಡುತ್ತಿಲ್ಲ. ಹಿಂದಿನ ಎಸ್​ಪಿ ಮಿಥುನ್​ ಕುಮಾರ್​ಗಿಂತಲೂ ಭಿನ್ನವಾದ ಕ್ರಮಗಳೊಂದಿಗೆ ಹೆಚ್ಚಿನ ನಿಗಾ ವಹಿಸ್ತಿರುವ ಎಸ್​ಪಿ ನಿಖಿಲ್​ ಬಿ. ಡ್ರೋಣ್​ ಕಣ್ಗಾವಲಿನ ಮೂಲಕ, ನಶೆ ಆಸಾಮಿಗಳ ಹಾರಾಟಕ್ಕೆ ಒಂಚೂರು ಕಡಿವಾಣ ಹಾಕಿಸಿದ್ದಾರೆ. ಇದರ ನಡುವೆ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಅಪರಾಧ ತಡೆಗಟ್ಟುವ ಪ್ರಕ್ರಿಯೆಯಲ್ಲಿ ಜನರನ್ನೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಕ್ರಮವಾಗಿ ಹೊಸದೊಂದು ವ್ಯವಸ್ಥೆಯನ್ನು ಜಾರಿ ಮಾಡಿದ್ದಾರೆ.

ಹಾ, ನಿಜ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ತ್ವರಿತವಾಗಿ ಮಾಹಿತಿ ಕಲೆಹಾಕುವ ಉದ್ದೇಶದಿಂದ ‘ಪಬ್ಲಿಕ್ ಐ ವಾಟ್ಸಾಪ್’ Public Eye WhatsApp ನಂಬರ್ ನ್ನು ಜಾರಿಗೊಳಿಸಿದೆ.

ಯಾವುದೇ ಒಂದು ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ, ಅಪರಾಧ ಕೃತ್ಯಗಳ ಬಗ್ಗೆ ಮೊದಲು ಮಾಹಿತಿ ಗೊತ್ತಾಗುವುದೇ ಆ ಭಾಗದ ಸ್ಥಳೀಯ ನಿವಾಸಿಗಳಿಗೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಸಾಮಾನ್ಯ ಜನರು ಪೊಲೀಸರಿಗೆ ಮಾಹಿತಿ ನೀಡಲು ಅಥವಾ ಪೊಲೀಸ್ ಠಾಣೆಯ ಮೆಟ್ಟಿಲೇರಲು ಹಿಂಜರಿಯುತ್ತಾರೆ. ‘ಮಾಹಿತಿ ನೀಡಿದರೆ ನಮ್ಮ ಹೆಸರು ಎಲ್ಲಿ ಹೊರಬರುತ್ತದೆಯೋ?’, ‘ಮುಂದೆ ನಮಗೆ, ತೊಂದರೆಯಾಗುತ್ತದೆಯೇ?’, ರಿಸ್ಕ್​ ಯಾಕೆ ಎಂದು ಕೊಂಡು ನಮಗೇನಾಬೇಕು! ನಮಗೇಕೆ ಬೇಕು ಅಂತಾ ನಡೆಯುವ ಕ್ರೈಂ ಬಗ್ಗೆ ಮಾತೇ ಆಡುವುದಿಲ್ಲ. ಆದಾಗ್ಯು ಮನಸ್ಸಲ್ಲಿ ನಡೆದಿದ್ದನ್ನ ತಿಳಿಸಲಾಗದ ಸಂಕಟ ಅವರಲ್ಲಿ ಕಾಡುತ್ತಲೇ ಇರುತ್ತದೆ. ಯಾರಿಗೂ ಗೊತ್ತಾಗದೆ ಹೋದರೆ ನಡೆದಿದ್ದನ್ನ ತಿಳಿಸಬಹುದಿತ್ತು, ಅನ್ಯಾಯ ನೊಡಿಕೊಂಡು ಕೂರುವುದು ಸರಿಯಲ್ಲ ಎಂದು ಮನಸ್ಸು ಹೇಳುತ್ತಿರುತ್ತದೆ. ಅಂತಹ ಮನಸ್ಸುಗಳಿಗಾಗಿಯೇ ಪೊಲೀಸ್​ ಇಲಾಖೆ ಪಬ್ಲಿಕ್ ಐ ವಾಟ್ಸಾಪ್ ತಂದಿದೆ.

WhatsApp ನಂಬರ್​ ತಗೊಳ್ಳಿ!

“ಪೊಲೀಸ್ ಎಂದರೆ ಭಯ ಬೇಡ, ಭರವಸೆ ಇರಲಿ” ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ವಾಟ್ಸಾಪ್ ಅಭಿಯಾನ ಆರಂಭವಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುವ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು, ಅಕ್ರಮ ಮದ್ಯ ಮಾರಾಟ, ಜೂಜಾಟ, ಗಾಂಜಾದಂತಹ ಮಾದಕ ವಸ್ತುಗಳ ಮಾರಾಟ, ಮಹಿಳೆಯರ ಮೇಲಿನ ದೌರ್ಜನ್ಯ, ರಸ್ತೆ ಬದಿಯ ಕಿರುಕುಳ, ಕಳ್ಳತನದಂತಹ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಓಡಾಟ ಕಂಡುಬಂದರೆ, ಸಾರ್ವಜನಿಕರು ತಕ್ಷಣವೇ WhatsApp ನಂಬರ್ 8277982900 ಎಂಬ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ಮಾಹಿತಿ ನೀಡಬಹುದು.

ಈ ವ್ಯವಸ್ಥೆಯಲ್ಲಿ WhatsApp ನಂಬರ್ ಗೆ ಮಾಹಿತಿ ನೀಡುವವರ ವಿವರಗಳನ್ನು ‘ಗೌಪ್ಯ’ವಾಗಿ ಇಡಲಾಗುತ್ತದೆ ಎಂದು ಪೊಲೀಸ್​ ಇಲಾಖೆ ಖಾತರಿಕೊಟ್ಟಿದೆ. ದೂರುದಾರರ ಅಥವಾ ಮಾಹಿತಿದಾರರ ಹೆಸರು, ವಿಳಾಸ ಅಥವಾ ಫೋನ್ ನಂಬರ್ ಅನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ಎಸ್​ಪಿ ನಿಖಿಲ್​ ಬಿ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಆತಂಕವಿಲ್ಲದೆ, ಮುಕ್ತವಾಗಿ ತಮಗೆ ತಿಳಿದಿರುವ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬಹುದು ಎಂದಿದ್ದಾರೆ

ಪೊಲೀಸ್​ ಇಲಾಖೆ ವಾಟ್ಸಾಪ್ ನಂಬರ್​ ತಗೊಂಡು, ಅಥವಾ ಅದರ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿಕೊಂಡು ಸಾರ್ವಜನಿಕರು ನೇರವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾಟ್ಸಾಪ್ ಖಾತೆಗೆ ಸಂಪರ್ಕ ಸಾಧಿಸಬಹುದು ಮತ್ತು ಅಪರಾಧದ ಕುರಿತ ಫೋಟೋ, ವಿಡಿಯೋ ಅಥವಾ ಲೊಕೇಶನ್ ಅನ್ನು ರವಾನಿಸಬಹುದು. ಈ ಮೆಸೇಜ್​ಗಳ ಮೂಲಕ ಅಲರ್ಟ್ ಆಗುವ ಪೊಲೀಸರು ಸೀದಾ ಸ್ಪಾಟ್​ಗೆ ಬಂದು ಕ್ರೈಂ ಕಂಟ್ರೋಲ್ ಮಾಡುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮದೊಂದು ಸಣ್ಣ ಮಾಹಿತಿ ದೊಡ್ಡ ಮಟ್ಟದ ಸಹಾಯ ಮಾಡಬಲ್ಲದು. ಒಂದು ಕ್ರೈಂ ನಿಲ್ಲಿಸಿದ ಅಥವಾ ತಡೆದ ಅಥವಾ ವರದಿ ಮಾಡಿದ ತೃಪ್ತಿ ನಿಮ್ಮ ಮನಸ್ಸಿಗೂ ಸಿಗಬಹುದು! ಹೀಗಾಗಿ 8277982900 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ.. ಪೊಲೀಸರಿಗೆ ನೆರವಾಗಿ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor