kamal hassan : ಶಿವಮೊಗ್ಗದಲ್ಲಿ ಕಮಲ್​ ಹಾಸನ್​ ಪ್ರತಿಕೃತಿ ಸುಟ್ಟು ಪ್ರತಿಭಟನೆ | ಕಾರಣವೇನು

kamal hassan : ಹಿರಿಯ ನಟ ಕಮಲ್​ ಹಾಸನ್​ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಗೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಂತೆ ಇಂದು ಶಿವಮೊಗ್ಗದಲ್ಲಿ ಇಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಮಲ್​ ಹಾಸನ್​ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯಕ್ತಪಡಿಸಿದರು.

kamal hassan : ಆಕ್ರೋಶಕ್ಕೆ ಕಾರಣವೇನು

ಮಣಿರತ್ನಂ ನಿರ್ದೇಶಿಸಿ ಕಮಲ್​ ಹಾಸನ್​ ನಟಿಸಿರುವ ಥಗ್ ಲೈಫ್​ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮನ್ನು  ಚೆನ್ನೈನಲ್ಲಿ ಮೇ 24 ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಡಾ. ಶಿವರಾಜ್​ ಕುಮಾರ್ ಸಹ ಭಾಗವಹಿಸಿದ್ದರು. ಆವೇಳೆ  ಕಮಲ್​ ಹಾಸನ್ ಮಾತನಾಡುವಾಗ ಡಾ||ರಾಜ್​ಕುಮಾರ್​ ಸಹಾಯವನ್ನು ನೆನೆದರು. ಹಾಗೆಯೇ ಮಾತನಾಡುವ​ ಭರದಲ್ಲಿ ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅವರ ಈ ಒಂದು ಹೇಳಿಕೆ  ಇದೀಗ ಅನೇಕ ಕನ್ನಡಾಭಿಮಾನಿಗಳನ್ನು ಕೆರಳಿಸಿದೆ. ಈ ಹಿನ್ನಲೆ ಇಂದು ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಕಮಲ್​ ಹಾಸನ್​ ಪ್ರತಿಕೃತಿ ಧಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜೂನ್​06 ರಂದು ಅವರ ಥಗ್ ಲೈಫ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಈ ವಿವಾದಾತ್ಮಕ ಹೇಳಿಕೆಯಿಂದ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

Leave a Comment