ಹಿಂದೂ ಮಹಾಸಭಾ ಗಣಪತಿ | ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಲಾಗುವ ಈ ಸಲದ ಕಲಾಕೃತಿ ವಿಶೇಷವೇನು?

hindu mahasaba Ganapati tablo updates ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಸಂದರ್ಭದಲ್ಲಿ ಜನರನ್ನ ಸೆಳೆಯುವ ಶಿವಪ್ಪನಾಯಕ ವೃತ್ತದ ಬಳಿಯ ಈ ಸಲದ ವಿಶೇಷತೆ ಕುತೂಹಲ ಮೂಡಿಸುತ್ತಿದೆ.

ಹಿಂದೂ ಮಹಾಸಭಾ ಗಣಪತಿ | ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಲಾಗುವ ಈ ಸಲದ ಕಲಾಕೃತಿ ವಿಶೇಷವೇನು?
hindu mahasaba Ganapati tablo updates ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ

SHIVAMOGGA | MALENADUTODAY NEWS 

 

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 



Sep 14, 2024 shimoga hindu mahasaba ganapati 



ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವವಾಗಿ ನಡೆಯುವ ರಾಜಬೀದಿ ಉತ್ಸವಕ್ಕೆ ಸಿದ್ದತೆಗಳು ಆರಂಭವಾಗಿದ್ದು ಅಲಂಕಾರ ಸಮಿತಿಯಿಂದ ಶಿವಪ್ಪನಾಯಕ ಸರ್ಕಲ್‌ ಬಳಿ ಗಾಂಧಿ ಬಜಾರ್‌ ಪ್ರವೇಶ ದ್ವಾರದಲ್ಲಿ ಈ ಸಲ ಯಾವ ಕಲಾಕೃತಿ ಮೂಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಕುತೂಹಲವನ್ನು ಇದುವರೆಗೂ ಯಾರು ಬಯಲು ಮಾಡಿಲ್ಲವಾದರೂ ಸ್ಥಳದಲ್ಲಿ ಕಾಶಿಯ ದೃಶ್ಯಗಳನ್ನ ಹೋಲುವಂತಹ ಕಲಾಕೃತಿಗಳನ್ನ ನಿಲ್ಲಿಸಲಾಗುತ್ತಿದೆ. ಹಾಗಾಗಿ ಕಾಶಿಗೆ ಸಂಬಂಧಿಸಿದ ಕಲಾಕೃತಿ ಶಿವಪ್ಪನಾಯಕ ವೃತ್ತದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. 

 

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೂ ಮೊದಲು ಈ ರೀತಿ ಕಲಾಕೃತಿಗಳು ಜನರನ್ನ ಅತ್ಯಾಕರ್ಷಕವಾಗಿ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಹಿಂದೂ ಮಹಾಸಭಾ ಗಣಪತಿಯ ಅಲಂಕಾರ ಸಮಿತಿಯ ಪ್ರಯತ್ನಗಳು ಯಶಸ್ಸು ಕಾಣುತ್ತಾ ಬಂದಿದೆ. 

 

2018 ರಲ್ಲಿ ಅಯೋಧ್ಯೆಯ ರಾಮಮಂದಿರ ಇಲ್ಲಿ ನಿರ್ಮಾಣವಾಗಿತ್ತು. ಆನಂತರ 2019 ರಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ, 2022 ಭಗವತ್ಗೀತೆಯ ಉಪದೇಶ ಸಂದೇಶ ಹಾಗೂ 2023 ರಲ್ಲಿ ಉಗ್ರ ನರಸಿಂಹನ ಅವತಾರವನ್ನು ಸೃಷ್ಟಿಸಲಾಗಿತ್ತು. ಈ ವರ್ಷ ಕಾಶಿ ವಿಶ್ವನಾಥನ ದರ್ಶನವನ್ನು ಕಲಾವಿದ ಜೀವನ್‌ ಸೃಷ್ಟಿಸುತ್ತಿದ್ದಾರಾ? ಗೊತ್ತಿಲ್ಲ. ಆದರೂ ಅದೇ ಹೌದು ಎನ್ನುತ್ತಿದೆ ಬಲ್ಲ ಮೂಲಗಳು. ಅಲ್ಲದೆ ಈ ಸಂಬಂಧ ಇಲ್ಲಿನ ಇವತ್ತಿನ ಚಿತ್ರಣಗಳು ಜನರಿಗೆ ಇನ್ನಷ್ಟು ಕತೂಹಲ ಮೂಡಿಸುತ್ತಿವೆ. 



Shimoga court | ರೇಪ್‌ ಕೇಸ್‌ ಸಾಬೀತು | 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ಮಹತ್ವದ ತೀರ್ಪು

 

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

 

Tunga nagara police station | ಊರುಗಡೂರು ಬಳಿ ವ್ಯಕ್ತಿಗೆ ಚಾಕು ಇರಿತ | ಬೈಕ್‌ನಲ್ಲಿ ಬಂದವರಿಂದ ದುಷ್ಕೃತ್ಯ? | ನಡೆದಿದ್ದೇನು?

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

 

Thirthahalli court  | ಶೂಟ್‌ ಮಾಡ್ಬೇಕಾ ಎಂದು ಕುತ್ತಿಗೆಗೆ ಗುಂಡು ಹಾರಿಸಿದ ಕೇಸ್‌ ಎಂತಾಯ್ತು ಗೊತ್ತಾ? |ತೀರ್ಥಹಳ್ಳಿ ಕೋರ್ಟ್‌ ತೀರ್ಪು

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN

 

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

 

ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3‌