kalaburagi judge Vishwanath Muguti 16-06-25 ಕೋರ್ಟ್‌ ಹಾಲ್‌ಗೆ ತೆರಳುವ ಮುನ್ನ ಹಿರಿಯ ನ್ಯಾಯಾಧೀಶರು ಹೃದಯಾಘಾತದಿಂದ ಸಾವು

ಹಂಚಿಕೊಳ್ಳಿ
WhatsApp Facebook X Telegram
kalaburagi judge Vishwanath Muguti
kalaburagi judge Vishwanath Muguti

kalaburagi judge Vishwanath Muguti ಕೋರ್ಟ್‌ ಹಾಲ್‌ಗೆ ತೆರಳುವ ಮುನ್ನ ಹಿರಿಯ ನ್ಯಾಯಾಧೀಶರ ಹೃದಯಾಘಾತದಿಂದ ಸಾವು

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೋರ್ಟ್ ಹಾಲ್‌ಗೆ ತೆರಳಲು ಸಿದ್ಧರಾಗಿದ್ದ ಹಿರಿಯ ಶ್ರೇಣಿ ನ್ಯಾಯಾಧೀಶರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

kalaburagi judge Vishwanath Muguti ಮೃತಪಟ್ಟವರನ್ನು ಕಲಬುರಗಿ ಜಿಲ್ಲಾ 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮೂಗತಿ (44) ಎಂದು ಗುರುತಿಸಲಾಗಿದೆ. ಕಳೆದ ವಾರವಷ್ಟೇ ಕಲಬುರಗಿ ಕೋರ್ಟ್‌ಗೆ ವರ್ಗಾವಣೆಯಾಗಿದ್ದ ವಿಶ್ವನಾಥ್ ಅವರು, ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್‌ಗೆ ಬಂದಿದ್ದರು.

ಆದರೆ, ಕೋರ್ಟ್ ಹಾಲ್‌ಗೆ ಪ್ರವೇಶಿಸುವ ಕೆಲವೇ ನಿಮಿಷಗಳ ಮೊದಲು ಅವರಿಗೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತು. ಆದರೆ, ಆಸ್ಪತ್ರೆಗೆ ಕರೆತರುವ ಮೊದಲೇ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor