ಭತ್ತದ ಹೊರೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ತಗುಲಿದ ವಿದ್ಯುತ್ ತಂತಿ : 20 ಕ್ವಿಂಟಾಲ್​ ಭತ್ತ ಸುಟ್ಟು ಭಸ್ಮ

ಹಂಚಿಕೊಳ್ಳಿ
WhatsApp Facebook X Telegram
Hanging Power Line Burns Paddy Load in Shivamoga
Hanging Power Line Burns Paddy Load in Shivamoga

ಶಿವಮೊಗ್ಗ : ಭತ್ತದ ಹೊರೆ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಭತ್ತದ ಬಣವೆಯೆಲ್ಲಾ ಸುಟ್ಟುಹೋಗಿರುವ ಘಟನೆ ತಮ್ಮಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿಲ್ಗುಣಿ ಘಂಟೆತವರು ರಸ್ತೆಯಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು ಒಂದು ಎಕರೆ ಪ್ರದೇಶದ ಭತ್ತದ ಪೈರು ನಾಶವಾಗಿದ್ದು, ರೈತನಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.

Hanging Power Line Burns Paddy Load in Shivamoga
Hanging Power Line Burns Paddy Load in Shivamoga

ಚುರುಗುಟ್ಟುವ ಚಳಿಯ ನಡುವೆ ತುಂಗೆಯ ತೀರದಲ್ಲಿ ನಡೆಯುವ ಗುಮ್ಮನಮಕ್ಕಿ ಅಕ್ಕತಂಗಿಯರ ಜಾತ್ರೆಯ ವಿಶೇಷವೇ ಬೇರೆ? ಈ ಸಲ ಬನ್ನಿ

ಇಂದು ಮಧ್ಯಾಹ್ನ ಸಂಭವಿಸಿದ ಈ ಅನಾಹುತದಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳೀಯರು ಈ ದುರಂತಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

Hanging Power Line Burns Paddy Load in Shivamoga
Hanging Power Line Burns Paddy Load in Shivamoga

ಸ್ಥಳೀಯರ ಪ್ರಕಾರ , ರಸ್ತೆಯ ಮೇಲೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಜೆಇಇ (Junior Engineer) ಮತ್ತು ಎಇಇ (Assistant Executive Engineer) ಅವರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಈ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿದ್ದೇ ಈ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 1 ಎಕರೆಯಲ್ಲಿ ಕಷ್ಟಾಪಟ್ಟು ಬೆಳಿದಿದ್ದ 15 ಕ್ವಿಂಟಾಲ್​ಗಿಂತಲೂ ಹೆಚ್ಚು ಭತ್ತ  ಕೈಗೆ ಬಂದಿತ್ತಾದರೂ  ಸಾಗಿಸುವಾಗ ವಿದ್ಯುತ್ ತಂತಿಯಿಂದಾಗಿ ಸುಟ್ಟುಹೋಗಿರುವುದು ರೈತನಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ. 

Hanging Power Line Burns Paddy Load in Shivamoga

Hanging Power Line Burns Paddy Load in Shivamoga
Hanging Power Line Burns Paddy Load in Shivamoga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor