13 ವರ್ಷದ ಬಾಲಕಿಗೆ ಹಾರ್ಟ್​ ಅಟ್ಯಾಕ್​ ! ಸಾವು! ಆತಂಕ ಮೂಡಿಸಿದ ಘಟನೆ

ಹಂಚಿಕೊಳ್ಳಿ
WhatsApp Facebook X Telegram

CHIKKAMAGALURU |  Dec 20, 2023  |  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕುನಲ್ಲಿ 13 ವರ್ಷದ ವಿದ್ಯಾರ್ಥಿನಿಯೊಬ್ಬರು ಹೃಧಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ವರದಿ ಹೊರಬಿದ್ದಿದೆ. 

ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಸಲೆಯಲ್ಲಿ ಕುಸಿದುಬಿದ್ದಿದ್ದಾಳೆ. ಆಕೆಯನ್ನು ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯ ವೈದ್ಯರು ಆಕೆ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

READ : ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಅರೋಪಿಗಳು ಯಾರು?

ಪುಟ್ಟ ಬಾಲಕಿಗೆ ಹೃದಯಾಘಾತ ಕಾಣಿಸಿಕೊಂಡು ಸಾವು ಸಂಭವಿಸಿರುವುದು ಆತಂಕ ಹಾಗೂ ಅಚ್ಚರಿಗೆ ಕಾರಣವಾಗಿದೆ. 13 ವರ್ಷದ ಬಾಲಕಿ ಮೂಡಿಗೆರೆಯ ಗ್ರಾಮವೊಂದರ ನಿವಾಸಿಯಾಗಿದ್ದಾಳೆ. ಮಗಳ ಸಾವಿನಿಂದ ಇಡೀ ಕುಟುಂಬ ಆಘಾತಗೊಂಡಿದ್ದು ದುಃಖ ಮಡುಗಟ್ಟಿದೆ.  

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor