ಸೆಪ್ಟೆಂಬರ್ 26 2025, ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಸಕ್ರೆಬೈಲ್ ಆನೆ ಬಿಡಾರ ದ ಮೂರು ಆನೆಗಳು ನಿನ್ನೆದಿನ ಎರಡು ಸಲ ಶಿವಮೊಗ್ಗ ಪ್ರಮುಖ ರಸ್ತೆಗಳಲ್ಲಿ ವಾಕ್ ಮಾಡಿವೆ. ದಸರಾ ಮೆರವಣಿಗೆ ಸಾಗುವ ದಾರಿಯಲ್ಲಿ ಆನೆಗಳ ತಾಲೀಮು ನಡೆಸಿರುವ ಅರಣ್ಯ ಸಿಬ್ಬಂದಿ, ಆನೆಗಳಿಗೆ ದಾರಿಯ ಗುರುತು ಪರಿಚಯವಾಗುವಂತೆ ನೋಡಿಕೊಳ್ಳುತ್ತಿದೆ. ಇಷ್ಟೆ ಅಲ್ಲದೆ ಜನಪ್ರದೇಶಗಳಲ್ಲಿ ಆನೆ ಬೆದರದಂತೆ, ಅವುಗಳು ತಮ್ಮ ಗಡಿ ಗುರತಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ.
ಇನ್ನೂ ಆನೆಗಳ ತಾಲೀಮು ವೀಕ್ಷಿಸಲು ನೂರಾರು ಜನರು ರಸ್ತೆ ಇಕ್ಕೆಲಗಳಲ್ಲಿ ನಿಂತು ಖುಷಿಪಟ್ಟರಷ್ಟೆ ಅಲ್ಲದೆ ಮೊಬೈಲ್ಗಳಲ್ಲಿ ಆನೆಗಳ ಫೋಟೋ ವಿಡಿಯೋಗಳನ್ನ ಕ್ಲಿಕ್ಕಿಸಿದರು. ಮತ್ತೆ ಹಲವರು ಆನೆಗಳ ಎದುರು ರೀಲ್ಸ್ ಮಾಡಿದರು, ಸದ್ಯ ಶಿವಮೊಗ್ಗದ ಸೋಶಿಯಲ್ ಮೀಡಿಯಾಗಳಲ್ಲಿ ಗಜಪಡೆಯ ವಿಡಿಯೋಗಳು ಸಿನಿಮಾ ಸಾಂಗ್ಗಳ ಜೊತೆಗೆ ವೈರಲ್ ಆಗುತ್ತಿದೆ.
ಈ ಬಾರಿ ಸಕ್ರೆಬೈಲು ಆನೆ ಶಿಬಿರದಿಂದ “ಸಾಗರ್”, “ಬಾಲಣ್ಣ” ಮತ್ತು “ಬಹದ್ದೂರ್” ಎಂಬ ಮೂರು ಆನೆಗಳು ಆಗಮಿಸಿವೆ. ಇವುಗಳನ್ನು ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲಾ ಆವರಣದಲ್ಲಿ ಇರಿಸಲಾಗಿದೆ.
Gajapade Rehearsals Begin for Shivamogga Dasara
Shivamogga Dasara official website,Sakrebailu elephant camp location,Shivamogga Dasara 2025 dates,Vasavi school Shivamogga,Shivamogga Dasara route map, ಶಿವಮೊಗ್ಗ ದಸರಾ, ಗಜಪಡೆ ತಾಲೀಮು, ಸಕ್ರೆಬೈಲು ಆನೆ ಬಿಡಾರ, ಜಂಬೂ ಸವಾರಿ, ದಸರಾ ಆನೆಗಳು,#ShivamoggaDasara, #Gajapade, #JumbooSavari, #Sakrebailu, #DasaraFestival
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
