ಶಿವಮೊಗ್ಗಕ್ಕೆ ಅಚ್ಚರಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ! ಶಾರದಾ ಪೂರ್ಯನಾಯ್ಕ್​ರಿಗೆ ಜೆಡಿಎಸ್​ ನಲ್ಲಿ ಸಿಕ್ತು ಮಹತ್ವದ ಸ್ಥಾನ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ  ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯಕ್ ಗೆ ಪಕ್ಷದಲ್ಲಿ ಅಚ್ಚರಿಯ ಸ್ಥಾನಮಾನವೊಂದು ಲಭ್ಯವಾಗಿದೆ. ಅವರನ್ನ ಜೆಡಿಎಸ್​ ಶಾಸಕಾಂಗ ಪಕ್ಷದ  ಉಪ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.  ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಕಾರ್ಯನಿರ್ವಹಿಸಲಿದ್ದು, ಸದನದಲ್ಲಿ ಉಪ ನಾಯಕಿಯಾಗಿ ಶಾರದಾ ಪೂರ್ಯ ನಾಯ್ಕ್​ ಕೆಲಸ ಮಾಡಲಿದ್ಧಾರೆ. .  

ಹಿರಿಯ ನಾಯಕರ ಸಲಹೆಗಳನ್ನು ಪರಿಗಣಿಸಿ, ಜೆಡಿಎಸ್ ಮೊದಲ ಬಾರಿಗೆ ಮಹಿಳೆಯೊಬ್ಬರು  ಉಪನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಿದೆ.  ಎರಡು ಬಾರಿ ಶಾಸಕಿಯಾಗಿರುವ ಶಾರದಾ ಪೂರ್ಯನಾಯ್ಕ್​ ರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡುವ ಹಿಂದೆ ಪೊಲಿಟಿಕಲ್ ಗೇಮ್​ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ. 

ಇನ್ನೂ  ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಇವತ್ತು  ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾರದಾ ಪೂರ್ಯ ನಾಯ್ಕರನ್ನ ಆಯ್ಕೆ ಮಾಡಲಾಗಿದೆ. 

ಇದೆಲ್ಲದರ ನಡುವೆ ವಿಪಕ್ಷ ನಾಯಕನ ಆಯ್ಕೆಯು ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರನ್ನ ಈ ಸ್ಥಾನಕ್ಕೆ ನೇಮಕ ಮಾಡಲಾಗುತ್ತೆ ಎಂಬ ಚರ್ಚೆಗಳು ಕೇಳಿಬರುತ್ತಿದೆ.  


ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ? ಯಾವ್ಯಾವ ಡ್ಯಾಂಗೆ ಎಷ್ಟೆಷ್ಟು ನೀರು ಹರಿದುಬಂತು! ಇಲ್ಲಿದೆ ವಿವರ

ಶಿವಮೊಗ್ಗ :  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 110.20 ಮಿಮಿ ಮಳೆಯಾಗಿದ್ದು, ಸರಾಸರಿ 15.74 ಮಿಮಿ ಮಳೆ ದಾಖಲಾಗಿದೆ.  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  32.81 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 4.50 ಮಿಮಿ., ಭದ್ರಾವತಿ 4.20 ಮಿಮಿ., ತೀರ್ಥಹಳ್ಳಿ 21.10 ಮಿಮಿ., ಸಾಗರ 33.60 ಮಿಮಿ., ಶಿಕಾರಿಪುರ 08.10 ಮಿಮಿ., ಸೊರಬ 16.40 ಮಿಮಿ. ಹಾಗೂ ಹೊಸನಗರ 22.30 ಮಿಮಿ. ಮಳೆಯಾಗಿದೆ. 

ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು  ಕ್ಯೂಸೆಕ್​ಗಳಲ್ಲಿ: 

ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1741.20 (ಇಂದಿನ ಮಟ್ಟ), 5461.00 (ಒಳಹರಿವು), 1009.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1757.70.  

ಭದ್ರಾ: 186 (ಗರಿಷ್ಠ), 136.10 (ಇಂದಿನ ಮಟ್ಟ), 59.00 (ಒಳಹರಿವು), 209.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 154.30.   

ತುಂಗಾ: 588.24 (ಗರಿಷ್ಠ), 586.11 (ಇಂದಿನ ಮಟ್ಟ), 1948.00 (ಒಳಹರಿವು), 50.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. 

ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 570.50 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 646 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 571.18 (ಎಂಎಸ್‍ಎಲ್‍ಗಳಲ್ಲಿ). 

ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.62 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 316 (ಒಳಹರಿವು), 265.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.20 (ಎಂಎಸ್‍ಎಲ್‍ಗಳಲ್ಲಿ).

 ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 564.24 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 94.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 572.40 (ಎಂಎಸ್‍ಎಲ್‍ಗಳಲ್ಲಿ). 

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 572.10 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.52 (ಎಂಎಸ್‍ಎಲ್‍ಗಳಲ್ಲಿ).


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor