ಹೊಸನಗರ: ಮಣ್ಣಿನಡಿ ಮುಚ್ಚಿಟ್ಟಿದ್ದ ಕೋಟ್ಯಂತರ ಮೌಲ್ಯದ ಬೀಟೆ ನಾಟಗಳು ಜಪ್ತಿ

ಹಂಚಿಕೊಳ್ಳಿ
WhatsApp Facebook X Telegram
Forest Raid llegal Rosewood Trees Seized
Forest Raid llegal Rosewood Trees Seized

Forest Raid ಹೊಸನಗರ :   ಹೊಸನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಮಣ್ಣಿನೊಳಗೆ ರಹಸ್ಯವಾಗಿ ಅಡಗಿಸಿಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ ಮರಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಸ್ಟಕ್ ಆದ ವಿಶಾಲ್ ಮಾರ್ಟ್​ ಲಿಫ್ಟ್​ನಲ್ಲಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಿದ ಶಿವಮೊಗ್ಗ ಅಗ್ನಿಶಾಮಕ ದಳ! ಕಾರ್ಯಾಚರಣೆ ದೃಶ್ಯ ನೋಡಿ!

ಈ ದಂಧೆಯ ಹಿಂದಿರುವ ಬೆಂಗಳೂರು ಮೂಲದ ಪ್ರಮುಖ ಆರೋಪಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಅರಣ್ಯ ಇಲಾಖೆ ತೀವ್ರ ಹುಡುಕಾಟ ಆರಂಭಿಸಿದೆ.

ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ನಂದ್ರಿ ಗ್ರಾಮದ ಸರ್ವೆ ನಂಬರ್ 15 ರ ನಂದ್ರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಒತ್ತುವರಿ ಜಮೀನಿನಲ್ಲಿ ಈ ಕೃತ್ಯ ಎಸಗಲಾಗಿದೆ. ಕಳ್ಳರು ಸುಮಾರು 2 ರಿಂದ 3 ವರ್ಷಗಳ ಹಿಂದೆಯೇ ಬೆಲೆಬಾಳುವ ಬೀಟೆ ಜಾತಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ್ದರು. ಯಾರ ಕಣ್ಣಿಗೂ ಬೀಳದಂತೆ ಅಲ್ಲಿನ ಕೃಷಿ ಹೊಂಡದ ಪಕ್ಕದಲ್ಲೇ 14 ಬೀಟೆ ಮರದ ದೊಡ್ಡ ದೊಡ್ಡ ನಾಟ ತುಂಡುಗಳನ್ನು ಮಣ್ಣಿನೊಳಗೆ ಹೂತು ಹಾಕಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿಗಳು ಜಮೀನಿನ ಮೇಲೆ ಮುಗಿಬಿದ್ದಿದ್ದಾರೆ. ಮಣ್ಣನ್ನು ಅಗೆದು ಒಟ್ಟು 14 ಬೆಲೆಬಾಳುವ ನಾಟಗಳನ್ನು ಹೊರತೆಗೆದು ಇಲಾಖೆಯ ಸುಪರ್ದಿಗೆ ಪಡೆದಿದ್ದಾರೆ.

Forest Raid ಬೀಟೆ ಮರಗಳ ಅಕ್ರಮ ಸಾಗಾಟ ಮತ್ತು ಕಳವು ಯತ್ನಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಟೌನ್‌ನ ಮಂಡಿಬೆಲೆ ರಸ್ತೆ ನಿವಾಸಿಯಾದ ಗಣೇಶ ಬಿನ್ ಬಾಬುಶೆಟ್ಟಿ (40 ವರ್ಷ) ಎಂಬಾತನ ವಿರುದ್ಧ ಹೊಸನಗರ ವಲಯ ಕಚೇರಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ಕಾನೂನು 1969 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳೆದ ಮೇ 18 ರಿಂದಲೇ ಆರೋಪಿ ಗಣೇಶ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿದೆ. ಆರೋಪಿಯ ಸುಳಿವು ಸಿಕ್ಕ ತಕ್ಷಣವೇ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Forest Raid llegal Rosewood Trees Seized

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor